ಫೈನಾನ್ಸ್ ಕಂಪನಿ ಕಿರುಕುಳಕ್ಕೆ ಕೇಂದ್ರ ಸರ್ಕಾರ ಕಾರಣ: ಶಾಸಕ ಪೊನ್ನಣ್ಣ ಆರೋಪ

KannadaprabhaNewsNetwork | Published : Jan 31, 2025 12:47 AM

ಸಾರಾಂಶ

ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಆರೋಪಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಾಡಿರುವ ಆರ್ಥಿಕ ನೀತಿಗಳೇ ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ಕಾರಣ. ನಬಾರ್ಡ್‌ನಲ್ಲಿ ರಾಜ್ಯಕ್ಕೆ ಬರಬೇಕಾಗಿರುವ ಅನುದಾನ ಕಡಿತವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಬಾರ್ಡ್‌ನಿಂದ ರಾಜ್ಯಕ್ಕೆ ಹದಿನಾರುವರೆ ಲಕ್ಷ ಕೋಟಿ ಕೊಡುತ್ತಿದ್ದರು. ಅದನ್ನು ಕಡಿತ ಮಾಡಿ ಎರಡುವರೆ ಲಕ್ಷ ಕೋಟಿ ಮಾಡಿದ್ದಾರೆ. ಅದನ್ನು ಪೂರ್ತಿ ಕೊಡಿ ಎಂದು ಆರ್ಥಿಕ ಸಚಿರಿಗೆ ಮನವಿ ಮಾಡಿದೆವು. ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದೆವು. ಆದರೆ ಅವರು ಯಾವುದೇ ಸ್ಪಂದನೆ ತೋರಲಿಲ್ಲ ಎಂದು ದೂರಿದರು.

ನಬಾರ್ಡ್ ಅನುದಾನ ಕಡಿತದಿಂದ ರೈತರಿಗೆ ಸಾಲ ದೊರೆಯುವುದಿಲ್ಲ. ಅವರಿಗೆ 4 ಶೇ. ಬಡ್ಡಿದರದಲ್ಲಿ ದೊರೆಯುತ್ತಿದ್ದ ಸಾಲ ಸಿಗುವುದಿಲ್ಲ ಅಂತ ಮನವಿ ಮಾಡಿದೆವು. ಆದರೂ ಕೂಡ ಯಾವುದೇ ರೀತಿ ಪ್ರತಿಕ್ರಿಯಿಸಿಲ್ಲ ಎಂದರು.

ಕೇಂದ್ರದವರು ರೈತರಿಗೆ ಕೊಡುವ ಆರ್ಥಿಕ ನೆರವು ಕಡಿತ ಮಾಡಿದ್ದಾರೆ. ಅದರ ಮೂಲಕ ಮೈಕ್ರೋ ಫೈನಾನ್ಸ್ ಗಳಿಗೆ ಬೆಂಬಲ ಕೊಡುತ್ತಿದ್ದಾರೆ . ಹೀಗಾಗಿ ಕೇಂದ್ರ ಮಾಡಿರುವ ಆರ್ಥಿಕ ನೀತಿಗಳು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಾರಣ ಎಂದು ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಅರ್ಚಕರ ಭೇಟಿಯಾದ ಶಾಸಕ ಪೊನ್ನಣ್ಣಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿರುವ ಕಟ್ಟೆಮಡು ದೇವಾಲಯದ ಪ್ರಧಾನ ಅರ್ಚಕ ವಿಘ್ನೇಶ್ ಅವರನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್ ಪೊನ್ನಣ್ಣನ ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು.ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳುವುದ್ದಾಗಿ ಈ ಸಂದರ್ಭ ಶಾಸಕ ಪೊನ್ನಣ್ಣ ಭರವಸೆ ನೀಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ವೀಣಾ ಅಚ್ಚಯ್ಯ,ವೈದ್ಯಧಿಕಾರಿಗಳು, ಮಾತ್ತಿತರರು ಉಪಸ್ಥಿತರಿದ್ದರು.

Share this article