ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನಗರದ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಶೀಲಾ ಸತ್ಯೇಂದ್ರಸ್ವಾಮಿರವರ ನಾಲ್ಕನೇ ಕೃತಿ ಗುಲ್ ಮೊಹರ್ ಕಥಾ ಸಂಕಲನ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಚಾಮರಾಜನಗರ ಜಿಲ್ಲೆಗೆ ವಿಶ್ವವಿದ್ಯಾನಿಲಯ ಕೊಟ್ಟಿದ್ದು ಸರಿ. ಈಗ ಇದನ್ನು ವಿಲೀನಗೊಳಿಸುವ ಬಗ್ಗೆ ಹೇಳಿಕೆಗಳು ಸರಿಯಲ್ಲ. ಇದು ಪ್ರತ್ಯೇಕ ವಿಶ್ವವಿದ್ಯಾನಿಲಯವಾಗಿಯೇ ಇರಬೇಕು. ಆಗ ಈ ಭಾಗದಲ್ಲಿ ಇನ್ನಷ್ಟು ಸಾಹಿತಿಗಳು, ಲೇಖಕರು, ವಿದ್ವಾಂಸರು ಹೊರಬರುತ್ತಾರೆ ಎಂದರು.ಚಾಮರಾಜನಗರ ಜಿಲ್ಲೆ ಶೈಕ್ಷಣಿಕ, ಕೈಗಾರಿಕಾ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕಾಗಿದ್ದು, ಇದೀಗ ಹೆಚ್ಚಿನ ಹೆಣ್ಣು ಮಕ್ಕಳು ವಿವಿ ಸ್ಥಾಪನೆಯಾದ ಪರಿಣಾಮ ಸ್ನಾತಕೋತ್ತರ ಪದವಿಧರರಾಗುತ್ತಿದ್ದು, ಈ ನಿಟ್ಟಿನಲ್ಲಿ ವಿವಿಗೆ ಹೆಚ್ಚಿನ ಸೌಲಭ್ಯ ನೀಡುವ ಮೂಲಕ ಶೈಕ್ಷಣಿಕ ಬೆಳವಣಿಗೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಗಡಿ ಜಿಲ್ಲೆ ಚಾಮರಾಜನಗರ ಮೈಸೂರಿನಿಂದ ಬೇರ್ಪಟ್ಟ ನಂತರ ತನ್ನದೇ ಆದ ವಿಶಿಷ್ಟತೆಗಳಿಂದ ಕೂಡಿದೆ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸಾಹಿತ್ಯಕವಾಗಿ ಬೆಳೆದಿದೆ, ಹೆಚ್ಚು ನೈಸರ್ಗಿಕ ಕಾಡುಗಳು, ಬೆಟ್ಟಗುಡ್ಡಗಳಿಂದ ಕೂಡಿ, ಹುಲಿ ಸಂರಕ್ಷಿತ ಮತ್ತು ಆನೆ ಸಂರಕ್ಷಿತ ತಾಣವಾಗಿದೆ, ಶ್ರೇಷ್ಠ ಸಾಹಿತಿಗಳು ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಗುಲ್ ಮೊಹರ್ ಕಥಾ ಸಂಕಲನ ಕುರಿತು ಹರವೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಸವಿತಾ ಎಂ. ಆರ್. ಮಾತನಾಡಿ, ಈ ಕಥಾ ಸಂಕಲನ ತಾಯಿ-ಮಕ್ಕಳ ಪ್ರೀತಿ, ಗಂಡ-ಹೆಂಡತಿಯ ಪ್ರೀತಿ, ಪ್ರಕೃತಿಯ ಪ್ರೀತಿ, ನೆಲದ ಭಾಷೆಯ ಪ್ರೀತಿಯನ್ನು ಒಳಗೊಂಡಿರುವ ಜೊತೆಗೆ ಮಾನವ ಪ್ರೀತಿಯನ್ನೂ ಎತ್ತಿ ತೋರಿಸಿದೆ ಎಂದರು.
ತೇಜು ಪಬ್ಲಿಕೇಷನ್ ಅಣುಕು ರಾಮನಾಥ್, ಈ ಜಿಲ್ಲೆಯಿಂದ ಹೊರ ಬರುವ ಓಳ್ಳೆಯ ಕೃತಿಗಳಿಗೆ ಪ್ರಕಾಶನ ನೀಡುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ನಂಜನಗೂಡು ಶ್ರೀನಿವಾಸಮೂರ್ತಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಮಾರಂಭವನ್ನು ಲೇಖಕಿ ಶೀಲಾ ಅವರ ಮಾತೃಶ್ರೀ ನಾಗಲಾಂಬಿಕೆ ಮತ್ತು ಅತ್ತೆ ರತ್ನಮ್ಮ ಉದ್ಘಾಟಿಸಿದರು.ಚಾಮರಾಜನಗರ ಜಿಲ್ಲೆಯ ಸಾಹಿತಿಗಳು, ಪತ್ರಕರ್ತರು, ಹೋರಾಟಗಾರರು, ಪರಿಸರವಾದಿಗಳು ಜಿಲ್ಲೆಯ ಸಾಹಿತ್ಯ, ನೆಲ- ಜಲ ಮತ್ತು ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಹವರನ್ನು ಸರ್ಕಾರ ಗುರುತಿಸಬೇಕು. ಬೇರೆಲ್ಲೂ ನೆಲೆಸಿ, ಈ ಜಿಲ್ಲೆಯ ಹೆಸರಿನಲ್ಲಿ ಪ್ರಶಸ್ತಿ ಪಡೆಯುವುದು ಸರಿಯಲ್ಲ. ಮುಂದೆಯಾದರೂ ಸರ್ಕಾರ, ಅಕಾಡೆಮಿಗಳು ಈ ಜಿಲ್ಲೆಯಲ್ಲಿ ಕೆಲಸ ಮಾಡುವವರನ್ನು ಗುರುತಿಸಲಿ.