ಸಾಧನೆ ಗುರುತಿಸಿ ಪ್ರಶಸ್ತಿ ಬಂದಾಗ ಹೆಚ್ಚು ಖುಷಿ

KannadaprabhaNewsNetwork |  
Published : Nov 06, 2025, 03:15 AM IST
ಲೋಕಾಪೂರ ಬಸವೇಶ್ವರ ಪತ್ತಿನ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ಪ್ರಕಾಶ ಚುಳಕಿ ನೇತೃತ್ವದಲ್ಲಿ ೨೦೨೫-೨೬ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಪ್ರಶಸ್ತಿ ಕೇಳಿ ಪಡೆಯುವುದಾಗಬಾರದು, ಸಾಧನೆ ಗುರುತಿಸಿ ಪ್ರಶಸ್ತಿ ನೀಡಿದರೆ ಸಾಧಕರಿಗೆ ಹೆಚ್ಚು ಸಂತೋಷ ನೀಡುತ್ತದೆ ಎಂದು ಪ್ರಕಾಶ ಚುಳಕಿ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಪ್ರಶಸ್ತಿ ಕೇಳಿ ಪಡೆಯುವುದಾಗಬಾರದು, ಸಾಧನೆ ಗುರುತಿಸಿ ಪ್ರಶಸ್ತಿ ನೀಡಿದರೆ ಸಾಧಕರಿಗೆ ಹೆಚ್ಚು ಸಂತೋಷ ನೀಡುತ್ತದೆ ಎಂದು ಲೋಕಾಪುರ ಬಸವೇಶ್ವರ ಪತ್ತಿನ ಸೌಹಾರ್ದ ಬ್ಯಾಂಕ್‌ ಅಧ್ಯಕ್ಷ ಪ್ರಕಾಶ ಚುಳಕಿ ಹೇಳಿದರು.

ಪಟ್ಟಣದ ಬ್ಯಾಂಕ್‌ ಸಭಾಂಗಣದಲ್ಲಿ ಹಮ್ಮಿಕೊಂಡ ೨೦೨೫-೨೬ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪ್ರಯುಕ್ತ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಶಸ್ತಿಗಳು ಸುಲಭವಾಗಿ ದೊರಕುವುದಿಲ್ಲ. ಪ್ರಶಸ್ತಿ ಲಭಿಸಿದರೂ ಅದರ ಹಿಂದೆ ಅವರ ಸಾಧನೆ ಇದ್ದೇ ಇರುತ್ತದೆ ಎಂದರು. ಸಾಮಾಜಿಕ, ರಂಗಕಲೆ ಹಾಗೂ ಪತ್ರಿಕಾ ರಂಗದಲ್ಲಿ ಸಲ್ಲಿಸುತ್ತಿರುವ ಅವರ ಸೇವೆ ಗುರುತಿಸಿ ಕರ್ನಾಟಕ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಇವರ ಸೇವೆಗೆ ಇನ್ನು ಹೆಚ್ಚಿನ ಪ್ರಶಸ್ತಿ, ಪುರಸ್ಕಾರಗಳು ದೊರೆತು ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು.

ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಲ್ಲಾಸಾಬ ಯಾದವಾಡ, ಪತ್ರಿಕಾ ರಂಗದಲ್ಲಿ ಪತ್ರಕರ್ತರಾದ ಶ್ರೀನಿವಾಸ ಬಬಲಾದಿ, ಪೀರಸಾಬ ನದಾಫ, ರಂಗ ಕಲಾ ಕ್ಷೇತ್ರದಲ್ಲಿ ಮಲ್ಲಯ್ಯ ಸಂಬಾಳದ ಹಾಗೂ ಚೌಡಕಿ ಪದ ಕಲಾವಿದೆ ದೊಡ್ಡವ್ವ ಹುಗ್ಗಿ ಅವರನ್ನು ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಪಟ್ಟಣದ ಮುಖಂಡರಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಅಲ್ಲಾಸಾಬ ಯಾದವಾಡ ಮಾತನಾಡಿ, ಈ ಪ್ರಶಸ್ತಿ ಪಡೆದ ಹಿನ್ನೆಲೆ ತಾವು ಸತ್ಕರಿಸುತ್ತಿರುವ ಸನ್ಮಾನ, ಪುರಸ್ಕಾರಗಳು ಸಾಮಾಜಿಕ ಸೇವೆಯಲ್ಲಿ, ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವಲ್ಲಿ ನನ್ನ ಪ್ರಯತ್ನಗಳನ್ನು ಮುಂದುವರಿಸಲು ಪ್ರೇರೇಪಿಸುತ್ತದೆ. ನಾನು ಮಾಡುವ ಕೆಲಸಕ್ಕೆ ಎಂದೂ ಪ್ರಶಸ್ತಿಗಳನ್ನು ಬಯಸಿಲ್ಲ. ಬಡತನದಿಂದ ಮೇಲಕ್ಕೆ ಬಂದಿರುವ ನಾನು, ಅಸಹಾಯಕರ ಕಷ್ಟಗಳನ್ನು ಅರ್ಥಮಾಡಿಕೊಂಡಿದ್ದೇನೆ ಮತ್ತು ಯಾವಾಗಲೂ ಅವರ ಅಗತ್ಯಗಳಿಗೆ ಸ್ಪಂದಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಡಾ.ಬಸವರಾಜ ಹಿರೇಮಠ ಮಾತನಾಡಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ನಮ್ಮ ಭಾಗಕ್ಕೆ ದೊರೆತಿರುವುದು ಹೆಮ್ಮೆ ತಂದಿವೆ. ಹಲವು ಸಾಧಕರಿಗೆ ವಿವಿಧ ಕ್ಷೇತ್ರಗಳಲ್ಲಿ ಅವರ ಶ್ರೇಷ್ಠ ಕೆಲಸಕ್ಕಾಗಿ ಈ ಗೌರವ ಲಭಿಸಿದೆ. ಎಂದು ಹೇಳಿದರು. ಈ ವೇಳೆ ಮುಖಂಡರಾದ ಷಣ್ಮುಖಪ್ಪ ಕೋಲ್ಹಾರ, ಬಾಬುಸಾಬ ಚೌಧರಿ, ಪ್ರವೀಣ ಗಂಗಣ್ಣವರ, ಅರುಣ ನರಗುಂದ, ಸಂತೋಷ ಹೂಗಾರ, ರಫೀಕ ದಪ್ಪೇದಾರ, ಮಹೇಶ ಹುಗ್ಗಿ, ಶ್ರೀಶೈಲ ಪಾಟೀಲ, ಯಲ್ಲಪ್ಪಗೌಡ ಕೃಷ್ಣಗೌಡರ, ಬಾಬು ಗುದಗಿ, ಶ್ರೀಕಾಂತ ಅಮೋಜಿ, ಮಹಾಂತೇಶ ಕುಳ್ಳೊಳ್ಳಿ, ಬಾಲಪ್ಪ ನಡವಿನಮನಿ, ಜ್ಯೋತಿ ಜವಳೇಕರ ಮತ್ತು ಬ್ಯಾಂಕಿನ ಸದಸ್ಯರು, ಮುಖಂಡರು ಇದ್ದರು.

PREV

Recommended Stories

ತ್ಯಾಗರಾಜ ಕೋ ಆಪರೇಟಿವ್‌ ಬ್ಯಾಂಕ್‌ನಿಂದ ರಸಪ್ರಶ್ನೆ ಸ್ಪರ್ಧೆ
ಕುತಂತ್ರ-ಅಸೂಯೆಯಿಂದ ಟನಲ್‌ ರಸ್ತೆಗೆ ಬಿಜೆಪಿ ವಿರೋಧ : ಡಿ.ಕೆ.ಸು