ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮಾಜಿ ಸಚಿವ ದಿವಂಗತ ಎಚ್. ಸಿ. ಶ್ರೀಕಂಠಯ್ಯನವರು ಜನಿಸಿ ಜುಲೈ ೧೮ಕ್ಕೆ ೧೦೦ವರ್ಷ ಭರ್ತಿಗೊಳ್ಳುವ ಹಿನ್ನಲೆಯಲ್ಲಿ ಅವರ ಜನ್ಮಶತಮಾನೋತ್ಸವವನ್ನು ಅವರ ಕುಟುಂಬ ಸದಸ್ಯರಾದ ಕರ್ನಾಟಕ ವಿದ್ಯುಚಕ್ತಿ ಕಾರ್ಖಾನೆ ಅಧ್ಯಕ್ಷ ಎಚ್. ಸಿ. ಲಲಿತ್ ರಾಘವ್ ನೇತೃತ್ವದಲ್ಲಿ ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಸೇರಿ ಪಟ್ಟಣದಲ್ಲಿ ವಿವಿಧ ಜನಪರ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಹುಟ್ಟುಹಬ್ಬದ ಆಚರಣೆ ಮಾಡಿದರು. ಪಟ್ಟಣದಲ್ಲಿನ ೨೦೦ ಮಂದಿ ಪೌರಕಾರ್ಮಿಕರು, ಕಸಬಾ ಹೋಬಳಿ ವ್ಯಾಪ್ತಿಯ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಪಟ್ಟಣದ ಎಚ್. ಸಿ. ಶ್ರೀಕಂಠಯ್ಯ ಸಭಾಂಗಣದಲ್ಲಿ ಹೊಸ ವಸ್ತ್ರ ವಿತರಣೆ ನೀಡಿ ಸಿಹಿ ಹಂಚಿಕೆ ಮಾಡಲಾಯಿತು. ಶ್ರೀಕಂಠಯ್ಯನವರ ಹುಟ್ಟಹಬ್ಬದ ಸಲುವಾಗಿ ಬೃಹತ್ ಕೇಕ್ ಕತ್ತರಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿ, ಕರ್ನಾಟಕ ವಿದ್ಯುಚಕ್ತಿ ಕಾರ್ಖಾನೆ ಅಧ್ಯಕ್ಷ ಎಚ್. ಸಿ. ಲಲಿತ್‌ರಾಘವ್, ನಮ್ಮ ತಾತನವರ ನೂರನೇ ವರ್ಷದ ಹುಟ್ಟುಹಬ್ಬವನ್ನು ಚಿರಸ್ಮರಣೆಯಾಗಿಸಬೇಕು ಎನ್ನುವ ಉದ್ದೇಶದೊಂದಿಗೆ ನಮ್ಮ ಕುಟುಂಬ ಮತ್ತು ಹೆಚ್.ಸಿ.ಶ್ರೀಕಂಠಯ್ಯ ಸೇವಾಸಮಿತಿ ಸೇರಿ ಹಲವು ಕಾರ್ಯಕ್ರಮಗಳನ್ನು ರೂಪಸಿದ್ದೇವೆ. ತಾಲೂಕಿನ ವಿದ್ಯಾವಂತ ಯುವಕರಿಗೆ ಕೌಶಲ್ಯ ಕಲಿಸುವ ನಿಟ್ಟಿನಲ್ಲಿ ಬಾಲ್ಕ್ ಸಂಸ್ಥೆಯ ಸಹಯೋಗದಲ್ಲಿ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್, ಪರ್ಸನಾಲಿಟಿ ಡೆವಲಪ್‌ಮೆಂಟ್ ತರಬೇತಷ್ಕೊನೀಡಿಸುವುದು, ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿ ಅಣ್ಣಯ್ಯ ಕಪ್ ಅಯೋಜಿಸಲಾಗಿತ್ತು. ಇದೀಗ ತಾಲ್ಲೂಕಿನ ಎಲ್ಲ ಆಶಾ, ಅಂಗನವಾಡಿ, ಪೌರಕಾರ್ಮಿಕರಿಗೆ ವಸ್ತ್ರ ಕಿಟ್ ವಿತರಣೆಯೊಂದಿಗೆ ಆಸ್ಪತ್ರೆ ರೋಗಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.ಹುಟ್ಟುಹಬ್ಬ ಆಚರಣೆಯಲ್ಲಿ ಭಾಗವಹಿಸಿದ್ವ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮಾತನಾಡಿ, ಒಬ್ಬ ಮನುಷ್ಯ ನಮ್ಮ ಮಧ್ಯೆ ಇಲ್ಲದಾಗ ಅವರ ಮೌಲ್ಯ ತಿಳಿಯುವಂತೆ ಶ್ರೀಕಂಠಯ್ಯನವರು ಏನೆಂಬುದು ಇಡೀ ತಾಲೂಕಿಗೆ ಅವರ ಅಭಿವೃದ್ಧಿ ಕೆಲಸಗಳು ಅವರ ಮೌಲ್ಯವನ್ನು ಇಡೀ ಜಿಲ್ಲೆಗೆ ತೋರಿಸಿವೆ. ಅವರ ಸಾಧನೆಗಳನ್ನು ತಾಲೂಕಿನ ಜನ ಎಂದಿಗೂ ಮರೆಯಬಾರದು, ಇಂದಿನ ಯುವಕರಿಗೆ ಶ್ರೀಕಂಠಯ್ಯನವರ ಕೊಡುಗೆ ಏನೆಂಬುದನ್ನು ಅವರ ಮೊಮ್ಮಕ್ಕಳಾದ ಲಲಿತ್ ರಾಘವ್, ನವನೀಶ್ ತೋರಿಸುತ್ತಿದ್ದಾರೆ. ಯುವ ರಾಜಕಾರಣಿಯಾಗಿರುವ ಲಲಿತ್ ರಾಘವ್ ತಮ್ಮ ತಾತನ ಆದರ್ಶಗಳನ್ನು, ಜನಪರ ಕಾಳಜಿಯನ್ನು ಬೆಳೆಸಿಕೊಂಡು ರಾಜಕೀಯದಲ್ಲಿ ಮೇಲ್ವರ್ಗಕ್ಕೆ ಬರಬೇಕೆಂದು ಆಶಿಸಿದರು.