ದೇಶವನ್ನು ನಶೆ ಮುಕ್ತಗೊಳಿಸಲು ಕೇಂದ್ರ ಪಣ

KannadaprabhaNewsNetwork |  
Published : Apr 26, 2026, 02:15 AM IST
000 | Kannada Prabha

ಸಾರಾಂಶ

ದೇಶವನ್ನು ನಶೆ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಕಲ್ಪ ಮಾಡಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು ದೇಶವನ್ನು ನಶೆ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಕಲ್ಪ ಮಾಡಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು. ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಅಮಾನಿಕೆರೆಯ ಗಾಜಿನ ಮನೆವರೆಗೆ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್.ಬಿ.ಸಿ. ಅವರ ನೇತೃತ್ವದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ, ಕರ್ನಾಟಕಕ್ಕೆ ಸಂಯೋಜನೆಗೊಳಪಟ್ಟಿರುವ ಕಾಲೇಜುಗಳ ಸಂಘ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ದಿಶಾ ಬೋಧ ಫೌಂಡೇಶನ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಹಾಗೂ ಭಾರತೀಯ ವೈದ್ಯಕೀಯ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಭಾರತ ಶ್ರೇಷ್ಠ ಭಾರತ, ಯುವ ಶುದ್ಧಿ ಅಭಿಯಾನ, ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್, ಅಂಗಾಂಗ ದಾನ ಅಭಿಯಾನ ಹಾಗೂ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಷ್ಟ್ರ ಮತ್ತು ರಾಜ್ಯಗಳನ್ನು ಡ್ರಗ್ಸ್ ಮುಕ್ತಗೊಳಿಸಲು ಕೇಂದ್ರ ಸರ್ಕಾರ ಪಣ ತೊಟ್ಟಿದೆ. ಸದೃಢ ಭಾರತ ಕಟ್ಟುವುದು ಪ್ರಧಾನಿ ನರೇಂದ್ರ ಮೋದಿಯವರು ಸಂಕಲ್ಪವಾಗಿದೆ ಎಂದರು. ದೇಶದ ವ್ಯವಸ್ಥೆಯನ್ನು ಮತ್ತಷ್ಟು ಬಲಾಢ್ಯಗೊಳಿಸಲು ಮುಂದಿನ ಪೀಳಿಗೆ ಸಶಕ್ತರಾಗಬೇಕಿದೆ. ಮುಂದಿನ ದಿನಗಳಲ್ಲಿ ದೇಶದ ಸಮಗ್ರತೆಗೆ ನಶೆ ಮುಕ್ತ ಅಭಿಯಾನ ವಾಕಥಾನ್ ಸಹಕಾರಿಯಾಗಲಿದೆ ಎಂದರು.

ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಪ್ರಸ್ತುತ ಶಿಕ್ಷಣ ಎಷ್ಟು ಅವಶ್ಯಕತೆ ಇದೆಯೋ ಆರೋಗ್ಯವೂ ಅಷ್ಟೇ ಅವಶ್ಯಕತೆ. ದೃಹಿಕವಾಗಿ ಸದೃಢವಾಗಿದ್ದರೆ ಅದನ್ನು ಆರೋಗ್ಯ ಎಂದು ಕರೆಯಲು ಸಾಧ್ಯವಿಲ್ಲ. ಹಾಗಾಗಿ ಮನುಷ್ಯ ಭೌತಿಕವಾಗಿ, ಸಾಮಾಜಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿದ್ದರೆ ಮಾತ್ರ ಆರೋಗ್ಯವಂತನಾಗಿದ್ದಾನೆ ಎಂದು ಕರೆಯಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜ್ಯೋತಿಗಣೇಶ್ ಮಾತನಾಡಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ನಶೆ ಮುಕ್ತ ಭಾರತ, ಯುವ ಶುದ್ಧಿ ಅಭಿಯಾನ ವಾಕಥಾನ್ ಉತ್ತಮ ಕಾರ್ಯಕ್ರಮವಾಗಿದ್ದು, ಈ ಅಭಿಯಾನ ಯಶಸ್ವಿಯಾಗಲಿ ಎಂದರು.

ಶಾಸಕ ಡಾ. ರಂಗನಾಥ್ ಮಾತನಾಡಿ, ಯುವ ಜನತೆ ದುಶ್ಚಟಗಳಿಂದ ದೂರ ಉಳಿದು ಬದುಕು ಕಟ್ಟಿಕೊಳ್ಳಬೇಕು. ಬದುಕಿನ ಹಲವಾರು ಜಂಜಾಟಗಳ ಮಧ್ಯೆ ಯುವ ಜನತೆ ದುಶ್ಚಟಗಳ ದಾಸರಾಗುತ್ತಿದ್ದಾರೆ. ಇದರಿಂದ ಯುವಕರನ್ನು ಮುಕ್ತರಾಗಿಸುವ ನಿಟ್ಟಿನಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿವಿ ಹಮ್ಮಿಕೊಂಡಿರುವ ನಶೆ ಮುಕ್ತ ಭಾರತ ಅಭಿಯಾನ ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದರು.ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್.ಬಿ.ಸಿ. ಮಾತನಾಡಿದರು. ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಆರಂಭವಾದ ನಶೆ ಮುಕ್ತ ಭಾರತ ವಾಕಥಾನ್ ಬಿ.ಎಚ್. ರಸ್ತೆ ಮುಖೇನ ಸಾಗಿ ಬಿಜಿಎಸ್ ಸರ್ಕಲ್‌ನಿಂದ ಅಶೋಕ ರಸ್ತೆ, ಚರ್ಚ್ ಸರ್ಕಲ್ ಮೂಲಕ ಹಾದು ಗಾಜಿನ ಮನೆ ಮುಂಭಾಗ ಮುಕ್ತಾಯಗೊಂಡಿತು. ಕೋಟೆ ಆಂಜನೇಯಸ್ವಾಮಿ ವೃತ್ತ ಬಳಿ ನಶೆ ಮುಕ್ತ ಭಾರತ ನಿರ್ಮಾಣಕ್ಕೆ ಯುವ ಜನರಲ್ಲಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.

ನಶೆ ಮುಕ್ತ ಭಾರತ ವಾಕಥಾನ್ ಅಭಿಯಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಐಎಂಎ ಅಧ್ಯಕ್ಷ ಡಾ. ವೀರಭದ್ರಯ್ಯ, ಅಭಿಯಾನದ ಸಂಚಾಲಕ ಡಾ. ಎಂ.ಆರ್. ಹುಲಿನಾಯ್ಕರ್, ಡಿಎಚ್‌ಓ ಡಾ. ಚಂದ್ರಶೇಖರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಆಸ್ಗರ್ ಬೇಗ್, ಸ್ಪೂರ್ತಿ ಡೆವಲಪರ್ಸ್‌ ಎಸ್.ಪಿ. ಚಿದಾನಂದ್, ಡಾ. ರಮಣ್ ಹುಲಿನಾಯ್ಕರ್, ಡಾ. ಪ್ರಭಾಕರ್, ಡಾ. ರಾಘವೇಂದ್ರ, ಡಾ. ಕೃಷ್ಣಮೂರ್ತಿ, ಈಶ್ವರೀಯ ಬ್ರಹ್ಮಕುಮಾರಿ ವಿವಿಯ ಸುಜಾತ, ದಿಶಾ ಫೌಂಡೇಷನ್ ನಿರ್ದೇಶಕರಾದ ಕೆ. ಶಿವನಾಗಿ ರೆಡ್ಡಿ, ನಾರ್ಕೋಟಿಕ್ಸ್ ಬ್ಯೂರೋದ ಎಂ.ಆರ್. ಅರವಿಂದ, ನಟಿ ಬೃಂದಾ ಆಚಾರ್ಯ, ರಾಜೀವ್‌ಗಾಂಧಿ ಆರೋಗ್ಯ ವಿವಿಯ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರುಗಳು, ವಿವಿಧ ಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ಸಿಗೆ ಸೋನಿಯಾ, ಪ್ರಿಯಾಂಕಾ ಅಷ್ಟೇ ಮಹಿಳೆಯರು: ಹರೀಶ್
ಸಾರ್ವಜನಿಕರು ಆರೋಗ್ಯ ಶಿಬಿರದ ಸದುಪಯೋಗ ಮಾಡಿಕೊಳ್ಳಲಿ