ಪ್ರವಾದಿ ಮುಹಮ್ಮದ್ ಅವರ 1501ನೇ ಜನ್ಮದಿನದ ಅಂಗವಾಗಿ ಬುಧವಾರ ಮುಸ್ಲಿಂರು ಈದ್ ಮಿಲಾದ್-ಉನ್-ನಬಿ ಹಬ್ಬವನ್ನು ಭಕ್ತಿಭಾವದಿಂದ ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.
ಕನ್ನಡಪ್ರಭ ವಾರ್ತೆ ಪಾವಗಡ ಪ್ರವಾದಿ ಮುಹಮ್ಮದ್ ಅವರ 1501ನೇ ಜನ್ಮದಿನದ ಅಂಗವಾಗಿ ಬುಧವಾರ ಮುಸ್ಲಿಂರು ಈದ್ ಮಿಲಾದ್-ಉನ್-ನಬಿ ಹಬ್ಬವನ್ನು ಭಕ್ತಿಭಾವದಿಂದ ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.
ಮೊದಲಿಗೆ ಬೆಳಿಗ್ಗೆ 10ಗಂಟೆಗೆ ನಗರದ ಮಸೀದಿ-ಎ-ಆಜಂನಿಂದ ಜಾಮಿಯಾ ಮಸೀದಿಯವರೆಗೆ ವಿವಿಧ ಪ್ರಾರ್ಥನೆ ಗೀತೆಯೊಂದಿಗೆ ಸಾಮೂಹಿಕ ಮೆರವಣಿಗೆ ನಡೆಸಿ, ಅಲ್ಲಿಂದ ರೊಪ್ಪ ಗ್ರಾಮದತ್ತ ತೆರಳಿದರು. ಈ ವೇಳೆ ಮಸೀದಿ-ಎ-ಆಜಂ ಸಿರಾ ರಸ್ತೆ ನೌ ಜವಾನ್ ಕಮಿಟಿ ವತಿಯಿಂದ ಇಡೀ ವಾರ್ಡಿನ ಸಾರ್ವಜನಿಕರಿಗೆ ಕುಡಿವನೀರು ಹಾಗೂ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು. ಯುವಕರು ಹಾಗೂ ಗ್ರಾಮಸ್ಥರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ,ಪ್ರವಾದಿ ಮುಹಮ್ಮದ್ಅ ವರ ಸಂದೇಶಗಳನ್ನು ಸ್ಮರಿಸಿ, ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶವನ್ನು ಸಾರಿದರು.
ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಯೂನೂಸ್, ಎಂಎಜಿ ಮಹಮ್ಮದ್ ಇರ್ಮಾನ್, ರಿಜ್ವಾನ್ ಉಲ್ಲಾ,ಅಲ್ಪ ಸಂಖ್ಯಾತರ ಘಟಕದ ಷಾಬಾಬು,ಆರ್.ಟಿ.ಖಾನ್,ಸಿಡಿಪಿಒ ಇಲಾಖೆಯ ಸಯ್ಯಾದ್ ರಖೀಬ್, ಹಿದಾಯತ್, ಶಾಕಿರ್,ಪ್ರೆಸ್ ಸುಲೈಮಾನ್, ಮುಬಾಶೀರ್, ಪತ್ರಕರ್ತ ಇರ್ಮಾನ್,ರಫೀಕ್, ಪುರಸಭೆಯ ರಿಯಾಜ್, ನವೀದ್, ಮುಜಾ ಮಾಹಿದ್, ಕಲೀಮ್, ಖಲೀಲ್ ಮುಬಾರಕ್ ಮುನ್ನ ಇಂತು,ಸದ್ದಾಂ ಬಾಬಾ,ಅಮಾದ್,ಸಾಧಿಕ್ ಇತರೆ ಅನೇಕ ಮಂದಿ ಗಣ್ಯರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.