ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ 34ನೇ ನುಡಿಹಬ್ಬ (ಘಟಿಕೋತ್ಸವ)ದಲ್ಲಿ ನಾಡಿನ ಇಬ್ಬರು ಸಾಧಕರಾದ ಶತಾಯುಷಿ ಪ್ರೊ. ಸಿ. ಮಹಾದೇವಪ್ಪ, ದಕ್ಷ ಆಡಳಿತಗಾರ ಡಾ. ಎಚ್.ಸಿ. ಸತ್ಯನ್ ಅವರಿಗೆ ಕುಲಾಧಿಪತಿ ಥಾವರಚಂದ್ ಗೆಹಲೋತ್ ಅವರು ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಗೌರವ ಪದವಿ ನೀಡಿ ಗೌರವರಿಸಿದರು.
ಶಿಕ್ಷಣತಜ್ಞ ಡಾ. ಜಿ. ರಾಮಕೖಷ್ಣ ಸಮಾರಂಭದಲ್ಲಿ ಗೈರಾಗಿದ್ದರು. ಹೀಗಾಗಿ ಅವರ ನಿವಾಸಕ್ಕೆ ತೆರಳಿ ನಾಡೋಜ ಗೌರವ ಪದವಿ ಪ್ರದಾನ ಮಾಡಲಾಗುತ್ತದೆ. ಉನ್ನತ ಶಿಕ್ಷಣ ಸಚಿವರು, ಸಮಕುಲಾಪಧಿಪತಿ ಆಗಿರುವ ಡಾ. ಎಂ.ಸಿ. ಸುಧಾಕರ ಅವರು 107 ವಿದ್ಯಾರ್ಥಿಗಳಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಿದರು.
2022-23ನೇ ಸಾಲಿನ 76 ವಿದ್ಯಾರ್ಥಿಗಳಿಗೆ ಮತ್ತು 2023-24ನೇ ಸಾಲಿನ 123 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ವಿತರಿಸಿದರು. ವಿಶ್ರಾಂತ ಪ್ರಾಧ್ಯಾಪಕ ಮತ್ತು ಸಂಸ್ಕೃತಿ ಚಿಂತಕ ಡಾ. ಕೆ. ಮರುಳಸಿದ್ದಪ್ಪ ಅವರು ಘಟಿಕೋತ್ಸವ ಭಾಷಣ ಮಾಡಿದರು.ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಸ್ವಾಗತ ಭಾಷಣ ಮಾಡಿದರು. ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಸೇರಿದಂತೆ ನಾನಾ ವಿಭಾಗಗಳ ಮುಖ್ಯಸ್ಥರು, ಡೀನ್‌ಗಳು, ಕೆಲ ಸಿಂಡಿಕೇಟ್ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಸಿಂಡಿಕೇಟ್‌ನ ಕೆಲ ಸದಸ್ಯರು ಗೈರಾಗಿದ್ದು ಎದ್ದುಕಾಣುತ್ತಿತ್ತು.
ಹಬ್ಬದ ವಾತಾವರಣ
ನುಡಿ ಹಬ್ಬದಲ್ಲಿ ನಾನಾ ವಿಭಾಗದಲ್ಲಿ 107 ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಪಡೆದರು. ಇದರಲ್ಲಿ ಭಾಷಾ ನಿಕಾಯದ 62, ಸಮಾಜ ವಿಜ್ಞಾನಗಳ ನಿಕಾಯದ 43, ಲಲಿತಕಲೆಗಳ ನಿಕಾಯದ ಇಬ್ಬರು ಸೇರಿ ಒಟ್ಟು 107 ವಿದ್ಯಾರ್ಥಿಗಳು ಪಿಎಚ್ ಡಿ ಪದವಿ ಪಡೆದರು. 2022-23ನೇ ಸಾಲಿನ ಸ್ನಾತಕೋತ್ತರ ಪದವಿಯನ್ನು 76 ವಿದ್ಯಾರ್ಥಿಗಳು ಮತ್ತು 2023-24ನೇ ಸಾಲಿನ ಸ್ನಾತಕೋತ್ತರ ಪದವಿಯನ್ನು 123 ವಿದ್ಯಾರ್ಥಿಗಳು ಪಡೆದುಕೊಂಡರು.ಬಣ್ಣ ಬಣ್ಣದ ವಿದ್ಯುತ್ ದೀಪಹಂಪಿ ವಿವಿಯ ಆವರಣದಲ್ಲಿ ಹಚ್ಚ ಹಸಿರಿನ ಗಿಡಮರಗಳಿಗೆ ಬಣ್ಮ ಬಣ್ಣದ ವಿದ್ಯುತ್ ದೀಪ ಅಳವಡಿಸಲಾಗಿತ್ತು. ವಿವಿಯ ವಿದ್ವಾಂಸರು, ಅಧ್ಯಾಪಕರು, ಹಾಗೂ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ನುಡಿ ಹಬ್ಬವನ್ನು ವೈಭವದಿಂದ ಮತ್ತು ಸಡಗರ ಸಂಭ್ರಮದಿಂದ ಆಚರಿಸಿದರು