ವಿಕಲಚೇತನ ಕ್ರೀಡಾಳುಗಳಿಗೆ ಸಿಇಒ ಧನಸಹಾಯ: ಥೈಲ್ಯಾಂಡ್‌ಗೆ ವೆಂಕಟೇಶ್‌

KannadaprabhaNewsNetwork |  
Published : Nov 12, 2025, 01:00 AM IST
ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ನಗರದ ಅಲ್ಲಿಪೂರ ತಾಂಡದ ನಿವಾಸಿಯಾದ ವೆಂಕಟೇಶಗೆಯಿಲಾಖೆಯ ಧನಸಾಹಯ ನೀಡಿದ ಸಿಇಓ ಲವೀಶ್‌. | Kannada Prabha

ಸಾರಾಂಶ

ಥೈಲ್ಯಾಂಡ್ ದೇಶದಲ್ಲಿ ನಡೆಯುವ World Ability Sports Games ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದ ಜಿಲ್ಲೆಯ ಯಾದಗಿರಿ ತಾಲೂಕಿನ ನಗರದ ಅಲ್ಲಿಪೂರ ತಾಂಡದ ನಿವಾಸಿಯಾದ ವೆಂಕಟೇಶ ಆಯ್ಕೆಯಾಗಿದ್ದಾರೆ ಎಂದು ಯಾದಗಿರಿ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿಗಳು ಅವರು ತಿಳಿಸಿದ್ದಾರೆ.

ಯಾದಗಿರಿ: ಥೈಲ್ಯಾಂಡ್ ದೇಶದಲ್ಲಿ ನಡೆಯುವ World Ability Sports Games ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದ ಜಿಲ್ಲೆಯ ಯಾದಗಿರಿ ತಾಲೂಕಿನ ನಗರದ ಅಲ್ಲಿಪೂರ ತಾಂಡದ ನಿವಾಸಿಯಾದ ವೆಂಕಟೇಶ ಆಯ್ಕೆಯಾಗಿದ್ದಾರೆ ಎಂದು ಯಾದಗಿರಿ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿಗಳು ಅವರು ತಿಳಿಸಿದ್ದಾರೆ.

ಕ್ರೀಡೆಯಲ್ಲಿ ಭಾಗವಹಿಸಲು ಆರ್ಥಿಕ ಸಂಕಷ್ಟವಿರುವ ಮಾಹಿತಿಯನ್ನು ನವೆಂಬರ್ 10ರಂದು ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಅವರ ಗಮನಕ್ಕೆ ತಂದ ಕೂಡಲೇ ಅವರಿಗೆ ನವೆಂಬರ್ 11 ರಂದು ಕೇವಲ ಒಂದೇ ದಿನದಲ್ಲಿ 1,78,500.00 ರೂ.ಗಳ ಇಲಾಖೆಯ ಸಹಾಯಧನ ಮಂಜೂರು ಮಾಡಿದ್ದಾರೆ. ಥೈಲ್ಯಾಂಡ್ ದೇಶದಲ್ಲಿ ನಡೆಯುವ World Ability Sports Gamesನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಯಿಂದ ಥೈಲ್ಯಾಂಡ್ ದೇಶದಲ್ಲಿ ನಡೆಯುವ World Ability Sports Games ನಲ್ಲಿ ಭಾಗವಹಿಸಲು ಅವಕಾಶ ಪಡೆದಿರುವುದು ತುಂಬಾ ಸಂತಸದ ವಿಷಯವಾಗಿದ್ದು, ಕುಮಾರ ರಾಠೋಡ ಅವರು ಈ ಕ್ರೀಡೆಯಲ್ಲಿ ದೇಶದ ಪರವಾಗಿ ಭಾಗವಹಿಸಿ ಗೆಲುವು ಸಾಧಿಸುವುದರ ಮೂಲಕ ದೇಶಕ್ಕೆ, ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಹೆಸರು ತರುವಂತಾಗಲಿ ಎಂದು ಶುಭ ಹಾರೈಸಿರುತ್ತಾರೆ.

ಕ್ರೀಡಾಪಟು ಸಂಪರ್ಕ ಕುಮಾರ ರಾಠೋಡ ಕ್ರೀಡಾಪಟು ಮೊ.7353510051, (ಪೋಷಕರು.ಎಮ್.ಕೆ.ಪವಾರ ಮೊ.ನಂ.8217813893) ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!