ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಜೆಎಸ್‌ಎಸ್ ಅನುಭವ ಮಂಟಪದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಕಲಾಮಂಟಪ, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜೆಎಸ್‌ಎಸ್ ರಂಗೋತ್ಸವದಲ್ಲಿ ಮದ್ದಳೆ ಭಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ನಾಟಕ ಎಂಬುದು ಬಹಳ ಅದ್ಬುತವಾದ ಕಲೆ ಎಂದರು.
ಇಂದಿನ ದಿನಗಳಲ್ಲಿ ಜನ ಸಾಮಾನ್ಯರು ಧಾರವಾಹಿಗಳನ್ನು ವರ್ಷಾನುಗಟ್ಟಲೆ ವೀಕ್ಷಿಸುತ್ತಾರೆ. ಆದರೆ ಈ ವರ್ಷದ ಕಥೆಯನ್ನು ನಾಟಕವು ಕೇವಲ ಮೂರು ಗಂಟೆಗಳಲ್ಲಿ ತಿಳಿಸುತ್ತದೆ. ಇದುವೆ ನಾಟಕ ಹಾಗೂ ನಾಟಕಕಾರನಿಗೂ ಇರುವ ಶಕ್ತಿ ಎಂದರು.ವಿದ್ಯಾರ್ಥಿಗಳನ್ನು ಇಂದಿನ ವ್ಯವಸ್ಥೆಯಲ್ಲಿ ನಿಸ್ವಾರ್ಥದಿಂದ ಯಾವ ಕೆಲಸವನ್ನು ಮಾಡಿದರೂ ಅದು ಸಾರ್ಥಕವಾಗುತ್ತದೆ ಎಂದು ಒಂದು ನೀತಿ ಕಥೆಯ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿ ಕಲೆಗೆ ಗೌರವ ಕೊಡೋಣ ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಡಾ.ಗೀತಾ ಮಹದೇವಪ್ರಸಾದ್ ಮಾತನಾಡಿ, ರಂಗೋತ್ಸವದಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಸರ್ವತೋಮುಖ ಬೆಳವಣಿಗೆಯಾಗುತ್ತದೆ ಎಂದರು.
ಜೆಎಸ್ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲೆ ಡಾ. ಮಹದೇವಮ್ಮ ಪಿ ಹಾಗೂ ಜೆಎಸ್‌ಎಸ್ ರಂಗೋತ್ಸವದ ಸಂಚಾಲಕ ಚಂದ್ರಶೇಖರಾಚಾರ್ ಹೆಗ್ಗೊಠಾರ ಮಾತನಾಡಿದರು.ಜೆಎಸ್‌ಎಸ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎಚ್.ಪಿ. ಪಶುಪತಿ,ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಅನಿತಾ ಬಿ.ಎಸ್., ಪ್ರಥಮ ಬಿ.ಎ ವಿದ್ಯಾರ್ಥಿನಿ ಸ್ನೇಹ ಸೇರಿದಂತೆ ತಾಲೂಕಿನ ಗಣ್ಯರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.
೨೯ಜಿಪಿಟಿ೫ಗುಂಡ್ಲುಪೇಟೆ ಜೆಎಸ್ಎಸ್ ರಂಗೋತ್ಸವದಲ್ಲಿ ಮೂಡುಗೂರು ಮಠಾಧೀಶ ಉದ್ದಾನ ಸ್ವಾಮೀಜಿ ಮದ್ದಳೆ ಭಾರಿಸುವ ಮೂಲಕ ಉದ್ಘಾಟಿಸಿದರು.
೨೯ಜಿಪಿಟಿ೬ಮೈಸೂರು ಜೆಎಸ್ಎಸ್ ಪ್ರೌಢಶಾಲೆಯ ಲಕ್ಷ್ಮೀ ಪುರಂ ವಿದ್ಯಾರ್ಥಿಗಳಿಂದ ‘ಧಾಂ ಧೂಂ ಸುಂಟರಗಾಳಿ’ಎಂಬ ನಾಟಕ ಪ್ರದರ್ಶಿಸಲಾಯಿತು.