ಎತ್ತಿನಹೊಳೆ ಯೋಜನೆ ವಿಲಂಬಕ್ಕೆ ಕೇಂದ್ರ ಕಾರಣ

KannadaprabhaNewsNetwork |  
Published : Nov 25, 2025, 01:15 AM IST
   ಸಿಕೆಬಿ-9 ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ   “ಚಿಕ್ಕಬಳ್ಳಾಪುರ ಜಿಲ್ಲೆಯ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ, ಹೆಚ್.ಎನ್.ವ್ಯಾಲಿಯ 3ನೇ ಹಂತದ 164 ಕೆರೆಗಳಿಗೆ ನೀರು ತುಂಬಿಸುವಯೋಜನೆ ಮತ್ತು ವಿವಿಧ ಕಾಮಗಾರಿಗಳಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ  ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದರು | Kannada Prabha

ಸಾರಾಂಶ

ಎತ್ತಿನಹೊಳೆ ನೀರಾವರಿ ಯೋಜನೆಗೆ ಈಗಾಗಲೇ ಟೆಂಡರ್ ಮುಗಿದು ಕಾಮಗಾರಿ ಆರಂಭಗೊಳ್ಳಬೇಕಿತ್ತು. ಎತ್ತಿನಹೊಳೆ ವಿಳಂಬಕ್ಕೆ ಪರೋಕ್ಷವಾಗಿ ಕೇಂದ್ರ ಸರ್ಕಾರವೇ ಕಾರಣ ಎಂದರು. ಕೇಂದ್ರ ಅನುಮತಿ ಸಿಕ್ಕಿದಿದ್ದರೆ ಎತ್ತಿನಹೊಳೆ ಕಾಮಗಾರಿ ಮುಗಿದು ಇಷ್ಟೊತ್ತಿಗಾಗಲೇ ಈ ಭಾಗಕ್ಕೆ ನೀರು ಹರಿಯುತ್ತಿತ್ತು. ಆದರೆ ಕೇಂದ್ರ ಅನುಮತಿ ನೀಡುತ್ತಿಲ್ಲ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತುಮಕೂರು, ಹಾಸನ ಜಿಲ್ಲೆಯಲ್ಲಿ ಪರಿಸರ ಇಲಾಖೆಯ ವರದಿಯನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ಎತ್ತಿನಹೊಳೆಯ ಯೋಜನೆ ಅನುಷ್ಠಾನಕ್ಕೆ ಬೇಕಾದ ಭೂ ಸ್ವಾಧೀನಕ್ಕೆ ಅನುಮತಿ ಕೊಡುತ್ತಿಲ್ಲ ಎಂದು ಜಲ ಸಂಪನ್ನೂಲ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀಕಿಸಿದರು.ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ, ಹೆಚ್.ಎನ್.ವ್ಯಾಲಿಯ 3ನೇ ಹಂತದ 164 ಕೆರೆಗಳಿಗೆ ನೀರು ತುಂಬಿಸುವಯೋಜನೆ ಮತ್ತು ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಳಂಬಕ್ಕೆ ಕೇಂದ್ರ ಕಾರಣ

ಈಗಾಗಲೇ ಟೆಂಡರ್ ಮುಗಿದು ಕಾಮಗಾರಿ ಆರಂಭಗೊಳ್ಳಬೇಕಿತ್ತು. ಎತ್ತಿನಹೊಳೆ ವಿಳಂಬಕ್ಕೆ ಪರೋಕ್ಷವಾಗಿ ಕೇಂದ್ರ ಸರ್ಕಾರವೇ ಕಾರಣ ಎಂದರು. ಕೇಂದ್ರ ಅನುಮತಿ ಸಿಕ್ಕಿದಿದ್ದರೆ ಎತ್ತಿನಹೊಳೆ ಕಾಮಗಾರಿ ಮುಗಿದು ಇಷ್ಟೊತ್ತಿಗಾಗಲೇ ಈ ಭಾಗಕ್ಕೆ ನೀರು ಹರಿಯುತ್ತಿತ್ತು ಎಂದರು

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಗೆದಿರುವುದು ಜೆಡಿಎಸ್ ಶಾಸಕ ಮೇಲೂರು ರವಿಕುಮಾರ್, ಆದರೆ ಅವರ ಕ್ಷೇತ್ರದಲ್ಲಿ 2 ಸಾವಿರ ಕೋಟಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಪರ‌ನಿಂತಿದೆ. ಈ ಕಾರ್ಯಕ್ರಮ ಮಾಧ್ಯಮಗಳಿಗೆ ಹೇಳಲು ಬಯಸುತ್ತೇನೆ. ಇದು ಅಭಿವೃದ್ಧಿಯ ಸಂಗಮ.ಸತ್ಯಕ್ಕೂ ಸುಳ್ಳುಗೂ ಸಾಕಷ್ಟು ವ್ಯತ್ಯಾಸ ಇದೆ. ಅಕ್ಬರ್ ಬೀರ್ಬಲ್ ಕಥೆಯಲ್ಲಿದ್ದಂತೆ ಸತ್ಯಕ್ಕೂ ಸುಳ್ಳುಗೂ ನಾಲ್ಕು ಬೆರಳುಗಳೇ ವ್ಯತ್ಯಾಸ ಎಂದು ಮಾರ್ಮಿಕವಾಗಿ ಹೇಳಿದರು.

2028ರಲ್ಲೂ ಕಾಂಗ್ರೆಸ್‌ ಸರ್ಕಾರ ಸರ್ಕಾರ ಕೊಡುತ್ತಿದ್ದ 5 ಅಕ್ಕಿ ಮಾರಾಟದ ಬಗ್ಗೆ ಸಿಎಂ ಗೆ ದೂರು ಬಂತು.ಆದರಿಂದ 5 ಕೆಜಿ ಬದಲು ಬೇರೆ ಪದಾರ್ಥಗಳ ನ್ನು ನೀಡುತ್ತಿದ್ದೇವೆ.ನಾನು ಬಿಜೆಪಿಗೆ ಹೇಳುತ್ತೇನೆ ಕಮಲ‌ ಕೆಸರಲ್ಲಿ ,ತೆನೆ ಹೊಲದಲ್ಲಿ ಇದ್ರೆ ಚಂದ ಎಂದು ಹೇಳಿದ್ದೆ. ಚುನಾವಣಾ ಸಂಧರ್ಭದಲ್ಲಿ ಈ‌ಭಾಗಕ್ಕೆ ಬಂದಾಗ ಹೇಳಿದಂತೆ ಈಗ ನಿಮ್ಮೂರಿಗೆ ಸರ್ಕಾರ ಬಂದಿದೆ. ತಮ್ಮ ಆಶೀರ್ವಾದ ನಮ್ಮ‌ಮೇಲೆ‌ 2028 ಕ್ಕೂ ಇರಲೀ. ವಿರೋಧ ಪಕ್ಷಕ್ಕೆ ನಾನು ಈ ಸಂದರ್ಭದಲ್ಲಿ ಹೇಳುತ್ತಿದ್ದೇನೆ. ವಿರೋಧ ಪಕ್ಷಗಳು ಹಗಲು ಕನಸು ಕಾಣಬೇಡಿ. 2028 ಮತ್ತೆ ಕಾಂಗ್ರೆಸ್ ಸರ್ಕಾರ ಬರಲಿದೆ. ನಮ್ಮ ಸೇವೆ ಮತ್ತೆ ಮುಂದುವರೆಯಲಿದೆ ಎಂದು ಹೇಳಿದರು ಶಾಸಕರ ಖರೀದಿ ಬಿಜೆಪಿ ಸಂಸ್ಕೃತಿ

ಕಾಂಗ್ರೆಸ್ ನವರಿಂದಲೇ ಕಾಂಗ್ರೆಸ್ ಶಾಸಕರ ಖರೀದಿ ಎಂದು ವಿರೋಧ ಪಕ್ಷದ ನಾಯಕ ಆರ್, ಅಶೋಕ್ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಸಿದ ಡಿಸಿಎಂ, ಶಾಸಕರ ಖರೀದಿ ಸಂಸ್ಕೃತಿ ಬಿಜೆಪಿಯವರಲ್ಲಿರೋದು. ಮುಖ್ಯಮಂತ್ರಿ ಆಗಬೇಕಾದರೆ ಎಷ್ಟು ಸಾವಿರ ಕೋಟಿ ಕೊಡಬೇಕು ಅಂತ‌ ಬಿಜೆಪಿಯವರೇ ಹಿಂದೆ ಹೇಳಿದ್ದಾರೆ. ಅಸೆಂಬ್ಲಿ ಯಲ್ಲೂ ಸಹ ಎಷ್ಟೆಷ್ಟೋ ಕೋಟಿ ಕೊಟ್ಟು ಶಾಸಕರ ಖರೀದಿ ಬಗ್ಗೆ ದಾಖಲೆಗಳಲ್ಲೇ ಬಂದಿದೆ. ಅವರು ಮಾಡ್ತಿದ್ದ ಪ್ರವೃತ್ತಿನಾ ಅವರು ನೆನಪಿಸಿಕೊಳ್ಳುತ್ತಿದ್ದಾರೆ ಅಷ್ಟೇ ಎಂದರು.

ಸಿಎಂ ಅಧಿಕಾರ ಹಸ್ತಾಂತರ ವಿಷಯಕ್ಕೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಹೇಳಿದ ಮೇಲೆ ಅದೇ ವೇದ ವಾಕ್ಯ ಎಂದರು. ಯಾವಾಗ ಸಿಎಂ ಅಗ್ತೀರಿ ಪ್ರಶ್ನೆಗೆ ಡಿ ಕೆ ಶಿವಕುಮಾರ್. ಮೌನಕ್ಕೆ ಜಾರಿದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಶವ ಬಗ್ಗೆ ಬುರುಡೆ ಬಿಟ್ಟ ಚಿನ್ನಯ್ಯಗೆ ಬೇಲ್
ಕೈ ರೆಬೆಲ್ಸ್‌ ಜತೆ ಸೇರಿ ನಾವು ಸರ್ಕಾರ ಮಾಡಲ್ಲ : ಅಶೋಕ್‌