ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಸೆಸ್ಕ್ ಉಪ ವಿಭಾಗೀಯ ಕಚೇರಿಯಲ್ಲಿ ತಾಲೂಕು ಸೆಸ್ಕ್ ಎಂಜಿನಿಯರ್‌ಗಳ ಸಭೆ ನಡೆಸಿದ ಶಾಸಕರು ಸಭೆಯಲ್ಲಿ ದಾಖಲೆಗಳ ಸಮೇತ ಎಂಜಿಯರ್‌ಗಳ ಕಾರ್ಯಲೋಪವನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.
ಈ ಹಿಂದಿನ ಸಭೆಗಳಲ್ಲಿ ಪ್ರಸ್ತಾಪಿತವಾಗಿದ್ದ ಯಾವುದೇ ದೂರುಗಳನ್ನು ಇದುವೆರಗೂ ಪರಿಹರಿಸಿಲ್ಲ. ಈ ಸಾಲಿನಲ್ಲಿ ತಾಲೂಕು ಸೆಸ್ಕ್ ಗೆ 30 ಕೋಟಿ ರು. ಅನುದಾನ ಬಂದಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡದ ಕಾರಣ 4 ಕೋಟಿ ಅನುದಾನ ವಾಪಸ್ ಹೋಗುತ್ತಿದೆ ಎಂದು ಕಿಡಿಕಾರಿದರು.ತಾಲೂಕು ವ್ಯಾಪ್ತಿಯಲ್ಲಿ ಕೆಲವು ಕಾಮಗಾರಿ ಮಾಡದಿದ್ದರೂ ಮಾಡಲಾಗಿದೆ ಎಂದು ಶಾಸಕರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಇಲಾಖಾ ಸಿಬ್ಬಂದಿ ಮೇಲೆ ಹಲವು ದೂರುಗಳಿದ್ದರೂ ಅದನ್ನು ಸರಿಪಡಿಸುವ ಕನಿಷ್ಠ ಪ್ರಯತ್ನವನ್ನೂ ಎಂಜಿನಿಯರ್‌ಗಳು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ರೈತರ ಸಮಸ್ಯೆ ಸರಿಪಡಿಸದೆ ಬೇಜವಾಬ್ದಾರಿ ತನ ಪ್ರದರ್ಶನ ಮಾಡುತ್ತೀರಾ. ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಸೆಸ್ಕ್ ಜೆ.ಇ ಶಿವಶಂಕರ ಮೂರ್ತಿ ತನ್ನ ಮಗನನ್ನು ಗುತ್ತಿಗೆದಾರನನ್ನಾಗಿಸಿಕೊಂಡು ಇಲಾಖೆ ಕಾಮಗಾರಿಗಳನ್ನು ತಾನೇ ಮಾಡುತ್ತಿದ್ದಾರೆ. ಸಣ್ಣಪುಟ್ಟ ಕಾಮಗಾರಿಗಳನ್ನು ಗುತ್ತಿಗೆದಾರರಂತೆ ಇಲಾಖೆ ಎಂಜಿನಿಯರುಗಳೇ ಮಾಡುವುದಾದರೆ ನೈಜ ಗುತ್ತಿಗೆದಾರರ ಗತಿಯೇನು ಎಂದು ಪ್ರಶ್ನಿಸಿದರು.
ದೂರುದಾರ ರೈತರ ಮೊಬೈಲ್ ನಂಬರ್ ಸಂಗ್ರಹಿಸಿದ ಅವರು, ಅಧಿಕಾರಿಗಳು ರೈತರ ಮುಂದೆ ಲಂಚದ ಬೇಡಿಕೆಯಿಟ್ಟು ಇಲಾಖೆ ಮಾನ ಮರ್ಯಾದೆ ಕಳೆಯಬೇಡಿ. ಇಲಾಖೆಯಲ್ಲಿ ಯಾವುದೇ ಅನುದಾನದ ಸಮಸ್ಯೆಯಿಲ್ಲ. ಶಾಸಕರು ಪ್ರಸ್ತಾಪಿಸಿರುವ ಎಲ್ಲವೂ ಸ್ಥಳೀಯ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಿ ವರದಿ ನೀಡುವಂತೆ ಸುನೀಲ್ ಕುಮಾರ್ ಸೂಚಿಸಿದರು.