ಸಿಇಟಿ ಪರೀಕ್ಷೆ: ಕೇಂದ್ರಕ್ಕೆ ಹೋಗಲು ವಿದ್ಯಾರ್ಥಿಗಳ ಪರದಾಟ

KannadaprabhaNewsNetwork |  
Published : Apr 17, 2025, 12:02 AM IST
ಪೋಟೋ೧೬ಸಿಎಲ್‌ಕೆ೧ ಚಳ್ಳಕೆರೆ ನಗರದ ಖಾಸಗಿ ಬಸ್ಟಾಂಡ್‌ನಲ್ಲಿ ಚಿತ್ರದುರ್ಗಕ್ಕೆ ಹೋಗಲು ಬಸ್‌ಗಳಿಗಾಗಿ ಕಾಯುತ್ತಾ ಕುಳಿತ ವಿದ್ಯಾರ್ಥಿಗಳು. | Kannada Prabha

ಸಾರಾಂಶ

ಚಳ್ಳಕೆರೆ ನಗರದ ಖಾಸಗಿ ಬಸ್‌ ನಿಲ್ದಾಣದಲ್ಲಿ ಚಿತ್ರದುರ್ಗಕ್ಕೆ ಹೋಗಲು ಬಸ್‌ಗಳಿಗಾಗಿ ಕಾದು ಕುಳಿತ ವಿದ್ಯಾರ್ಥಿಗಳು.

ಹೆಚ್ಚುವರಿ ಬಸ್‌ ಸೇವೆಗೆ ಒದಗಿಸಲು ಸಾರ್ವಜನಿಕರ ಮನವಿಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕರ್ನಾಟಕ ರಾಜ್ಯಾದ್ಯಂತ ಏ.16 ಮತ್ತು 17 ರಂದು ಸಿಇಟಿ ಪರೀಕ್ಷೆ ಆರಂಭವಾಗಿದ್ದು, ಚಳ್ಳಕೆರೆ ತಾಲೂಕಿನಾದ್ಯಂತ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲು ಬುಧವಾರ ಬೆಳಗ್ಗೆ ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಕಾದುಕಾದು ಬೇಸತ್ತರು.

ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದ್ದರೂ ಸಹ ಕೆಎಸ್‌ಆರ್‌ಟಿಸಿ ಬಸ್‌ನವರು ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಲಿಲ್ಲ. ಬಂದ, ಬಂದ ಕೆಲವೇ ಮಾಮೂಲಿಯಂತೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣ ಬಳಸಿದರು.

ಕೆಲವು ಖಾಸಗಿ ಬಸ್‌ಗಳು ಗ್ರಾಮಾಂತರ ಪ್ರದೇಶದಿಂದ ಬಂದಿದ್ದು, ವಿದ್ಯಾರ್ಥಿಗಳು ಸಾವನ್ನೂ ಲೆಕ್ಕಿಸದೆ ಬಸ್ ಟಾಪ್‌ಗಳ ಮೇಲೆ ಕುಳಿತು ನಗರಕ್ಕೆ ಆಗಮಿಸಿದರು. ಪರಿಸ್ಥಿತಿಯ ಲಾಭ ಪಡೆದ ಖಾಸಗಿ ಬಸ್‌ನವರು ಚಿತ್ರದುರ್ಗದ ಕಡೆ ಪ್ರಯಾಣ ಬೆಳೆಸಲು ವಿದ್ಯಾರ್ಥಿಗಳು ಸಂಖ್ಯೆ ಹೆಚ್ಚಾದ ಕೂಡಲೇ ಜಾಗೃತರಾಗಿ ಬೇರೆ, ಬೇರೆ ಕಡೆ ಹೋಗಬೇಕಾದ ಖಾಸಗಿ ಬಸ್‌ಗಳು ಚಿತ್ರದುರ್ಗ ಕಡೆ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೊರಟವು. ಖಾಸಗಿ ಬಸ್‌ಗಳ ಜಾಣತನದಿಂದ ಕೆಲವೇ ನಿಮಿಷದಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಬರೆಯಲು ಹೋಗಲು ಅನುಕೂಲವಾಯಿತು.

ಏ.17 ಗುರುವಾರ ಇಂದು ಸಹ ಸಿಇಟಿ ಪರೀಕ್ಷೆ ಇದ್ದು, ಕೆಎಸ್‌ಆರ್‌ಟಿಸಿ ಸಿಬ್ಬಂದಿ ಈಗಲಾದರೂ ಗಮಹರಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಮಾಡಬೇಕಿದೆ. ದೂರದೂರದ ಊರುಗಳಿಗೆ ಹೋಗಿ ಪರೀಕ್ಷಾ ಕೇಂದ್ರಗಳನ್ನು ಹುಡುಕಿ ಪರೀಕ್ಷೆ ಬರೆಯಬೇಕಿದೆ. ಈ ಬಾರಿ ಪರೀಕ್ಷಾ ಕೇಂದ್ರ ಪ್ರವೇಶ ಮುನ್ನವೇ ಹಲವಾರು ಬಾರಿ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚು ಬಸ್‌ಗಳ ವ್ಯವಸ್ಥೆ ಆಗಬೇಕೆಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ