ಕನ್ನಡಪ್ರಭ ವಾರ್ತೆ, ಚಾಮರಾಜನಗರ
ನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕರ್ನಾಟಕ ರಂಗ ಪರಿಷತ್ತು, ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ ಸಂಯುಕ್ತಾಶ್ರಯದಲ್ಲಿ ನಡೆದ ರಾಜ್ಯಮಟ್ಟದ ಸಿಜಿಕೆ ರಂಗಪ್ರಶಸ್ತಿ ಪ್ರದಾನ ಹಾಗೂ ಸಾವಿತ್ರಿಬಾಯಿಫುಲೆ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷ್ಣಸ್ವಾಮಿ ಅವರು ಬೀದಿ ನಾಟಕಗಳ ಮೂಲಕ ರಂಗಭೂಮಿಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಕಲಾವಿದರ ಕಲೆಯನ್ನು ಸಮಾಜ ಗುರುತಿಸಿ ಪೋತ್ಸಾಹಿಸಿದಾಗ ಮಾತ್ರ ಕಲೆ ಬೆಳೆಯಲು ಸಾಧ್ಯ. ಕೊಳ್ಳೇಗಾಲದ ಹಾರ್ಮೋನಿಯಂ ಮತ್ತು ಕೀಬೋರ್ಡ್. ಕಲಾವಿದ ವೆಂಕಟೇಶ್, ರಂಗಭೂಮಿ ಕಲಾವಿದ ಶಾಂತರಾಜು ಅವರಿಗೆ ಸಿಜಿಕೆ ಪ್ರಶಸ್ತಿ ನೀಡಿ ಗೌರವಿಸುವುದು ಸಂತಸ ತಂದಿದೆ ಇಂತಹ ಕಾರ್ಯಕ್ರಮಗಳು ಕಲಾವಿದರ ತವರೂರು ಜಿಲ್ಲೆಯಲ್ಲಿ ಹೆಚ್ಚ ಹೆಚ್ಚು ನಡೆಯಬೇಕಿದೆ ಎಂದರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ಮಾತನಾಡಿ, ಜಿಲ್ಲೆಯ ಡಾ.ರಾಜ್‌ಕುಮಾರ್ ನಾನು ಕಲಾವಿದ ಅಲ್ಲ ಕಲಾವಿದರನ್ನು ಪೋತ್ಸಾಹಿಸುವ ಸಾಮಾನ್ಯ ವ್ಯಕ್ತಿ ಎಂದು ಹೇಳುತ್ತಿದ್ದರು. ಹಿಂದೆ ದೃಶ್ಯ ಮಾಧ್ಯಮಗಳು ಹೆಚ್ಚು ಇರಲಿಲ್ಲ. ವರ್ಷಕ್ಕೊಂದು, ಆರು ತಿಂಗಳಿಗೆ ನಾಟಕ ಪ್ರದರ್ಶನ ಹಳ್ಳಿಗಳಲ್ಲಿ ಇರುತ್ತಿತ್ತು .ಭೂ ಕೈಲಾಸ ಮಾಡುವ ಸಂದರ್ಭದಲ್ಲಿ, ಬಬ್ರುವಾಹನ ಬಂದ ಸಂದರ್ಭದಲ್ಲಿ ಅವರಿಗೆ ಜನರು ಎದ್ದು ನಿಂತು ಕೈ ಮುಗಿದು ನಮಸ್ಕಾರ ಮಾಡುತ್ತಿದ್ದರು. ಪಾತ್ರದ ಹೆಸರಿಗೂ ಮಾಡುತ್ತಿದ್ದರು. ಅಂತಹ ಕಲೆ ಇತ್ತು. ನಟನೆ ಮಾಡುವ ಕಲಾವಿದರಿಗೆ ನೋಡಿದರೆ ಈಗಾಗಲೂ ಎದ್ದು ನಿಂತು ಕೈ ಮುಗಿಯಬೇಕು. ಎಂಬ ಗ್ರಾಮೀಣ ಪಾತ್ರ ಇರವುದನ್ನು ನಾವು ನೋಡಿದ್ದೇವೆ. ಕಲಾವಿರದು ಒಳ್ಳೆಯ ಜೀವನ ಸಾಗಿದ್ದಾರೆ. ಸಮಾಜಕ್ಕಾಗಿ ಉತ್ತಮ ಸಂದೇಶ ನೀಡಬೇಕೆಂದು ನಾಟಕಗಳು ಪ್ರದರ್ಶನ ಮಾಡುತ್ತಿದ್ದರು. ಜಾತಿ ವ್ಯವಸ್ಥೆ, ಬಾಲ್ಯವಿವಾಹ ಸೇರಿದಂತೆ ಸಮಾಜ ಮೌಡ್ಯದ ವಿರುದ್ಧ ಎಚ್ಚರಿಸಲು ನಾಟಕ ಮಾಡುತ್ತಿದ್ದರು. ಹಣಕ್ಕಾಗಿ ರಂಗ ಪ್ರದರ್ಶನ ಮಾಡುತ್ತಿರಲಿಲ್ಲ ಎಂದರು.ರಂಗಭೂಮಿ ಕಲಾವಿದ ನಿಜವಾಗಲೂ ಸಾಕಷ್ಟು ಶ್ರಮವಹಿಸಿ, ಅಭ್ಯಾಸ ಮಾಡಿ. ಪ್ರದರ್ಶನ ಮಾಡಬೇಕಿತ್ತು. ಅಂತಹ ಒಳ್ಳೆಯ ಅವಕಾಶಗಳು ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿದೆ. ಆದರೆ ಇಂದು ಸಾವಿತ್ರಿಬಾಯಿಫುಲೆ ನಾಟಕ ಮಾಡುತಿದ್ದಾರೆ. ಶಿಕ್ಷಣ ವಂಚಿತ ವ್ಯವಸ್ಥೆ ಕಾಲದಲ್ಲಿ ಶಾಲೆ ತೆರೆದು ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸಿದವರು ಸಾವಿತ್ರಿಬಾಯಿಫುಲೆ ಅವರನ್ನು ಸ್ಮರಿಸಿಕೊಳ್ಳುವುದು. ಎಲ್ಲರ ಕರ್ತವ್ಯವಾಗಿದೆ ಎಂದರು. ಕೊಳ್ಳೇಗಾಲದ ಹಾರೋನಿಯಂ ಮತ್ತು ಕೀಬೋರ್ಡ್ ಕಲಾವಿದ ವೆಂಕಟೇಶ್, ರಂಗಭೂಮಿ ಕಲಾವಿದ ಶಾಂತರಾಜು ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡಯ್ಯ ಪ್ರಶಸ್ತಿ ಪ್ರದಾನ ಮಾಡಿದರು.ಮನಮುಟ್ಟಿದ ಸಾವಿತ್ರಿಬಾಯಿಫುಲೆ ನಾಟಕ: ಕೆ.ವಿ.ಸುಬ್ಬಣ್ಣ ರಂಗ ಸಮೂಹ ಹೆಗ್ಗೋಡು ಅಭಿನಯಿಸಿದ ನಾಟಕ ಸಾವಿತ್ರಿಬಾಯಿ ಫುಲೆ ನಾಟಕ ಉತ್ತಮ ಪ್ರದರ್ಶನಗೊಂಡು ಪೇಕ್ಷಕರ ಕಣ್ಣಲ್ಲಿ ನೀರು ತರಿಸಿ ಮನಮುಟ್ಟಿತು. ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಎ.ಎಸ್.ಶೈಲಜಾ ಪ್ರಕಾಶ್ ಒಂದು ಘಂಟೆ ಕಾಲ ನಟಿಸುವ ಮೂಲಕ ಪ್ರೇಕ್ಷಕರಿಂದ ಚಪ್ಪಾಳೆಗಿಟ್ಟಿಸಿಕೊಂಡು ಮೆಚ್ಚುಗೆ ಪಾತ್ರರಾದರು. ಸಾಹಿತಿ ಕೆ.ಶ್ರೀಧರ್, ಚೆಸ್ಕಾಂ ಉಪಾಧ್ಯಕ್ಷ ಎನ್.ಮಹೇಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಮಹದೇವಸ್ವಾಮಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಹರಿಕಥೆ ವಿದ್ವಾಂಸ ಶಿವಕುಮಾರಶಾಸ್ತ್ರಿ, ಸಮಾಜ ಸೇವಕ ನಾಗರಾಜು, ಬಿಇಒ ಹನುಮಶೆಟ್ಟಿ, ಕರ್ನಾಟಕ ರಂಗ ಪರಿಷತ್ತು ರಾಜ್ಯ ಸಿ.ಎಂ.ನರಸಿಂಹಮೂರ್ತಿ, ಜಿಲ್ಲಾಧ್ಯಕ್ಷ ಉಮ್ಮತ್ತೂರು ಬಸವರಾಜು,ಕಲೆ ನಟರಾಜು ಹಾಜರಿದ್ದರು.