ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಗರುನಾಥ ಗಡ್ಡೆ ಪೂಜ್ಯರ ಕುರಿತು ಮಾತನಾಡಿ. ನಾಡೋಜ ಡಾ.ಬಸವಲಿಂಗ ಪಟ್ಟದೇವರು. ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಹರಿಕಾರರು ಅವರ ಸ್ಥಾಪಿಸಿದ ಶಿಕ್ಷಣ ಸಂಸ್ಥೆಯಲ್ಲಿ 20 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಗಡಿಭಾಗದಲ್ಲಿ ಗುಣಾತ್ಮಕ ಹಾಗೂ ಸಂಸ್ಕಾರ ಸಹಿತ ಶಿಕ್ಷಣ ನೀಡುವ ಜೊತೆಗೆ ಮಕ್ಕಳಲ್ಲಿ ಬಸವತತ್ವದ ಅರಿವು ಮೂಡಿಸುತ್ತಿದ್ದಾರೆ. ಪೂಜ್ಯರು ಕರ್ನಾಟಕ ಅಷ್ಟೆ ಅಲ್ಲದೆ ಮಹಾರಾಷ್ಟ್ರ, ತೆಲಂಗಾಣದಲ್ಲಿ ಸಂಚರಿಸಿ ಬಸವಧರ್ಮ ಪ್ರಸಾರ ಮಾಡುತ್ತಿದ್ದಾರೆ ಶರಣ ಸಾಹಿತ್ಯದ ಕುರಿತು ಮಾರಾಠಿಯಲ್ಲಿ 20ಕ್ಕಿಂತ ಹೆಚ್ಚಿನ ಗ್ರಂಥಗಳನ್ನು ಹಾಗೂ ತೆಲುಗು ಭಾಷೆಯಲ್ಲಿ 30ಕ್ಕಿಂತ ಹೆಚ್ಚಿನ ಗ್ರಂಥಗಳನ್ನು ಪ್ರಕಟಿಸಿರುವುದು ಐತಿಹಾಸಿಕ ಸಾಧನೆಯಾಗಿದೆ. ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪದ ನಿರ್ಮಾಣದಲ್ಲಿ ಪೂಜ್ಯರ ಪರಿಶ್ರಮ ಅಪಾರವಿದೆ ಪೂಜ್ಯರು ಅನಾಥ ಮಕ್ಕಳ ಬಾಳಿನ ಬೆಳಕಾಗಿದಾರೆ ಎಂದರು.
ಬಸವ ಮಹಾಮನೆಯ ಅಕ್ಕನಾಗಲಾಂಬಿಕೆ ಬಾಲಕಿ / ಬಾಲಕರ ಬಾಲಮಂದಿರದ ಸುದೈವಿ ಮಕ್ಕಳನ್ನು ಟಾವೇಲ್ ನೋಟ್‌ಬುಕ್ ಹಾಗೂ ಪೆನ್ ನೀಡಿ ಗೌರವಿಸಲಾಯಿತು. ಪೂಜ್ಯ ಹಾಲಮ್ಮತಾಯಿ, ಡಾ.ಎಸ್.ಬಿ.ದುರ್ಗೆ, ಎಸ್.ಎಸ್.ನಾಗರಾಳೆ, ಸಿದ್ದಣ್ಣಾ ಭೂಮಾ, ನಿರ್ಮಲಾ ಶಿವಣಕರ್, ಶ್ರೀಶೈಲ ಬಿರಾದಾರ, ಮಹಾದೇವಪ್ಪಾ ಇಜಾರೆ, ಸಿದ್ರಾಮೇಶ್ವರ ಚೀದ್ರೆ, ಶುಶೀಲ ಜಿವಣೆ, ಜಕ್ಕಪ್ಪಾ ಬಿರಾದಾರ, ಶ್ರೀದೇವಿ ಭೂಮಾ. ಸೋನಾಲಿ ನೀಲಕಂಠೆ, ಗೌರಮ್ಮ ಸೋನಾಳೆ, ಆಶೋಕ ಕುಂಬಾರ, ಶೀವರಾಜ ನೀಲಕಂಠೆ, ಲಕ್ಷ್ಮೀಬಾಯಿ ದಸ್ತಾಪೂರೆ, ಸರಸ್ವತಿ ಪಾಟೀಲ, ರಾಣಿ ವಡ್ಡೆ, ಗೌರಮ್ಮ ಉಪಸ್ಥಿತರಿದ್ದರು.