ವಿದ್ಯುತ್ ಬಿಲ್ ಕಟ್ಟುವಂತೆ ಅಂಧ ವೃದ್ಧೆ ಮೇಲೆ ಸೆಸ್ಕ್‌ ಅಧಿಕಾರಿಗಳಿಂದ ಹಲ್ಲೆ ಆರೋಪ

KannadaprabhaNewsNetwork |  
Published : Oct 31, 2025, 01:15 AM IST
51 | Kannada Prabha

ಸಾರಾಂಶ

ವಿದ್ಯುತ್ ಬಿಲ್ ಸುಮಾರು 5 ಸಾವಿರ ಬಂದಿದ್ದು, ವಿದ್ಯುತ್ ಬಿಲ್ ಕಟ್ಟಬೇಕು, ಇಲ್ಲವಾದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತೇವೆ ಎಂದು ಸೆಸ್ಕ್‌ ಅಧಿಕಾರಿಗಳು ಹೇಳಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಮುಂದಾ

ಕನ್ನಡಪ್ರಭ ವಾರ್ತೆ ನಂಜನಗೂಡು ವಿದ್ಯುತ್ ಬಿಲ್ ಕಟ್ಟುವಂತೆ 80 ವರ್ಷದ ವೃದ್ಧೆಯ ಮೇಲೆ ಸೆಸ್ಕ್‌ ಲೈನ್ ಮ್ಯಾನ್ ಮತ್ತು ಎಇ ತಳ್ಳಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ವೃದ್ದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಮ್ಮ ಅಳಲು ತೋಡಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ತಾಲೂಕಿನ ಚಿಕ್ಕಹೊಮ್ಮ ಗ್ರಾಮದ 85 ವರ್ಷದ ಅಂದ ವೃತ ಮಹಿಳೆ ಮಹದೇವಮ್ಮ ಅವರು ಮನೆಯಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದು, ಭಾಗ್ಯ ಜ್ಯೋತಿ ಉಚಿತ ವಿದ್ಯುತ್ ಸಂಪರ್ಕವಿದ್ದರೂ ಸಹ, ವಿದ್ಯುತ್ ಬಿಲ್ ಸುಮಾರು 5 ಸಾವಿರ ಬಂದಿದ್ದು, ವಿದ್ಯುತ್ ಬಿಲ್ ಕಟ್ಟಬೇಕು, ಇಲ್ಲವಾದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತೇವೆ ಎಂದು ಸೆಸ್ಕ್‌ ಅಧಿಕಾರಿಗಳು ಹೇಳಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಮುಂದಾದಾಗ ಅಂಧ ಮತ್ತು ವೃದ್ಧ ಮಹಿಳೆ ಮಹದೇವಮ್ಮ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸದಂತೆ ಮನವಿ ಮಾಡಲು ಮುಂದಾದ ವೇಳೆ ಸೆಸ್ಕ್‌ ಲೈನ್ ಮ್ಯಾನ್ ಮತ್ತು ಎಇ ಅಧಿಕಾರಿಗಳು ವೃದ್ಧ ಅಂಧ ಮಹಿಳೆಯ ಮೇಲೆ ತಳ್ಳಿ ನೂಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ವೃದ್ಧ ಮಹಿಳೆ ಚಾಮರಾಜನಗರ ಜಿಲ್ಲೆಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಮ್ಮ ಅಳಲನ್ನು ತೋಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸೆಸ್ಕ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಿರಣ್ ಕುಮಾರ್ ಮಾತನಾಡಿ, ವೃದ್ಧೆ ಮಹದೇವಮ್ಮ ಅವರ ಮನೆಯಲ್ಲಿ ಭಾಗ್ಯ ಜ್ಯೋತಿ ಉಚಿತ ವಿದ್ಯುತ್ ಸಂಪರ್ಕವಿದೆ, ಆದರೆ ಅವರ ಮನೆಯಲ್ಲಿರುವ ವಿದ್ಯುತ್ ಮೀಟರ್ ಅನ್ನು ಅವನ ಮೊಮ್ಮಗ ತನ್ನ ಮನೆಗೆ ಅಕ್ರಮವಾಗಿ ಅಳವಡಿಕೆ ಮಾಡಿಕೊಂಡಿದ್ದಾನೆ, ಮಹದೇವಮ್ಮ ಅವರ ಮನೆಗೆ ಮೀಟರ್ ನಂಬರ್ ಇಲ್ಲದ ಅಕ್ರಮ ವಿದ್ಯುತ್ ಮೀಟರ್ ಅನ್ನು ಅಳವಡಿಸಿ ಅಕ್ರಮ ಸಂಪರ್ಕ ಪಡೆದುಕೊಂಡಿದ್ದಾನೆ, ಮಹದೇವಮ್ಮ ಅವರ ವಿದ್ಯುತ್ ಬಿಲ್ ಯಾವುದೇ ಬಾಕಿ ಇರುವುದಿಲ್ಲ, ಆದ್ದರಿಂದ ನಮ್ಮ ಅಧಿಕಾರಿಗಳು ಅಕ್ರಮ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಮುಂದಾಗಿದ್ದಾರೆ, ಈ ವೇಳೆ ವೃದ್ಧೆಯ ಮೇಲೆ ಯಾವುದೇ ಹಲ್ಲೆ ನಡೆಸಿಲ್ಲ, ಈ ಬಗ್ಗೆ ನಾನು ಸಹ ಗ್ರಾಮಕ್ಕೆ ಭೇಟಿ ನೀಡಿ ವೃದ್ಧೆ ಮಹದೇವಮ್ಮ ಅವರಿಂದ ಸ್ಪಷ್ಟನೆ ಕೇಳಿದ್ದು, ಅವರು ಸಹ ನನಗೆ ಯಾವುದೇ ಹಲ್ಲೆ ನಡೆಸಿಲ್ಲ, ಆದರೆ ನಾನು ವಿದ್ಯುತ್ ಬಿಲ್ ಕಟ್ಟುತ್ತೇವೆ, ಸಮಯ ಕೊಡಿ ಎಂದು ಮನವಿ ಮಾಡಿದ್ದರೂ ಸಹ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.ಅಲ್ಲದೆ ವೃದ್ಧ ಮಹಿಳೆ ಮಹದೇವಮ್ಮ ಅವರ ಮನೆಗೆ ವಿದ್ಯುತ್ ಸಂಪರ್ಕ ಕೊಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.

PREV

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ