ಕನ್ನಡಪ್ರಭ ವಾರ್ತೆ ಕುಂದಾಪುರ
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ 2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅವಿರತ ಶ್ರಮದ ಫಲಶ್ರುತಿಯಾಗಿ ಅದ್ಭುತ ಫಲಿತಾಂಶ ದಾಖಲಿಸಿದ್ದಾರೆ.ಇಲ್ಲಿನ ವಿದ್ಯಾರ್ಥಿನಿ ಅಮೂಲ್ಯ ಸಿ. ಶೆಟ್ಟಿ ಎಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ 209ನೇ ರ‍್ಯಾಂಕ್ ಗಳಿಸಿದ್ದಾರೆ. ಅಲ್ಲದೇ ಎನ್. ಶ್ರೇಯಸ್ (ಎಂಜಿನಿಯರಿಂಗ್ 1242, ಬಿಎಸ್ಸಿ ಅಗ್ರಿಕಲ್ಚರ್ 486, ಅನುಷ್ ನಾಯಕ್ (ಎಂಜಿನಿಯರಿಂಗ್ 1795, ಬಿಎಸ್ಸಿ ಅಗ್ರಿ 1054), ಚೈತ್ರಾ (ಎಂಜಿನಿಯರಿಂಗ್ 2103, ಬಿಎಸ್ಸಿ ಅಗ್ರಿ 571), ಸಾತ್ವಿಕ್ ಕೆ.ಆರ್. (ಎಂಜಿನಿಯರಿಂಗ್ 2894), ಅನನ್ಯ (ಎಂಜಿನಿಯರಿಂಗ್ 3066, ಬಿಎಸ್ಸಿ ಅಗ್ರಿ 2348), ಸಂಜನಾ ಶ್ಯಾನುಭಾಗ್ (ಎಂಜಿನಿಯರಿಂಗ್ 3603), ಕೀರ್ತನಾ ಎಂಜಿನಿಯರಿಂಗ್ 3746, ಬಿಎಸ್ಸಿ ಅಗ್ರಿ 2069), ಬಿ. ನಾಗೇಂದ್ರ ಭಟ್ (ಎಂಜಿನಿಯರಿಂಗ್ 3952), ರಂಜಿತಾ (ಎಂಜಿನಿಯರಿಂಗ್ 4119, ಬಿಎಸ್ಸಿ ಅಗ್ರಿ 2574), ಭೂಮಿಕಾ (ಎಂಜಿನಿಯರಿಂಗ್ 4481), ಸುಮಿತ್ರಾ ಭಟ್ (ಎಂಜಿನಿಯರಿಂಗ್ 5066), ಅಪೂರ್ವ ಎಸ್. (ಎಂಜಿನಿಯರಿಂಗ್ 5123, ಬಿಎಸ್ಸಿ ಅಗ್ರಿ 4037), ಮಹಮ್ಮದ್ ಸಮೀರ್ (ಎಂಜಿನಿಯರಿಂಗ್ 5788, ಬಿಎಸ್ಸಿ ಅಗ್ರಿ 4183), ಹರಿಕೃಪಾ ಎಮ್. ಎಸ್. (ಎಂಜಿನಿಯರಿಂಗ್ 6232, ಬಿಎಸ್ಸಿ ಅಗ್ರಿ 3343), ಪಿ. ಪ್ರಣವ್ ಪೂಜಾರಿ (ಎಂಜಿನಿಯರಿಂಗ್ 6725), ವಿಶಾಲ್ ಮೇಸ್ತ (ಎಂಜಿನಿಯರಿಂಗ್ 7161. ಬಿಎಸ್ಸಿ ಅಗ್ರಿ 3003), ಸೃಜನ್ ಎಸ್. ದೇವಾಡಿಗ (ಎಂಜಿನಿಯರಿಂಗ್ 7793, ಬಿಎಸ್ಸಿ ಅಗ್ರಿ 5245), ಶ್ರೇಯಾಶ್ರೀ (ಇಂ 8167), ಮಣಿಕಂಠ (ಎಂಜಿನಿಯರಿಂಗ್ 8413), ಸಾಗರ್ ವಿಶ್ವನಾಥ್ (ಎಂಜಿನಿಯರಿಂಗ್ 8531), ಎಚ್. ಜಿ. ವೈಷ್ಣವಿ ಅರಸ್ (ಎಂಜಿನಿಯರಿಂಗ್ 8922), ಸನ್ನಿಧಿ (ಎಂಜಿನಿಯರಿಂಗ್ 9018), ನಿಶಾ (ಎಂಜಿನಿಯರಿಂಗ್ 9251), ದೀಕ್ಷಿತಾ (ಎಂಜಿನಿಯರಿಂಗ್ 9358), ನಿಧಿಶ್ರೀ (ಎಂಜಿನಿಯರಿಂಗ್ 9495) ರ‍್ಯಾಂಕ್ ದಾಖಲಿಸಿದ್ದಾರೆ.ಅನುಭವಿ ಉಪನ್ಯಾಸಕರಿಂದ ಸಿಇಟಿ/ ನೀಟ್/ ಜೆಇಇ ತರಬೇತಿಯನ್ನು ಕಾಲೇಜು ಅವಧಿಯಲ್ಲಿ ನೀಡುತ್ತಾ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಈ ತರಬೇತಿಯ ಸದುಪಯೋಗವನ್ನು ಪಡೆದುಕೊಂಡು ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ - ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.