ಆತ್ಮಬಲ ಬೆಳೆಸಿಕೊಳ್ಳಬೇಕು: ಬಸವಲಿಂಗ ಪಟ್ಟದೇವರು

KannadaprabhaNewsNetwork |  
Published : Feb 02, 2024, 01:01 AM ISTUpdated : Feb 02, 2024, 01:02 AM IST
ಪೋಟೋ ಕ್ಯಾಪ್ಪನ್ : 1ಜಿಬಿ7ಭಾಲ್ಕಿ ಹಿರೇಮಠದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರಿಗೆ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಡಾ.ದಾಕ್ಷಾಯಣಿ ಎಸ್.ಅಪ್ಪ. ಬಸವರಾಜ ದೇಶಮುಖ  ಸನ್ಮಾನಿಸಿದರು. ಡಾ.ನೀಲಾಂಬಿಕಾ ಶೇರಿಕಾರ, ಶ್ರೀಮತಿ ಜಾನಕಿ ಹೊಸೂರ್, ಡಾ.ಸೀಮಾ ಪಾಟೀಲ, ಡಾ.ಪುಟ್ಟಮಣಿ ದೇವಿದಾಸ ಇದ್ದರು.  | Kannada Prabha

ಸಾರಾಂಶ

ವಿದ್ಯಾರ್ಥಿಗಳು ಆತ್ಮಬಲ ಬೆಳೆಸಿಕೊಳ್ಳಬೇಕು ಅದರಿಂದ ಯಶಸ್ಸು ಸಾದ್ಯ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರು ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ವಿದ್ಯಾರ್ಥಿಗಳು ಆತ್ಮಬಲ ಬೆಳೆಸಿಕೊಳ್ಳಬೇಕು ಅದರಿಂದ ಯಶಸ್ಸು ಸಾದ್ಯ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರು ಹೇಳಿದರು.

ಇಲ್ಲಿನ ಅಪ್ಪ ಸ್ಮರಣಾರ್ಥ ಭವನದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯ ವತಿಯಿಂದ ಕಲಾವಾಣಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಆಶೀರ್ವಚನ ನೀಡಿದರು.

ಒಳ್ಳೆಯ ಆದರ್ಶ ಹಾಗೂ ಸದ್ಗುಣದಿಂದ ದೊಡ್ಡ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಪ್ರಯತ್ನ ಹಾಗೂ ಪರಿಶ್ರಮವಿಲ್ಲದೆ, ಏನನ್ನು ಸಾಧಿಸಲು ಆಗುವುದಿಲ್ಲ. ಆದರಿಂದ, ವಿದ್ಯಾರ್ಥಿಗಳು ಸಮಯವನ್ನು ಸರಿಯಾಗಿ ಸದುಪಯೋಗ ಪಡೆಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಸಮಯದ ಉಪಯೋಗದಿಂದ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಉತ್ಸಾಹದಿಂದ ಇರಬೇಕು. ನಿರುತ್ಸಾಹ ಮಾತಿನಿಂದ ಸಾಧಿಸಲು ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಲವಲವಿಕೆಯಿಂದ ಮುನ್ನುಗ್ಗಬೇಕು. ಉನ್ನತ ಜೀವನಕ್ಕೆ ಯಾರು ಕೀಳರಿಮೆ ಇಲ್ಲದಂತೆ ಬದುಕಬೇಕು. ವ್ಯಕ್ತಿತ್ವ ಕೇಳಮುಖವಾಗದೆ, ಮೇಲ್ಮುಖವಾಗಿರಬೇಕು. ನಮ್ಮಲ್ಲಿನ ಆಧ್ಯಾತ್ಮಿಕ ಶಕ್ತಿಯಿಂದ ಧಾರ್ಮಿಕ ಸಂಸ್ಕಾರ ಬೆಳಸಕೊಳ್ಳಬೇಕು. ನಿತ್ಯ ಪರಮಾತ್ಮನಿಗೆ ನಮಿಸಿದರೆ ಭವಿಷ್ಯದಲ್ಲಿ ಯಶಸ್ಸು ಶತಸಿದ್ದ ಎಂದು ಆಶೀರ್ವಚನ ನೀಡಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್ ಡಾ.ದಾಕ್ಷಾಯಣಿ ಅಪ್ಪ ಮಾತನಾಡಿ, ಅಹಂಕಾರವಿಲ್ಲದೆ ಧರ್ಮ ಕಾರ್ಯ, ಅರಿವಿನ ದಾಸೋಹ ಮಾಡುತ್ತಿರುವವರು ಡಾ.ಬಸವಲಿಂಗ ಪಟ್ಟದೇವರು. ತಬ್ಬಲಿ ಮಕ್ಕಳಿಗೆ ಮಡಿಲಾಗಿ ಸಲಹುತ್ತಿದ್ದಾರೆ. ಸಂಸ್ಕೃತಿ, ಸಂಸ್ಕಾರದ ರಾಯಭಾರಿಯಾಗಿದ್ದಾರೆ. ಅವರ ಬಸವ ಮಾರ್ಗವನ್ನು ನಾವೆಲ್ಲರೂ ಅನುಸರಿಸಬೇಕು ಎಂದರು.

ಶರಣಬಸವೇಶ್ವರ ದೇವಸ್ಥಾನ ಆವರಣ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ, ಐಕ್ಯೂಎಸಿ ಸಂಯೋಜಕಿ ಡಾ.ಪುಟ್ಟಮಣಿ ದೇವಿದಾಸ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಶರಣಬಸವ ವಿವಿ ಕನ್ನಡ ವಿಭಾಗದ ಮುಖ್ಯಸ್ಥರಾದ ಕಲ್ಯಾಣರಾವ್ ಪಾಟೀಲ್, ದೂರದರ್ಶನ ಕಲಾವಿದ ನವಲಿಂಗ ಪಾಟೀಲ್ ಮಾತನಾಡಿದರು.

ಮಹಾವಿದ್ಯಾಲಯದ ಪ್ರಾಚಾರ್ಯರಾದ ಜಾನಕಿ ಹೊಸೂರು ವಂದಿಸಿದರು. ಕಲಾವಾಣಿ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಡಾ. ಸೀಮಾ ಪಾಟೀಲ್, ಸಂತೋಷಿ ಹಿಪ್ಪರಗಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಕೃಪಾಸಾಗರ ಹಾಗೂ ಗೋದುತಾಯಿ ಪದವಿ ಮಹಿಳಾ ಮಹಾವಿದ್ಯಾಲಯದ ಕಲಾವಾಣಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಮಹಾಲಕ್ಷ್ಮಿ, ಭಾಗ್ಯ, ಸುಸ್ಮಿತಾ ಸೇರಿ ಅನೇಕರು ಇದ್ದರು.

PREV

Recommended Stories

ಫಾರಿನ್‌ಗೆ ಅನ್ನಭಾಗ್ಯ ಅಕ್ಕಿ 2 ರೈಸ್‌ಮಿಲ್‌ ಜಫ್ತಿ: ಕೇಸು
ಮುಂದೇಕೆ, ಈಗ್ಲೆ ಮುಸ್ಲಿಂ ಆಗ್ಬಿಡಿ : ಬಿಜೆಪಿಗರ ಕಿಡಿ