ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಡಿ. ಕೋಟೆ ಕಬಿನಿ ಡ್ಯಾಂ ಹಿನ್ನೀರು ಪ್ರದೇಶ ಪರಿಸರ ಸೂಕ್ಷ್ಮ ವಲಯವಾಗಿದೆ. ಆದರೆ, ಈ ಭಾಗದಲ್ಲಿ ಅಕ್ರಮವಾಗಿ 10 ಹೆಚ್ಚು ರೆಸಾರ್ಟ್, ಹೋಂ ಸ್ಟೇಗಳನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ವಸತಿ ಸಚಿವ ಜಮೀರ್ ಅವರ ರೇಸಾರ್ಟ್ ಕೂಡ ಸೇರಿದೆ ಎಂದು ದೂರಿದರು.
ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರು ನಿಷೇಧಿತ ಅರಣ್ಯ ಪ್ರದೇಶದಲ್ಲಿ ಅಕ್ರಮ ವಸತಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಜಮೀರ್ ಪಿಎ ಸರ್ಫರಾಜ್ ಮತ್ತು ಅವರ ಆಪ್ತರ ಹೆಸರಿನಲ್ಲಿ ರೆಸಾರ್ಟ್ ತೆರೆದಿದ್ದಾರೆ. ಡಿ ದರ್ಜೆ ಗುಮಾಸ್ತ ಸರ್ಫರಾಜ್ ಕಳೆದ 25 ವರ್ಷದಿಂದ ಜಮೀರ್ ಜೊತೆ ಇದ್ದಾರೆ ಎಂದು ಅವರು ಆರೋಪಿಸಿದರು.ಎಚ್.ಡಿ. ಕೋಟೆ 4 ಡ್ಯಾಮ್ ಗಳು ಇರುವ ತಾಲೂಕು. ಜೀವ ವೈವಿಧ್ಯಗಳಿರುವ ಬಂಡೀಪುರ, ನಾಗರಹೊಳೆ ಒಂದುಗೂಡುವ ಪ್ರದೇಶ. ಇಂತಹ ಪ್ರದೇಶದಲ್ಲಿ ಹಲವು ಅಕ್ರಮ ರೆಸಾರ್ಟ್ ಗಳು ತಲೆ ಎತ್ತಿವೆ. ಅರಣ್ಯ ಇಲಾಖೆಯ ನೀತಿ ನಿಯಮಗಳನ್ನು ಗಾಳಿಗೆ ತೂರಿ ರೆಸಾರ್ಟ್ ಗಳನ್ನು ನಿರ್ಮಾಣ ಮಾಡಿದ್ದಾರೆ. ಸರ್ಫರಾಜ್ ಸರ್ಕಾರಿ ನೌಕರನಾಗಿ ಬಿಜಿನೆಸ್ ಮಾಡುತಿದ್ದಾನೆ. ಒಬ್ಬ ಡಿ ಗ್ರೂಪ್ ನೌಕರ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ರೆಸಾರ್ಟ್ ಮಾಡಲಿಕ್ಕೆ ಹೇಗೆ ಸಾಧ್ಯ? ಇದರ ಹಿಂದೆ ಸಚಿವ ಜಮೀರ್ ಇದ್ದಾರೆ ಎಂದರು.
ರೆಸಾರ್ಟ್ ನೋಡಿಕೊಳ್ಳಲು ಒಬ್ಬ ಮೌಲ್ವಿ ಇದ್ದಾನೆ. ಒಬ್ಬ ಅತಿಥಿಗೆ 25000 ಚಾರ್ಜ್ ಮಾಡುತ್ತಾರೆ. ಆ ರೆಸಾರ್ಟ್ ಪಕ್ಕದಲ್ಲೇ ಸರ್ಫರಾಜ್ ಪರ್ಸನಲ್ ಡ್ರೈವರ್ 4 ಎಕೆರೆ ಜಾಗದಲ್ಲಿ 100 ಕೋಟಿ ಇನ್ವೆಸ್ಟ್ ಮಾಡಿ ದೊಡ್ಡ ಬಿಲ್ಡಿಂಗ್ ಕಟ್ಟುತಿದ್ದಾರೆ. ಒಬ್ಬ ಡ್ರೈವರ್ ಇಷ್ಟು ಇನ್ವೆಸ್ಟ್ ಮಾಡಲು ಸಾಧ್ಯವೇ. ಈ ರೀತಿಯ ಮಿಸ್ಸಿಂಗ್ ಲಿಂಕ್ ಗೆ ನಮಗೆ ಲಿಂಕ್ ಬೇಕು. ಅಲ್ಲಿ ಒಂದು ಸಿl7 ಬಾರ್ ಇದೆ. ಸಿl7 ರಲ್ಲಿ ಬೇರೆ ಕಡೆಗೆ ಪಾರ್ಸಲ್ ಕೊಡುವ ಹಾಗಿಲ್ಲ. ಆದರೆ, ರಾತ್ರಿ 11 ಗಂಟೆಯವರೆಗೆ ಓಪನ್ ಇರುತ್ತದೆ. ಇದೆಲ್ಲ ಜಮೀರ್ ಅಹಮದ್ ಖಾನ್ ಕೈವಾಡ ಇಲ್ಲದೇ ನಡೆಯೋದಿಲ್ಲ ಎಂದು ಅವರು ದೂರಿದರು.
ಇದಕ್ಕೆ ಸಂಬಂಧಿಸಿದಂತೆ ಒಂದು ಸತ್ಯ ಶೋಧನೆ ಸಮಿತಿ ಮಾಡುತ್ತೇವೆ. ಇದನ್ನು ನಮ್ಮ ರಾಜ್ಯ ನಾಯಕರ ಗಮನಕ್ಕೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಅಕ್ರಮ ರೆಸಾರ್ಟ್ ಇರುವಲ್ಲಿಗೆ ಮಾಧ್ಯಮ ಪ್ರತಿನಿಧಿಗಳನ್ನು ಕರೆದುಕೊಂಡು ಹೋಗಿ ವಾಸ್ತವಾಂಶ ಪರಿಶೀಲನೆ ಮಾಡುತ್ತೇವೆ ಎಂದರು.
ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ನಗರ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಮೊದಲಾದವರು ಇದ್ದರು.