ಭೀಮಸೇನೆ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ

KannadaprabhaNewsNetwork |  
Published : Jul 26, 2025, 12:30 AM IST
ಪೋಟೋ 1 : ಸೋಂಪುರ ಹೋಬಳಿಯ ಹೆಗ್ಗುಂದ ಗ್ರಾಮದಲ್ಲಿ ಭೀಮ ಸೇನೆ ಸಂಘದ ನೂತನ ಪದಾಧಿಕಾರಿಗಳಿಗೆ ಭಾರತ ಭೀಮ ಸೇನೆ ಸಂಘದ ರಾಜ್ಯಾಧ್ಯಕ್ಷ ದಿನೇಶ್ ಪ್ರಮಾಣ ಪತ್ರ ವಿತರಿಸಿದರು. | Kannada Prabha

ಸಾರಾಂಶ

ದಾಬಸ್‍ಪೇಟೆ: ಸರ್ವಜನರಿಗೂ ಸಮಾನತೆ ದೊರಕಬೇಕೆಂಬ ಕನಸನ್ನು ಹೊತ್ತು ಅದರಂತೆಯೇ ನಡೆದ ಮಹಾನುಭಾವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಭಾರತ ಭೀಮಸೇನೆ ಸಂಘದ ರಾಜ್ಯಾಧ್ಯಕ್ಷ ದಿನೇಶ್ ಅಭಿಪ್ರಾಯಪಟ್ಟರು.

ದಾಬಸ್‍ಪೇಟೆ: ಸರ್ವಜನರಿಗೂ ಸಮಾನತೆ ದೊರಕಬೇಕೆಂಬ ಕನಸನ್ನು ಹೊತ್ತು ಅದರಂತೆಯೇ ನಡೆದ ಮಹಾನುಭಾವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಭಾರತ ಭೀಮಸೇನೆ ಸಂಘದ ರಾಜ್ಯಾಧ್ಯಕ್ಷ ದಿನೇಶ್ ಅಭಿಪ್ರಾಯಪಟ್ಟರು.

ಸೋಂಪುರ ಹೋಬಳಿಯ ಹೆಗ್ಗುಂದ ಗ್ರಾಮದಲ್ಲಿ ಭೀಮಸೇನೆ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಸರ್ವರಿಗೂ ಸಮಾನತೆ ದೊರಕುವ ನಿಟ್ಟಿನಲ್ಲಿ ಜಾತಿ, ಧರ್ಮ, ಪಕ್ಷ ಮರೆತು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸೋಣ ಎಂದರು.

ನೂತನ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅಮರ್ ಮಾತನಾಡಿ, ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುವ ನಿಟ್ಟಿನಲ್ಲಿ ನೂತನ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ಸಂಘಟನೆಯ ಪದಾಧಿಕಾರಿಗಳಿಗೆ ಧನ್ಯವಾದ ತಿಳಿಸಿ, ಸಂಘಟನೆಯ ಮಾರ್ಗದರ್ಶನದಂತೆ ನಮ್ಮ ನೂತನ ಸಂಘ ಕೆಲಸ ಮಾಡಲಿದೆ ಎಂದರು.ಈ ವೇಳೆ ಯುವ ಘಟಕ ರಾಜ್ಯಾಧ್ಯಕ್ಷ ಸಚಿನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಇಮ್ರಾನ್, ರಾಜ್ಯ ಉಪಾಧ್ಯಕ್ಷ ಮಂಜುನಾಥ್, ರಾಜ್ಯ ಸಂಘಟನಾ ಕಾರ್ಯದರ್ಶಿ ಮಧು, ತುಮಕೂರು ಯುವ ಘಟಕ ಜಿಲ್ಲಾ ಅಧ್ಯಕ್ಷ ಗಿರೀಶ್, ಗುಬ್ಬಿ ತಾಲೂಕು ಸಂಘಟನಾ ಕಾರ್ಯದರ್ಶಿ ಧೀರಜ್ ಇತರರಿದ್ದರು.

ನೂತನ ಪದಾಧಿಕಾರಿಗಳು:

ನೂತನ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ಅಮರ್.ಜಿ, ಯುವ ಘಟಕ ಜಿಲ್ಲಾಧ್ಯಕ್ಷರಾಗಿ ನಂದೀಶ್ (ಚಂದ್ರು), ನೆಲಮಂಗಲ ಯುವ ಘಟಕ ಅಧ್ಯಕ್ಷರಾಗಿ ಮನೋಜ್, ಸೋಂಪುರ ಹೋಬಳಿಯ ಅಧ್ಯಕ್ಷರಾಗಿ ವಿಜಯ್ ಕುಮಾರ್, ಸೋಂಪುರ ಹೋಬಳಿಯ ಉಪಾಧ್ಯಕ್ಷರಾಗಿ ಮಧುಸೂದನ್ ನೇಮಕವಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ಕೌಶಲ್ಯಗಳ ಜ್ಞಾನ ಮುಖ್ಯ: ಡಾ.ಶೋಭಾ
ಹರನ ಜಾತ್ರೆಗೆ ಎಲ್ಲರೂ ಬನ್ನಿ: ವಚನಾನಂದ ಶ್ರೀ