ಕನ್ನಡಪ್ರಭ ವಾರ್ತೆ ಮಧುಗಿರಿ
ಪಟ್ಟಣದ ಸಿದ್ದಾಪುರ ಗೇಟಿನಲ್ಲಿರುವ ಕುರುಬರ ಸಮುದಾಯ ಭವನದ ಮುಂಭಾಗದಿಂದ ಲಿಂಗೇನಹಳ್ಳಿವರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ನಗರ ದಿನೇ ದಿನೇ ಬೆಳೆಯುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ವಿಸ್ತರಿವ ನಿಟ್ಟಿನಲ್ಲಿ ಜನತೆಗೆ ಎಲ್ಲ ಮೂಲ ಸೌಕರ್ಯ ಕಲ್ಪಿಸಿ ಪಟ್ಟಣದ ಬೆಳವಣಿಗೆಗೆ ಶ್ರಮಿಸಲಾಗುವುದು. ಅಮೃತ್ ಯೋಜನೆ -2 ಚಾಲನೆಯಲ್ಲಿದ್ದು ಕಾಮಗಾರಿಗಳು ನಡೆಯುತ್ತಿವೆ. ಈ ಎಲ್ಲ ಕೆಲಸಗಳನ್ನು ನಗರದ ಗಡಿ ಪ್ರದೇಶದವರೆಗೂ ವಿಸ್ತರಿಸುವ ಉದ್ದೇಶವಿದೆ ಎಂದ ಅವರು, ಮುಂಬರುವ ದಿನಗಳಲ್ಲಿ ಪಟ್ಟಣ ಸೇರಿದಂತೆ ಎಲ್ಲ ರಸ್ತೆಗಳು ಚರಂಡಿಗಳು ನಿರ್ಮಾಣವಾಗಿ ನಗರದ ಚಿತ್ರಣವೇ ಬದಲಾಗಲಿದೆ. ಕಾಮಗಾರಿಗಳು ಪ್ರಗತಿಯಲ್ಲಿರುವ ಕಾರಣ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗಲಿದ್ದು, ಕಾಮಗಾರಿಗಳು ಮುಗಿಯುವ ತನಕ ಜನರು ಸಹಕರಿಸಬೇಕು ಎಂದು ರಾಜೇಂದ್ರ ಮನವಿ ಮಾಡಿದರು.
ಎತ್ತಿನ ಹೊಳೆ ಯೋಜನೆಯ ಪ್ರಭಾರ ಎಇಇ ಶ್ರೀಕಾಂತ್ ,ಎಇ ವಿಜಯಪ್ರಸಾದ್, ಕೆಪಿಸಿಸಿ ಸದಸ್ಯ ಸಿದ್ದಾಪುರ ರಂಗಶ್ಯಾಮಣ್ಣ, ಜಿಪಂ ಮಾಜಿ ಸದಸ್ಯ ಎಂ.ಎಚ್.ನಾರಾಯಣಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು, ಲಾಲಪೇಟೆ ಮಂಜುನಾಥ್, ಸದಸ್ಯ ಅಲೀಮ್,ಮುಖಂಡರಾದ ಕುರುಬರಹಳ್ಳಿ ಹರ್ಷ ಇತರರಿದ್ದರು.