ತರೀಕೆರೆ ಉಪ ವಿಭಾಗ ಮೆಸ್ಕಾಂ ಕಚೇರಿ ಆವರಣದಲ್ಲಿ ಜನಸಂಪರ್ಕ ಸಭೆ
ರೈತರ ಕೃಷಿ ಪಂಪ್ ಸೆಟ್ ಅಕ್ರಮ ಸಕ್ರಮ ಯೋಜನೆ ಸದ್ಬಳಕೆಯಾಲ್ಲ. ಟಿ.ಸಿ. ಅಳವಡಿಸುವಲ್ಲಿ ಅಧಿಕಾರಿಗಳಿಂದ ತಪ್ಪಾಗಿದೆ ಎಂದು ಭಾರತೀಯ ಕಿಸಾನ್ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ್ವರಪ್ಪ.ಕೆ ಆರೋಪಿಸಿದ್ದಾರೆ.
ಗುರುವಾರ ತರೀಕೆರೆ ಉಪ ವಿಭಾಗ ಮೆಸ್ಕಾಂ ಕಚೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಅನುಪಾಲನ ವರದಿ ಮಂಡಿಸುವಾಗ ಮಾತನಾಡಿ ಅಕ್ರಮ ಸಕ್ರಮ ಯೋಜನೆಯಲ್ಲಿ ಜ್ಯೇಷ್ಠತೆ ಅಧಾರದಲ್ಲಿ ಟಿಸಿಗಳನ್ನು ನೀಡಿಲ್ಲ ಸುಣ್ಣದ ಹಳ್ಳಿಯಲ್ಲಿ ಮೂರು ತಿಂಗಳ ಹಿಂದೆ ವಿದ್ಯುತ್ ಅಪಘಾತದಿಂದ 2 ಹಸುಗಳು ತೀರಿಹೋಗಿದೆ. ಸಂಬಂದಿಸಿದ ರೈತರಿಗೆ ಈವರೆಗೆ ಪರಿಹಾರ ನೀಡಿಲ್ಲ. ಭೈರಾಪುರದಲ್ಲಿ ವಿದ್ಯುತ್ ಅಪಘಾತದಿಂದ ಒಂದು ಹಸು ಸತ್ತಿದೆ ಅದಕ್ಕೂ ಪರಿಹಾರ ಕೊಟ್ಟಿಲ್ಲ ಎಂದ ಅವರು ರೈತರ ಸಮಸ್ಯೆ ಪರಿಹರಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ದೋರನಾಳು ಗ್ರಾಮದ ಭಾಗದಲ್ಲಿ ವಿದ್ಯುತ್ ಕಂಬಗಳು ವಾಲಿ, ವೈರುಗಳು ತಗ್ಗಿಗೆ ಬಂದಿದೆ, ಸರಿಪಡಿಸುವುದಾಗಿ ಹೇಳಿ ಮೂರು ತಿಂಗಳಾಯಿತು. ಈವರೆಗೆ ಅಧಿಕಾರಿಗಳು ಗಮನ ಹರಿಸಿಲ್ಲ ಎಂದರು.
ಗುರುಪುರದ ರೈತ ಬಾಲಕೃಷ್ಣ ಮಾತನಾಡಿ ಲಕ್ಕವಳ್ಳಿ ಭಾಗದಲ್ಲಿ ಕೃಷಿ ಸಂಪುಸೆಟ್‌ಗಳಿಗೆ ದಿನಕ್ಕೆ 3 ಗಂಟೆಗಳ ಮಾತ್ರ ವಿದ್ಯುತ್ ನೀಡುತ್ತಿದ್ದು, ಇದರಿಂದ ರೈತರಿಗೆ ಏನೂ ಪ್ರಯೋಜನವಾಗಲ್ಲ. ಇದರಿಂದ ಬೆಳೆಗಳು ಒಣಗಿ ಹೋಗಿವೆ, ಕಡ್ಡಾಯ ವಾಗಿ ನಮಗೆ ಆರು ಗಂಟೆಗಳ ಕಾಲ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿದರು.
ರೈತರು, ಮೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್ ರವಿಕಿರಣ್, ಅಧೀಕ್ಷಕ ಎಂಜನಿಯರ್ ಮಂಜುನಾಥ್, ಎಇಇ ಮಂಜುನಾಥ್, ಸಹಾಯಕ ಎಂಜಿನಿಯರ್ ಅಜಯ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
17ಕೆಟಿಆರ್.ಕೆ.1ಃ