ಮಹಾಬಲೇಶ್ವರ ಮಂದಿರಕ್ಕೆ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರ ಭೇಟಿ

KannadaprabhaNewsNetwork |  
Published : Apr 02, 2026, 02:30 AM IST
ನವೀಕರಣ ಪ್ರಾಂಗಣ ಲೋಕಾರ್ಪಣೆ ಗೊಳಿಸಿರುವುದು | Kannada Prabha

ಸಾರಾಂಶ

ಇಲ್ಲಿನ ಮಹಾಬಲೇಶ್ವರ ಮಂದಿರದ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ, ಸುಪ್ರೀಮ್ ಕೋರ್ಟ್ ನಿವೃತ್ತ ಮುಖ್ಯನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಮಂಗಳವಾರ ಮಂದಿರಕ್ಕೆ ಭೇಟಿ ನೀಡಿ ದೇವಾಲಯದಲ್ಲಿನ ಅಭಿವೃದ್ದಿ ಕಾರ್ಯಗಳಾದ ಹೊರಾಂಗಣದಲ್ಲಿ ಗ್ರಾನೈಟ್ ಕಲ್ಲು ಹಾಕಿದ್ದನ್ನು ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಗೋಕರ್ಣ

ಇಲ್ಲಿನ ಮಹಾಬಲೇಶ್ವರ ಮಂದಿರದ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ, ಸುಪ್ರೀಮ್ ಕೋರ್ಟ್ ನಿವೃತ್ತ ಮುಖ್ಯನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಮಂಗಳವಾರ ಮಂದಿರಕ್ಕೆ ಭೇಟಿ ನೀಡಿ ದೇವಾಲಯದಲ್ಲಿನ ಅಭಿವೃದ್ದಿ ಕಾರ್ಯಗಳಾದ ಹೊರಾಂಗಣದಲ್ಲಿ ಗ್ರಾನೈಟ್ ಕಲ್ಲು ಹಾಕಿದ್ದನ್ನು ವೀಕ್ಷಿಸಿದರು. ಜೀರ್ಣಾವಸ್ಥೆ ತಲುಪಿದ್ದ ಇಂದ್ರೇಶ್ವರ ಮತ್ತು ಶಾಸ್ತ್ರೇಶ್ವರದ ಪುನರ್ ನಿರ್ಮಾಣ, ದೇವಸ್ಥಾನದ ಒಳಾಂಗಣ ಆವಾರಕ್ಕೆ ಗ್ರಾನೈಟ್ ಕಲ್ಲು ಹಾಕಿದ್ದಕ್ಕೆ, ದೇವಸ್ಥಾನದ ದಕ್ಷಿಣದ್ವಾರದ ನವೀಕರಣ ಮುಂತಾದ ಕಾರ್ಯ ಪರಿಶೀಲನೆ ನಡೆಸಿದರು.ಬಳಿಕ ಮುಂದೆ ಕೈಗೊಳ್ಳಬೇಕಾದ ಅಭಿವೃದ್ದಿ ಕಾರ್ಯಗಳ ಕುರಿತು ಸಭೆ ನಡೆಸಿದರು. ಭಕ್ತರಿಗೆ ವಿವಿಧ ಅನುಕೂಲತೆಗಳು ಹಾಗೂ ಇಲ್ಲಿಯವರೆಗಿನ ಕಾರ್ಯಗಳ ಪ್ರಗತಿ ಕುರಿತು ಮಾಹಿತಿ ಪಡೆದಿದ್ದು ಹಲವು ಸಲಹೆ ಸೂಚನೆ ನೀಡಿದರು. ಈ ವೇಳೆ ಮಂದಿರದ ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿ ಕುಮಟಾ ಉಪವಿಭಾಗಾಧಿಕಾರಿ ಶ್ರವಣಕುಮಾರ, ಸದಸ್ಯರಾದ ವೇ. ಗಣಪತಿ ಹಿರೇ ವೇ. ಪರಮೇಶ್ವರ ರಮಣಿಪ್ರಸಾದ, ವೇ. ಸುಬ್ರಹ್ಮಣ್ಯ ಅಡಿ, ಮಹೇಶ ಹಿರೇಗಂಗೆ, ಡಿವೈಎಸ್ಪಿ ಗಿರೀಶ, ಮಂದಿರದ ವ್ಯವಸ್ಥಾಪಕರು ಸ್ಥಳೀಯ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು ಸಹಕರಿಸಿದರು.ಆತ್ಮಲಿಂಗಕ್ಕೆ ಪೂಜೆ, ದೇವಾಲಯದ ಆವಾರದಲ್ಲಿ ನವೀಕರಣಗೊಂಡ ಪ್ರಾಂಗಣ ಲೋಕಾರ್ಪಣೆ:ಸಭೆಯ ಮೊದಲು ಬಿ.ಎನ್. ಶ್ರೀಕೃಷ್ಣ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ಮಂದಿರದ ಅರ್ಚಕ ವೇ. ಅನಂತರಾಜ ಅಡಿ ಪೂಜಾ ಕೈಂಕರ್ಯ ನೆರವೇರಿಸಿದರು.

ಇದಕ್ಕೂ ಮೊದಲು ಮಂದಿರದ ಆವಾರದಲ್ಲಿ ನವೀಕರಣಗೊಂಡ ಭವನವನ್ನ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಪ್ರಾಂಗಣ ಎಂಬ ನಾಮಕರಣ ಅನಾವರಣಗೊಳಿಸಿ ಲೋಕಾರ್ಪಣೆಗೊಳಿಸಿದರು. ಈ ವೇಳೆ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷ, ಜಿಲ್ಲಾಮತ್ತು ಸತ್ರ ನ್ಯಾಯಾಧೀಶ ಪರಮೇಶ್ವರ ಪಿ., ಕಾರ್ಯದರ್ಶಿ ಕುಮಟಾ ಉಪವಿಭಾಗಾಧಿಕಾರಿ ಶ್ರವಣಕುಮಾರ, ಸದಸ್ಯರಾದ ವೇ.ಪರಮೇಶ್ವರ ರಮಣಿಪ್ರಸಾದ, ವೇ.ಸುಬ್ರಹ್ಮಣ್ಯ ಅಡಿ, ವೇ. ಗಣಪತಿ ಹಿರೇ, ಮಹೇಶ ಹಿರೇಗಂಗೆ ಹಾಗೂ ವ್ಯವಸ್ಥಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟೋಲ್ ಶುಲ್ಕ ಏರಿಕೆ: ಸಾರ್ವಜನಿಕರ ತೀವ್ರ ವಿರೋಧ
ಸ್ಥಳೀಯರ ಸಹಕಾರದಿಂದ ನಯಂಪಳ್ಳಿಯ 50 ಮನೆಗಳಿಗೆ ನೀರು ಸಂಪರ್ಕ