ಹರಪನಹಳ್ಳಿ: ಜನರ ಆರ್ಥಿಕ ಸ್ಥಿತಿ, ಗತಿ ತಿಳಿದು ಅದಕ್ಕೆ ತಕ್ಕ ಹಾಗೆ ಸೌಲಭ್ಯ ಒದಗಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಕಾರ್ಯ ಆರಂಭಿಸಿದೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದ್ದಾರೆ.
ಗಣಿತಿದಾರರು ಮನೆ ಬಾಗಿಲಿಗೆ ಆಗಮಿಸಿದಾಗ ಸಾರ್ವಜನಿಕರು ಸಹಕರಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು.
ವೀರಶೈವ ಲಿಂಗಾಯುತರು ಜಾತಿ ಕಲಂನಲ್ಲಿ ವೀರಶೈವ ಲಿಂಗಾಯುತ ಎಂತಲೂ ಉಪ ಜಾತಿ ಕಲಂ ನಲ್ಲಿ ಅವರವರ ಒಳಪಂಗಡ ಜಾತಿಗಳನ್ನು ಬರೆಸಿ ಎಂದು ತಿಳಿಸಿದರು.ಧರ್ಮದ ಬಗ್ಗೆ ಹೇಳುವಷ್ಟು ನಾನು ದೊಡ್ಡವಳಲ್ಲ. ನಾನು ವೈಯಕ್ತಿಕವಾಗಿ ಹಿಂದೂಗಳು ಎಂದು ಹೇಳಲು ಇಷ್ಟ ಪಡುತ್ತೇನೆ. ಆದರೆ ಅಖಿಲ ಭಾರತ ವೀರಶೈವ ಮಹಾಸಭಾ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧಳಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು.
ತಹಶೀಲ್ದಾರ ಬಿ.ವಿ.ಗಿರೀಶಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ತಾಪಂ ಇಒ ಚಂದ್ರಶೇಖರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಭೀಮಪ್ಪ, ಪುರಸಭಾ ಸದಸ್ಯರುಗಳಾದ ಅಬ್ದುಲ್ ರಹಿಮಾನ್ ಸಾಹೇಬ್, ಉದ್ದಾರ ಗಣೇಶ, ಲಾಟಿದಾದಾಪೀರ, ಗ್ಯಾರಂಟಿ ಅನುಷ್ಟಾನ ಸಮಿತಿ ತಾಲೂಕು ಅಧ್ಯಕ್ಷ ಉದಯಶಂಕರ, ಬಿಸಿಎಂ ಕಚೇರಿ ಯ ಸಿದ್ದೇಶ , ಸಿಆರ್ ಪಿ.ಎಚ್.ಸಲೀಂ, ಗಣತಿದಾರಿರ್ತಿ ಸಾವಿತ್ರಮ್ಮ, ಶಿಕ್ಷಕ ಶಿವಶಂಕರ, ಮತ್ತೂರು ಬಸವರಾಜ ಇತರರು ಉಪಸ್ಥಿತರಿದ್ದರು.