ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕಳೆದ ಲೋಕಸಬಾ ಚುನಾವಣೆಯಲ್ಲೂ ಬಿಜೆಪಿ ಅವರಿಗೆ ಟಿಕೆಟ್ ನೀಡದೆ ವಂಚಿಸಿತು. ಪ್ರಸಕ್ತವಾಗಿ ಈಗ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲೂ ಅವರ ಪತ್ನಿಗೆ ಪಕ್ಷದ ವತಿಯಿಂದ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ಅವರ ಪತ್ನಿ ವಾಣಿ ಶಿವರಾಂಗೆ ಟಿಕೆಟ್ ನೀಡಲಿಲ್ಲ. ಕೊನೆ ಪಕ್ಷ ಅವರ ಸಮ್ಮುಖದಲ್ಲಿ ಶ್ರದ್ದಾಂಜಲಿ ಸಭೆ ನಡೆಸಿ ಮುಂದಿನ ದಿನಗಳಲ್ಲಿ ಸ್ಥಾನ, ಮಾನ ನೀಡುವ ಕುರಿತು ಚರ್ಚಿಸದೆ ಕಡೆಗಣಿಸಲಾಯಿತು. ಈ ಹಿನ್ನೆಲೆ ಅಂದು ದುಃಖತಪ್ತರಾದ ವಾಣಿ ಶಿವರಾಂ ಅವರ ಬೆಂಬಲಿಗರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವ ಎಚ್.ಸಿ. ಮಹದೇವಪ್ಪ ಅವರು, ಶಿವರಾಂ ಈ ಹಿಂದೆ ಕಾಂಗ್ರೆಸ್ಸ್‌ನಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಅವರ ಪತ್ನಿ ವಾಣಿ ಶಿವರಾಂ ಅವರ ಬೆಂಬಲಕ್ಕೆ ನಿಂತ ಹಿನ್ನೆಲೆ ಅವರು ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಹಿನ್ನೆಲೆ ಚಾ.ನಗರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಛಲವಾದಿ ಮಹಾಸಭೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದೆ. ಬಿಜೆಪಿಯ ರೈತ ವಿರೋಧಿ ನೀತಿ, ಹಿರಿಯ ನಾಯಕ ಕೆ.ಶಿವರಾಂ ಅವರ ಕಡೆಗಣನೆ, ಬೆಲೆ ಏರಿಕೆ, ರೈತರ ಖಾತೆಗೆ 15ಲಕ್ಷ ರು. ಜಮಾ ಸೇರಿದಂತೆ ನುಡಿದಂತೆ ನಡೆಯದ ಕೇಂದ್ರ ಸರ್ಕಾರದ ವಿರುದ್ಧವಾಗಿ ನಾವು ಅನಿವಾರ್ಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದೇವೆ ಎಂದರು.