ಶಾಸಕರ ಭರವಸೆಗೆ ಧರಣಿ ಹಿಂಪಡೆದ ಚಲವಾದಿ ಸಮಾಜ

KannadaprabhaNewsNetwork |  
Published : Nov 06, 2025, 03:15 AM IST
ಬೀಳಗಿ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಶಾಸಕ ಜೆ.ಟಿ.ಪಾಟೀಲ ಹಾಗೂ ಚಲವಾದಿ ಸಮಾಜದ ಮುಖಂಡರು ಭಾಗವಹಿಸಿದ್ದರು. | Kannada Prabha

ಸಾರಾಂಶ

ಡಾ.ಅಂಬೇಡ್ಕರ್‌ ಭವನದ ಕಾಮಗಾರಿ ಪ್ರಾರಂಭ ಮಾಡಲು ಅಂದಾಜು ₹1.63 ಕೋಟಿ ಕ್ರಿಯಾಯೋಜನೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೂಲಕ ಸಲ್ಲಿಸಲಾಗಿದೆ. ಭವನ ನಿರ್ಮಾಣದಲ್ಲಿ ಯಾವುದೇ ಅನುಮಾನ ಬೇಡಾ ಇದನ್ನು ಸಂಪೂರ್ಣ ಮಾಡಿಕೊಡುವುದಾಗಿ ಶಾಸಕ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಸಮುದಾಯ ಭವನ ಕಾಮಗಾರಿಯು ಅರ್ಧಕ್ಕೆ ನಿಂತಿದ್ದು ಅದನ್ನು ಪೂರ್ಣಗೊಳಿಸಬೇಕು. ಅದಕ್ಕೆ ಬೇಕಾಗುವ ಅನುದಾನ ನೀಡಿ ಕಾಮಗಾರಿ ಪ್ರಾರಂಭಿಸಬೇಕೆಂದು ಒತ್ತಾಯಿಸಿ ಚಲವಾದಿ ಸಮಾಜದ ಮುಖಂಡರು ನ.5ರಂದು ಉಪವಾಸ ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಹೇಳಿಕೆ ನೀಡಿ ಒತ್ತಾಯಿಸಿದ್ದ ಧರಣಿ ಸತ್ಯಾಗ್ರಹ ಹಿಂಪಡೆದಿದ್ದಾರೆ.

ಚಲವಾದಿ ಸಮಾಜದ ಬಾಂಧವರು ಉಪವಾಸ ಸತ್ಯಾಗ್ರಹ ಮಾಡುವ ಸುದ್ದಿ ತಿಳಿದ ಶಾಸಕ ಜೆ.ಟಿ.ಪಾಟೀಲ ಡಾ.ಅಂಬೇಡ್ಕರ್‌ ಸಮುದಾಯ ಭವನಕ್ಕೆ ಭೇಟಿ ನೀಡಿ ಸಮಾಜದ ಮುಖಂಡರ ಜೊತೆಗೆ ಚರ್ಚಿಸಿದರು. ಚಲವಾದಿ ಸಮಾಜದವರ ಬೇಡಿಕೆ ನ್ಯಾಯ ಸಮ್ಮತವಾಗಿದೆ. ಈ ನನ್ನ ಅಧಿಕಾರದ ಅವಧಿಯಲ್ಲಿ ₹1 ಕೋಟಿ ಮಂಜೂರಾಗಿ ಅದರಲ್ಲಿ ₹90 ಲಕ್ಷದ ಕಾಮಗಾರಿ ಪ್ರಾರಂಭವಾಗಿ ಅರ್ಧಕ್ಕೆ ನಿಂತಿದ್ದು, ಉಳಿದ ಹಣ ಮುಂಜೂರಾಗಿದೆ ಎಂದು ಹೇಳಿದರು.

ಅದಕ್ಕೆ ಒಪ್ಪದ ಸಮಾಜ ಮುಖಂಡರು ಸಮುದಾಯ ಭವನದ ಕಾಮಗಾರಿ ಸುಮಾರು 11 ವರ್ಷಗಳಿಂದ ಅರ್ಧಕ್ಕೆ ನಿಂತಿದೆ. ಇದಕ್ಕೆ ಸರಿಯಾದ ವ್ಯವಸ್ಥೆ ಇಲ್ಲ. ತಾಲೂಕಿನಲ್ಲಿ ಒಂದು ಸುಂದರ ಸಮುದಾಯ ಭವನ ನಿರ್ಮಾಣ ಮಾಡಿಕೊಡಿ ಈಗಾಗಲೇ ಸಮುದಾಯ ಭವನದೊಳಗೆ ಚರಂಡಿ ನೀರು ಮತ್ತು ಮಳೆ ನೀರು ಒಳಗೆ ಬರುತ್ತದೆ. ಅದನ್ನು ಮಾರ್ಪಾಡು ಮಾಡಿ ಕೆಳ ಮಹಡಿಯಲ್ಲಿ ಊಟದ ಕೋಣೆ, ಮೇಲಮಹಡಿ ನಿರ್ಮಿಸಿ ಅಲ್ಲಿ ಕಲ್ಯಾಣ ಮಂಟಪ ಮಾಡುವುದರಿಂದ ಈ ಭಾಗದ ಜನರಿಗೆ ಮತ್ತು ಸರ್ಕಾರಿ ಕಾರ್ಯಕ್ರಮ ಮಾಡಲು ಹೆಚ್ಚು ಅನುಕೂಲವಾಗುತ್ತೆದೆ. ಅದಕ್ಕೆ ಬೇಕಾಗುವ ಅನುದಾನ ಸರ್ಕಾರದಿಂದ ಒದಗಿಸಿ ನಿರ್ಮಿಸಿಕೊಡಿ ಎಂದು ಆಗ್ರಹಿಸಿದರು.

ಸಮಾಜದ ಮುಂಖಡರ ಬೇಡಿಕೆಗೆ ಸ್ಪಂದಿಸಿದ ಶಾಸಕರು, ಸುಸಜ್ಜಿತ ಕಲ್ಯಾಣ ಮಂಟಪ ಯಾವ ರೀತಿ ಇರಬೇಕು, ಅದಕ್ಕೆ ತಗಲುವ ವೆಚ್ಚ ಲೆಕ್ಕ ಹಾಕಿ ಸರ್ಕಾರದಿಂದ ಇನ್ನೂ ಉಳಿದ ಕಾಮಗಾರಿ ಪ್ರಾರಂಭ ಮಾಡಲು ಅಂದಾಜು ₹1.63 ಕೋಟಿ ಕ್ರಿಯಾಯೋಜನೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೂಲಕ ಸಲ್ಲಿಸಲಾಗಿದೆ. ಭವನ ನಿರ್ಮಾಣದಲ್ಲಿ ಯಾವುದೇ ಅನುಮಾನ ಬೇಡಾ ಇದನ್ನು ಸಂಪೂರ್ಣ ಮಾಡಿಕೊಡುವುದಾಗಿ ಹೇಳಿದರು. ಶಾಸಕರ ಮಾತಿಗೆ ಸ್ಪಂದಿಸಿದ ಚಲವಾದಿ ಸಮಾಜದ ಮುಖಂಡರು ಉಪವಾಸ ಸತ್ಯಾಗ್ರಹ ಹಿಂಪಡೆಯುವುದಾಗಿ ಹೇಳಿದರು.

ಈ ವೇಳೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ರಮೇಶ ಚವ್ಹಾಣ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸಿ.ಎಸ್.ಗಡ್ಡದೇವರಮಠ, ನಿರ್ಮಿತಿ ಕೇಂದ್ರ ಇಲಾಖೆ ಅಧಿಕಾರಿ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅನವೀರಯ್ಯ ಪ್ಯಾಟಿಮಠ, ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ, ಪಪಂ ಮಾಜಿ ಅಧ್ಯಕ್ಷ ಅನೀಲ ಗಚ್ಚಿನಮನಿ, ತಿಪ್ಪಣ್ಣ ಚಲವಾದಿ, ಶಿವಪ್ಪ ಓಂಕರಪ್ಪ ಚಲವಾದಿ, ಮಹಾದೇವಪ್ಪ ಚಲವಾದಿ, ಅರ್ಜುನಪ್ಪ ಚಲವಾದಿ, ಸಿದ್ದಪ್ಪ ಹಾದಿಮನಿ, ಯಲ್ಲಪ್ಪ ಚಲವಾದಿ ಇದ್ದರು.

PREV

Recommended Stories

ತ್ಯಾಗರಾಜ ಕೋ ಆಪರೇಟಿವ್‌ ಬ್ಯಾಂಕ್‌ನಿಂದ ರಸಪ್ರಶ್ನೆ ಸ್ಪರ್ಧೆ
ಕುತಂತ್ರ-ಅಸೂಯೆಯಿಂದ ಟನಲ್‌ ರಸ್ತೆಗೆ ಬಿಜೆಪಿ ವಿರೋಧ : ಡಿ.ಕೆ.ಸು