ಕೇಂದ್ರ ಬಜೆಟ್‌ ದೇಶದ ಭವಿಷ್ಯ ನಿರ್ಮಾಣಕ್ಕೆ ಭದ್ರ ಬುನಾದಿ: ತೇಲ್ಕೂರ

KannadaprabhaNewsNetwork | Published : Feb 2, 2024 1:02 AM

ಸಾರಾಂಶ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಆಯವ್ಯಯವು ಭಾರತದ ದೇಶದ ಭವಿಷ್ಯ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದಂತಿದೆ ಎಂದು ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಆಯವ್ಯಯವು ಭಾರತದ ದೇಶದ ಭವಿಷ್ಯ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದಂತಿದೆ ಎಂದು ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು, 2047ನೇ ಇಸವಿಗೆ ವಿಕಸಿತ ಭಾರತ ನಿರ್ಮಾಣದ ಗುರಿ, ವಿಶ್ವದಲ್ಲೇ 3ನೇ ಬಲಾಢ್ಯ ಆರ್ಥಿಕ ಶಕ್ತಿ ಆಗಬೇಕೆಂದು ಸಂಕಲ್ಪದ ಕಡೆ ದಿಟ್ಟ ಹೆಜ್ಜೆಯನ್ನು ಈ ಬಜೆಟ್‍ನಲ್ಲಿ ಕೊಟ್ಟಿದ್ದಾರೆ.

ಈ ಬಜೆಟ್‍ನಲ್ಲಿ ಅತಿ ಹೆಚ್ಚು ಹಣವನ್ನು ಮೂಲ ಸೌಕರ್ಯಕ್ಕೆ ಒದಗಿಸಲಾಗಿದೆ. ಸಂಕಲ್ಪದ ನಡೆಗೆ ದಿಟ್ಟ ಹೆಜ್ಜೆಯನ್ನು ಈ ಬಜೆಟ್‍ನಲ್ಲಿ ಇಟ್ಟಿದ್ದಾರೆಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. 5,44,000 ಕೋಟಿ ರು.ಗಳನ್ನು ರಸ್ತೆ, ರೈಲು, ಸಮುದ್ರಯಾನ ಮತ್ತು ವಿಮಾನ ಯಾನ ಕ್ಷೇತ್ರದ ಸಂಪರ್ಕಕ್ಕೆ ಕೊಟ್ಟಿದ್ದಾರೆ. ದೇಶದ ಸುರಕ್ಷತೆಗೆ ಅತಿ ಹೆಚ್ಚು ಒತ್ತನ್ನು ಕೊಟ್ಟಿದ್ದಾರೆ.

ದೇಶದ ಯುವಜನಾಂಗದ ಆಶಾಭಾವನೆಗಳಿಗೆ ತಕ್ಕಂತೆ ಈ ಬಜೆಟ್‍ನಲ್ಲಿ ತಂತ್ರಜ್ಞಾನ, ವಿಜ್ಞಾನ, ಸಂಶೋಧನೆಗೆ ಸ್ವತಂತ್ರ ಭಾರತದಲ್ಲಿ ಪ್ರಥಮ ಬಾರಿ 1,15,000 ಕೋಟಿಯನ್ನು ಮೀಸಲಿಟ್ಟಿದ್ದಾರೆ. ರೈತರಿಗೆ ಪ್ರಧಾನಮಂತ್ರಿಯವರು ಕಿಸಾನ್ ಯೋಜನೆ ಮುಂದುವರೆಸಿದ್ದಾರೆ. 11 ಕೋಟಿಗೂ ಹೆಚ್ಚು ರೈತರಿಗೆ ಇದರಿಂದ ಪ್ರಯೋಜನ ಸಿಗುತ್ತಿದೆ. ಫಸಲ್ ಬಿಮಾ ಯೋಜನೆಯಲ್ಲಿ ಸುಮಾರು 4 ಕೋಟಿಗಿಂತ ಹೆಚ್ಚು ರೈತರಿಗೆ ಸಹಾಯ ಮಾಡಿದ್ದನ್ನು ಪ್ರಸ್ತಾಪ ಮಾಡಿದ್ದಾರೆ.

ಯುಪಿಎ ಸರಕಾರದ 10 ವರ್ಷಗಳ ಅವಧಿಯಲ್ಲಿ (2004-14) ಕರ್ನಾಟಕಕ್ಕೆ 61 ಸಾವಿರ ಕೋಟಿ ಅನುದಾನ (ಗ್ರಾಂಟ್ ಇನ್ ಎಯ್ಡ್) ಕೊಟ್ಟಿತ್ತು. ನರೇಂದ್ರ ಮೋದಿಜೀ ಅವರ 10 ವರ್ಷಗಳ ಆಡಳಿತಾವಧಿಯಲ್ಲಿ ಕರ್ನಾಟಕಕ್ಕೆ ಕೊಟ್ಟ ಅನುದಾನ 2,36,000 ಕೋಟಿ ಎಂದು ಗಮನ ಸೆಳೆದರು. ಅಷ್ಟೇ ಅಲ್ಲದೆ ತೆರಿಗೆ ಪಾಲು (ಟ್ಯಾಕ್ಸ್ ಇನ್ ಡೆವೊಲ್ಯೂಷನ್) ಹಿಂದೆ ಯುಪಿಎ ಸರಕಾರ 10 ವರ್ಷಗಳಲ್ಲಿ ಕೇವಲ 82 ಸಾವಿರ ಕೋಟಿ ಕೊಟ್ಟಿತ್ತು. ಮೋದಿಯವರ ಎನ್‍ಡಿಎ ಸರಕಾರವು 10 ವರ್ಷಗಳಲ್ಲಿ ಈ ಸಂಬಂಧ 2,82,000 ಕೋಟಿ ಕೊಟ್ಟಿದೆ ಎಂದು ತೇಲ್ಕೂರ್‌ ತೂಲನಾತ್ಮಕ ಅಭಿಮತ ಹೊರಹಾಕಿದ್ದಾರೆ.

Share this article