ಸಾಹಿತ್ಯಕ ಚಟುವಟಿಕೆ ಹೆಚ್ಚಿಸುವುದೇ ಚಕೋರ ಗುರಿ

KannadaprabhaNewsNetwork |  
Published : Feb 02, 2025, 11:45 PM IST
ಸಿಕೆಬಿ-1ಚಕೋರ ಸಾಹಿತ್ಯ ವಿಚಾರ ವೇದಿಕೆ ಉಧ್ಘಾಟನಾ ಸಮಾರಂಭದಲ್ಲಿ  ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ  ಅಧ್ಯಕ್ಷ  ಎಲ್.ಎನ್ ಮುಕುಂದರಾಜ್ ನೀಡಿದರು | Kannada Prabha

ಸಾರಾಂಶ

ಜನರಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯವನ್ನು ಪ್ರಸಾರ ಮಾಡಬೇಕು. ಜಿಲ್ಲೆಯಾದ್ಯಂತ ಸಣ್ಣಪುಟ್ಟ ಊರುಗಳಲ್ಲಿಯೂ ಕೂಡ ಚಕೋರ ವೇದಿಕೆಯ ಮುಖಾಂತರ ಸಾಹಿತ್ಯಕ ಕಾರ್ಯಕ್ರಮಗಳು ಜರುಗುವಂತಾಗಬೇಕು. ಜಿಲ್ಲೆಯಾದ್ಯಂತ ಸಣ್ಣಪುಟ್ಟ ಊರುಗಳಲ್ಲಿಯೂ ಕೂಡ ಚಕೋರ ವೇದಿಕೆಯ ಮುಖಾಂತರ ಸಾಹಿತ್ಯಕ ಕಾರ್ಯಕ್ರಮಗಳು ಜರುಗುವಂತಾಗಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸರ್ವ ಭಾರತೀಯರಿಗೂ ದಾರಿದೀಪವಾದ ಸಂವಿಧಾನವನ್ನು ರಚಿಸಿಕೊಟ್ಟ ಬಾಬಾಸಾಹೇಬ್ ಅಂಬೇಡ್ಕರರು ಈ ನೆಲದ ರೋಗಗಳ ಮೂಲವಾದ ಜಾತಿಯ ವಿನಾಶದಲ್ಲೇ ಈ ದೇಶದ ಏಳಿಗೆಯಿದೆಯೆಂದರೋ, ಅಂತೆಯೇ ಕನ್ನಡದ ನಿಜದನಿಯಾದ ಕುವೆಂಪು ಕೂಡಾ ''''''''ಚಾತುರ್ವಣ್ಯವನ್ನು ತಿದ್ದುವುದಲ್ಲ ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು'''''''' ಎಂದೇ ಪ್ರತಿಪಾದಿಸಿದ್ದರು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್ ಮುಕುಂದರಾಜ್ ತಿಳಿಸಿದರು.

ನಗರ ಹೊರವಲಯದ ವಿಷ್ಣುಪ್ರಿಯ ಕಾಲೇಜ್ ಆಫ್ ಮ್ಯಾನೇಜ್‌ ಮೆಂಟ್ ಸ್ಟಡೀಸ್ ನ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ನಡೆದ ಚಕೋರ ಸಾಹಿತ್ಯ ವಿಚಾರ ವೇದಿಕೆ ಚಿಕ್ಕಬಳ್ಳಾಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾನತೆ ಸಾರಿದ ಶರಣರು

ರಾಷ್ಟ್ರಕವಿ ಕುವೆಂಪು, ‘ಮನುಷ್ಯ ಜಾತಿ ತಾನೊಂದೆ ವಲಂ'''''''' ಎಂದ ಪಂಪನಿಂದ ತೊಡಗಿ, ಕಾಯಕ ಸಮಾನತೆಯ ಮೂಲಕವೇ ಮನುಷ್ಯ ಸಮಾನತೆಯನ್ನು ಸಾರಿದ ಶರಣರು, ತತ್ವಪದಕಾರರುಗಳ ನಿಜ ವಾರಸುದಾರರು ಮಾತ್ರವಲ್ಲ, ನೆಲದ ಸಮುದಾಯಗಳೆಲ್ಲವನ್ನೂ ತಾಯ್ತನದ ಕರುಳಿಂದಲೇ ಪ್ರೀತಿಸಿದ ಗಾಂಧೀ ಮತ್ತು ಅಂಬೇಡ್ಕರ್ ಬಯಸಿದ ಅರ್ಥಪೂರ್ಣ ಪ್ರಜಾಸತ್ತೆಯ ಕನಸನ್ನು ಕಂಡ ಮನುಷ್ಯಲೋಕದ ಮಹತ್ವದ ಆಸ್ತಿಯೂ ಹೌದೆಂದರು.

"ಸಾಹಿತ್ಯಾಸಕ್ತರನ್ನು ಒಟ್ಟುಗೂಡಿಸಿ ಸಾಹಿತ್ಯಕ ಚಟುವಟಿಕೆಗಳನ್ನು ಹೆಚ್ಚಿಸುವ ದೃಷ್ಟಿಕೋನದಿಂದ ಪ್ರತಿ ಜಿಲ್ಲೆಯಲ್ಲಿ ಚಕೋರ ಸಾಹಿತ್ಯ ವಿಚಾರ ವೇದಿಕೆಯನ್ನು ಪ್ರಾರಂಭಿಸುತ್ತಿದ್ದೇವೆ. ಜನರಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯವನ್ನು ಪ್ರಸಾರ ಮಾಡಬೇಕು. ಜಿಲ್ಲೆಯಾದ್ಯಂತ ಸಣ್ಣಪುಟ್ಟ ಊರುಗಳಲ್ಲಿಯೂ ಕೂಡ ಚಕೋರ ವೇದಿಕೆಯ ಮುಖಾಂತರ ಸಾಹಿತ್ಯಕ ಕಾರ್ಯಕ್ರಮಗಳು ಜರುಗುವಂತಾಗಬೇಕು ಎಂದರು.

ಚಕೋರ ಕಾರ್ಯಚಟುವಟಿಕೆ

ಪ್ರತಿ ಜಿಲ್ಲೆಗೆ ಇಬ್ಬರು ಸಂಚಾಲಕರನ್ನು ನೇಮಿಸಲಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲೆಗೆ ಈ ಧರೆ ಪ್ರಕಾಶ್ ಮತ್ತು ಪಾತಮುತ್ತಕಹಳ್ಳಿ ಮು. ಚಲಪತಿಗೌಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದಲ್ಲದೇ, ಅಕಾಡೆಮಿಯ ಕನಸಿನ ಕೂಸಾದ ''''''''ಚಕೋರ''''''''ದ ಕಾರ್ಯ ಚಟುವಟಿಕೆಗಳ ಸ್ವರೂಪ ಮತ್ತು ಆಶಯಗಳನ್ನು ಪರಿಚಯಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಮಾತನಾಡಿ, ಪುಸ್ತಕ ಓದುವ ಸಂಸ್ಕೃತಿ ಇಂದು ನಶಿಸಿ ಹೋಗುತ್ತಿದ್ದು, ನಾವು ನಮ್ಮ ಮಕ್ಕಳ ಕೈಯಲ್ಲಿ ಮೊಬೈಲ್ ಗಳ ಬದಲಿಗೆ ಪುಸ್ತಕಗಳನ್ನು ನೀಡುವಂತಾಗಬೇಕು ಎಂದರು.

ಸಾಹಿತ್ಯ ಮನೆ, ಮನ ತಲುಪಲಿ

ಕನ್ನಡ ಭಾಷಾ ಸಾಹಿತ್ಯ ಚಿಂತನೆ ಮನೆ, ಮನಗಳಿಗೆ ತಲುಪಿಸುವ ಕೆಲಸವಾಗಬೇಕು.ಇಂದಿನ ಹೊಸ ಪೀಳಿಗೆಗಳಿಂದ ಕಥೆ, ಕವನ, ಕಾವ್ಯಗಳು ಸ್ವಂತ ಶಕ್ತಿಯಿಂದ ಬರವಣಿಗೆ ರೂಪದಲ್ಲಿ ಹೊರ ಬರಬೇಕು. ಹೊಸಬರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಮೂಲಕ ಯುವ ಕವಿಗಳಿಗೆ ಕವನ ವಾಚನ ತರಬೇತಿ ನೀಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ನ ಪ್ರಾಶುಪಾಲೆ ಡಾ. ಆನಂದಮ್ಮ, ವಿಷ್ಣುಪ್ರಿಯ ಕಾಲೇಜ್ ಆಫ್ ಮ್ಯಾನೇಜ್‌ ಮೆಂಟ್ ಸ್ಟಡೀಸ್ ನ ಪ್ರಾಂಶುಪಾಲ ಎನ್.ನಟರಾಜ್, ಹಿರಿಯ ಸಾಹಿತಿಗಳಾದ ಕಾಗತಿ ವಿ. ವೆಂಕಟರತ್ನಂ‌, ಸರಸಮ್ಮ, ನಾಟಕ ಅಕಾಡೆಮಿ ಸದಸ್ಯ ಕೆ.ವಿ ನಾಯಕ (ಅಮಾಸ), ವಿಷ್ಣುಪ್ರಿಯ ಶಿಕ್ಷಣ ಸಂಸ್ಥೆಗಳು ಸಂಸ್ಥಾಪಕ ರಾಮಚಂದ್ರ ರೆಡ್ಡಿ, ಚಿಕ್ಕಬಳ್ಳಾಪುರ ಚಕೋರ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕರಾದ ಈ ಧರೆ ಪ್ರಕಾಶ್ ಮತ್ತು ಪಾತಮುತ್ತಕಹಳ್ಳಿ ಮು. ಚಲಪತಿಗೌಡ ಹಾಗೂ ಮುತ್ತಿತರರು ಇದ್ದರು.

PREV

Recommended Stories

.ಜಮಖಂಡಿಯಲ್ಲಿ ವಿನಾಕನಿಗೆ ಅದ್ಧೂರಿ ವಿದಾಯ
ರೈತರ ಹಿತ ಕಾಪಾಡುವುದು ಮುಖ್ಯ: ಹನಮಂತ ನಿರಾಣಿ