ದೇಹದ ಸದೃಢತೆಗೆ ಕ್ರೀಡೆ, ವ್ಯಾಯಾಮ ಅವಶ್ಯಕ: ಅಭಿನವ ಪಂಚಾಕ್ಷರ ಸ್ವಾಮೀಜಿ

KannadaprabhaNewsNetwork |  
Published : Jan 31, 2025, 12:47 AM IST
29ಕೆಕೆಆರ್1:ಕುಕನೂರು ತಾಲೂಕಿನ ರಾಜೂರು ಗ್ರಾಮದ ಶರಣಬಸವೇಶ್ವರ 38ನೇ ಜಾತ್ರೆ ಪ್ರಯುಕ್ತ ಶ್ರೀ ಗುರು ಪಂಚಾಕ್ಷರ ಕ್ರಿಕೇಟ್ ಕ್ಲಬ್ ನ ಸಹಯೋಗದಲ್ಲಿ ಜರುಗಿದ  ಟ್ರೋಫಿ ಸಿಜನ್ 4  ರಾಜೂರ ಪ್ರೀಮಿಯರ್ ಲಿಗ್ ಪಂದ್ಯಾವಳಿಗೆ ಶ್ರೀಗಳು ಚಾಲನೆ ನೀಡಿದರು.  | Kannada Prabha

ಸಾರಾಂಶ

ದೇಹದ ಎಲ್ಲ ಸ್ನಾಯುಗಳಲ್ಲಿ ರಕ್ತ ಪರಿಚಲನೆಯಾಗುವ ಮೂಲಕ ಸದೃಢ ಆರೋಗ್ಯವನ್ನು ಪಡೆಯಲು ಕ್ರೀಡೆ ಸಹಕಾರಿಯಾಗುತ್ತದೆ.

ಪ್ರೀಮಿಯರ್ ಲೀಗ್ ಉದ್ಘಾಟನೆಕನ್ನಡಪ್ರಭ ವಾರ್ತೆ ಕುಕನೂರು

ಮನುಷ್ಯ ಆರೋಗ್ಯಪೂರ್ಣ ಬದುಕಿಗಾಗಿ ವ್ಯಾಯಾಮ ಮಾಡಬೇಕು. ಇಲ್ಲವೇ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ದೇಹದ ಎಲ್ಲ ಸ್ನಾಯುಗಳಲ್ಲಿ ರಕ್ತ ಪರಿಚಲನೆಯಾಗುವ ಮೂಲಕ ಸದೃಢ ಆರೋಗ್ಯವನ್ನು ಪಡೆಯಲು ಕ್ರೀಡೆ ಸಹಕಾರಿಯಾಗುತ್ತದೆ ಎಂದು ಗದಗ-ಅಡ್ನೂರ-ರಾಜೂರಿನ ಅಭಿನವ ಪಂಚಾಕ್ಷರ ಸ್ವಾಮೀಜಿ ಹೇಳಿದರು.

ತಾಲೂಕಿನ ರಾಜೂರು ಗ್ರಾಮದ ಶರಣಬಸವೇಶ್ವರ 38ನೇ ಜಾತ್ರೆ ಪ್ರಯುಕ್ತ ಗುರು ಪಂಚಾಕ್ಷರ ಕ್ರಿಕೆಟ್ ಕ್ಲಬ್‌ನ ಸಹಯೋಗದಲ್ಲಿ ಜರುಗಿದ ಟ್ರೋಫಿ ಸಿಸನ್-4 ರಾಜೂರ ಪ್ರೀಮಿಯರ್ ಲೀಗ್‌ನ ಮೊದಲನೇ ಪಂದ್ಯವಳಿಗೆ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಆಟ ಎಂದ ಮೇಲೆ ಸೋಲು-ಗೆಲುವು ಖಚಿತ. ಗೆದ್ದಾಗ ಹಿಗ್ಗದೇ, ಸೋತಾಗ ಕುಗ್ಗದೇ ಪಂದ್ಯಗಳನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು. ಸೋಲೆ ಗೆಲುವಿನ ಸೋಪಾನ ಎನ್ನುವುದನ್ನು ಗಮದಲ್ಲಿಟ್ಟುಕೊಂಡು ಸೋಲಿನಿಂದ ನಿಮಗೆ ಮುಂದೆ ಉನ್ನತ ಸ್ಥಾನ ಸಿಗುವುದು ಶತಸಿದ್ಧ. ಆಟದಲ್ಲಿ ಸೋಲು ಕಂಡ ಮನುಷ್ಯನೇ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದು ಹೇಳಿದರು.

ಪ್ರಮುಖರಾದ ಮುತ್ತಣ್ಣ ಅರಕೇರಿ, ದೇವರೆಡ್ಡಿ ಹಳ್ಳಿಗುಡಿ, ಶಿವರಾಜ ದೊಡ್ಮನಿ, ಶಿವಲಿಂಗಪ್ಪ ಕವಲೂರು, ಅಂದಪ್ಪ ಹಳ್ಳಿಗುಡಿ, ದೇವರಾಜ ಕುದುರಿಮೋತಿ, ರಮೇಶ ತಳವಾರ, ಆನಂದ ಸೋಂಪುರ, ಅಂಬರೀಶ ಸೋಂಪುರ, ನವೀನ ಹಿರೇಮನಿ, ಕಳಕಪ್ಪ ಹಡಪದ, ಹನುಮನಗೌಡ ಇಳಗೆರ, ಚೇತನ ಹಿರೇಮನಿ, ಪ್ರಕಾಶ ತಳವಾರ, ಚೇತನ ಮಾಗನೂರು ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ