ಕಾಡಂಚಿನ ಗ್ರಾಮಗಳಿಗೆ ಕುಡಿವ ನೀರು ಸಂಪರ್ಕಕ್ಕೆ ಕೇಂದ್ರ ಸರ್ಕಾರ ಅನುಮತಿ

KannadaprabhaNewsNetwork |  
Published : May 22, 2026, 01:45 AM IST
57 | Kannada Prabha

ಸಾರಾಂಶ

ಚಾಮರಾಜನಗರ ಜಿಲ್ಲೆಯ ಅತ್ಯಂತ ಹಿಂದುಳಿದ ಕಾಡಂಚಿನ ಗ್ರಾಮಗಳು ಮತ್ತು ಬುಡಕಟ್ಟು (ಗಿರಿಜನ) ಪ್ರದೇಶಗಳಿಗೆ ಮೂಲ ಸೌಕರ್ಯಗಳಾದ ವಿದ್ಯುತ್ ಹಾಗೂ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಪ್ರಸ್ತಾವನೆಗಳಿಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಹಸಿರು ನಿಶಾನೆ ಸಿಕ್ಕಿದೆ.

- ಸಂಸದ ಸುನೀಲ್‌ ಬೋಸ್‌ರ ಪತ್ರಕ್ಕೆ ಕೇಂದ್ರ ಸಚಿವ ಯಾದವ್‌ ಪ್ರತಿಕ್ರಿಯೆ

- ಕುಡಿಯುವ ನೀರಿನ ಜೊತೆಗೆ ವಿದ್ಯುತ್‌ ಸಂಪರ್ಕಕ್ಕೂ ಹಸಿರು ನಿಶಾನೆ

---

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರ ಜಿಲ್ಲೆಯ ಅತ್ಯಂತ ಹಿಂದುಳಿದ ಕಾಡಂಚಿನ ಗ್ರಾಮಗಳು ಮತ್ತು ಬುಡಕಟ್ಟು (ಗಿರಿಜನ) ಪ್ರದೇಶಗಳಿಗೆ ಮೂಲ ಸೌಕರ್ಯಗಳಾದ ವಿದ್ಯುತ್ ಹಾಗೂ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಪ್ರಸ್ತಾವನೆಗಳಿಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಹಸಿರು ನಿಶಾನೆ ಸಿಕ್ಕಿದೆ.ಈ ಕುರಿತು ಸಂಸದ ಸುನಿಲ್ ಬೋಸ್ ಅವರು ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಪತ್ರದ ಮೂಲಕ ಅಧಿಕೃತವಾಗಿ ಸಕಾರಾತ್ಮಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.ವಿದ್ಯುತ್ ಸೌಲಭ್ಯಕ್ಕೆ ಒಪ್ಪಿಗೆ:

ಜಿಲ್ಲೆಯ ಕಾಡಂಚಿನ ಗ್ರಾಮಗಳು ಮತ್ತು ಗಿರಿಜನ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಸ್ತಾವನೆಗೆ ಕಳೆದ ಮಾರ್ಚ್ ೨೧ರಂದು ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ (ಎಸ್‌ಸಿಎನ್‌ಬಿಡಬ್ಲ್ಯೂಎಲ್‌) ೯೦ನೇ ಸಭೆಯಲ್ಲಿ ಅನುಮೋದನೆ (ಶಿಫಾರಸು) ನೀಡಲಾಗಿದೆ. ಇದರಿಂದಾಗಿ ದಶಕಗಳಿಂದ ಕತ್ತಲಲ್ಲಿದ್ದ ಬುಡಕಟ್ಟು ಕುಟುಂಬಗಳ ಮನೆಗಳಿಗೆ ಶೀಘ್ರದಲ್ಲೇ ಬೆಳಕು ಬರಲಿದೆ.ಕೊಳಾಯಿ ನೀರು:

ಕುಡಿಯುವ ನೀರಿನ ಸೌಲಭ್ಯದ ಪ್ರಸ್ತಾವನೆಗಳ ಪೈಕಿ, ನಳದ ಮೂಲಕ ಕುಡಿಯುವ ನೀರು ಪೂರೈಸುವ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ೮೮ನೇ ಸಭೆಯಲ್ಲೇ ಅನುಮೋದನೆ ದೊರೆತಿದೆ.ಕ್ಷೇತ್ರದ ಬಾಕಿ ಉಳಿದಿರುವ ಇತರ ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳ ಪ್ರಸ್ತಾವನೆಗಳನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ (ಎಸ್‌ಸಿಎನ್‌ಬಿಡಬ್ಲ್ಯೂಎಲ್‌) ಮುಂಬರುವ ಸಭೆಯಲ್ಲೇ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ.ಕಾಡಂಚಿನ ಪ್ರದೇಶಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ವನ್ಯಜೀವಿ ಕಾಯ್ದೆಯಡಿ ಕಠಿಣ ನಿಯಮಗಳಿರುವುದರಿಂದ ಈ ಯೋಜನೆಗಳು ವಿಳಂಬವಾಗಿದ್ದವು. ಈಗ ಸಂಸದ ಸುನಿಲ್ ಬೋಸ್‌ರ ನಿರಂತರ ಕ್ರಮದ ಫಲವಾಗಿ ಕೇಂದ್ರ ಸಚಿವಾಲಯದಿಂದ ಶೀಘ್ರ ಅನುಮೋದನೆ ದೊರೆತಿದ್ದು, ಜಿಲ್ಲೆಯ ಜನರ ಪರವಾಗಿ ಕೇಂದ್ರ ಸಚಿವರಿಗೆ ಸಂಸದರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಗುವಳಿ ಚೀಟಿಗಾಗಿ ಭೂ ಹಕ್ಕುದಾರರ ವೇದಿಕೆ ಪ್ರತಿಭಟನೆ
ಎಚ್‌ಸಿಜಿ ಸಂಸ್ಥೆಯಿಂದ ಉತ್ತರ ಬೆಂಗಳೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಶುಭಾರಂಭ,