ಕನ್ನಡಪ್ರಭ ವಾರ್ತೆ ಮೈಸೂರು
ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಡಾ.ಫ.ಗು. ಹಳಕಟ್ಟಿ ಅವರ ಜಯಂತಿ ಅಂಗವಾಗಿ ಚಾಮರಾಜನಗರ ಜಿಲ್ಲೆ ಸಂತೇಮರಹಳ್ಳಿ ಪಕ್ಕದ ಯಡಿಯೂರು ಗ್ರಾಮದಲ್ಲಿ ನಡೆದ ವಚನ ಗ್ರಾಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಚನ ಸಾಹಿತ್ಯದ ತಾಡೋಲೆಗಳನ್ನು ಅವರು ಕೇರಿಗಳಲ್ಲಿ ತಡಕಾಡಿ, ಊರುಗಳಲ್ಲಿ ಹುಡುಕಾಡಿ, ವಿವಿಧ ಸ್ಥಳಗಳಲ್ಲಿ ಸಂಶೋಧನೆ ಮಾಡಿ, ಅನೇಕ ಆಲಯಗಳಲ್ಲಿ ಅನ್ವೇಷಣೆಗೈದು ಸಂಗ್ರಹಿಸಿ ತಮ್ಮ ಸ್ವಂತ ಮನೆ ಮಾರಿ ಹಿತಚಿಂತಕ ಎಂಬ ಮುದ್ರಣಾಲಯ ಸ್ಥಾಪಿಸಿ 250 ಕ್ಕೂ ಹೆಚ್ಚು ವಚನಕಾರರ ವಚನ ಸಾಹಿತ್ಯವನ್ನು ಬೆಳಕಿಗೆ ತಂದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು ಎಂದು ವಿವರಿಸಿದರು.
ಜಾಗತಿಕ ಲಿಂಗಾಯಿತ ಮಹಾಸಭಾದ ಅಧ್ಯಕ್ಷ ಜಿ. ಗುರುಸ್ವಾಮಿ ಕಾಳನಹುಂಡಿ ಮಾತನಾಡಿ, ಡಾ.ಫ.ಗು ಹಳಕಟ್ಟಿ ಅವರು 19ನೇ ಶತಮಾನದಲ್ಲಿ ವಚನ ಸಾಹಿತ್ಯದ ತಾಡೋಲೆಗಳಿಗಾಗಿ ಊರು, ಊರು ಮತ್ತು ಕೇರಿ ಕೇರಿ ಅಲೆದರು. ಆದರೆ, 21ನೇ ಶತಮಾನದಲ್ಲಿ ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಅವರು ಊರು, ಊರು ಮತ್ತು ಕೇರಿಕೇರಿ ಅಲೆದು ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವ ಕಾಯಕ ಮಾಡುವುದನ್ನು ನೋಡುತ್ತಿದ್ದರೆ ಅಭಿಮಾನ ತುಂಬಿ ಬರುತ್ತದೆ ಎಂದು ಶ್ಲಾಘಿಸಿದರು.ನಂತರ ಯಡಿಯೂರು ಗ್ರಾಮದ 200 ಹೆಚ್ಚು ಮನೆಗಳಿಗೆ ವಚನ ಪುಸ್ತಕವನ್ನು ಉಚಿತವಾಗಿ ಹಂಚಿ ವಚನ ಗ್ರಾಮವನ್ನಾಗಿ ಘೋಷಣೆ ಮಾಡಲಾಯಿತು.