ಮೈಸೂರು ಚಾಂಪಿಯನ್‌, ಬೆಳಗಾವಿ ರನ್ನರ್‌ ಅಪ್‌

KannadaprabhaNewsNetwork |  
Published : Dec 22, 2025, 01:15 AM IST
31 | Kannada Prabha

ಸಾರಾಂಶ

ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದ ಸಬ್-ಜೂನಿಯರ್ ಬಾಲಕರ ತಂಡಗಳು ಉತ್ತಮ ಆಟ ಪ್ರದರ್ಶಿಸಿದವು.

ಕನ್ನಡಪ್ರಭ ವಾರ್ತೆ ಮೈಸೂರುಕರ್ನಾಟಕ ಅಮೆಚೂರ್ ಖೋ-ಖೋ ಅಸೋಸಿಯೇಷನ್ ವತಿಯಿಂದ ಮಾಜಿ ಮೇಯರ್‌, ಏಕಲವ್ಯ ಪ್ರಶಸ್ತಿ ವಿಜೇತ ದಿವಂಗತ ಎನ್. ಪ್ರಕಾಶ್ ಅವರ ಸ್ಮರಣಾರ್ಥವಾಗಿ ಆಯೋಜಿಸಿದ್ದ ಸಬ್ ಜೂನಿಯರ್ ಬಾಲಕರ ರಾಜ್ಯ ಮಟ್ಟದ ಖೋ-ಖೋ ಚಾಂಪಿಯನ್‌ಶಿಪ್–2025” ನಲ್ಲಿ ಮೈಸೂರು ಪ್ರಥಮ, ಬೆಳಗಾವಿ ದ್ವಿತೀಯ ಸ್ಥಾನ ಪಡೆದವು. ನಗರದ ಹೆಬ್ಬಾಳದ ಅಣ್ಣಯ್ಯಪ್ಪ ಶಾಲಾ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಚಾಮರಾಜನಗರ ಹಾವೇರಿ ತಂಡಗಳು ತೃತೀಯ ಸ್ಥಾನ ಹಂಚಿಕೊಂಡವು.ಮೈಸೂರು ಜಿಲ್ಲಾ ಅಮೆಚೂರ್ ಖೋ-ಖೋ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ ಈ ಚಾಂಪಿಯನ್‌ಶಿಪ್‌ನಲ್ಲಿ ಅಧ್ಯಕ್ಷ ನಾಗರಾಜ್ ವಿ. ಬೈರಿ ಅವರು ಬಹುಮಾನ ವಿತರಿಸಿದರು.ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದ ಸಬ್-ಜೂನಿಯರ್ ಬಾಲಕರ ತಂಡಗಳು ಉತ್ತಮ ಆಟ ಪ್ರದರ್ಶಿಸಿದವು. ಉತ್ಸಾಹಭರಿತ ಫೈನಲ್ ಪಂದ್ಯದಲ್ಲಿ ಮೈಸೂರು ಜಿಲ್ಲೆ ತಂಡವು ಬೆಳಗಾವಿ ಜಿಲ್ಲೆ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ಬೆಳಗಾವಿ ಜಿಲ್ಲೆ ತಂಡ ದ್ವಿತೀಯ ಸ್ಥಾನ ಪಡೆದುಕೊಂಡರೆ, ಚಾಮರಾಜನಗರ ಮತ್ತು ಹಾವೇರಿ ಜಿಲ್ಲೆ ತಂಡಗಳು ತೃತೀಯ ಸ್ಥಾನವನ್ನು ಹಂಚಿಕೊಂಡವು.ಮೈಸೂರು, ಚಾಮರಾಜನಗರ, ಗದಗ, ಬೆಳಗಾವಿ, ಧಾರವಾಡ, ಕೋಲಾರ, ಹಾವೇರಿ, ಬಾಗಲಕೋಟೆ, ಉತ್ತರ ಕನ್ನಡ, ಬೆಂಗಳೂರು ನಗರ, ವಿಜಯಪುರ, ಕಲಬುರಗಿ, ರಾಯಚೂರು ಹಾಗೂ ತುಮಕೂರು ತಂಡಗಳು ಪಾಲ್ಗೊಂಡಿದ್ದವು. ಸಮಾರೋಪ ಸಮಾರಂಭದಲ್ಲಿ ವಿಜೇತ ಹಾಗೂ ರನ್ನರ್-ಅಪ್ ತಂಡಗಳಿಗೆ ಟ್ರೋಫಿ ಹಾಗೂ ಪ್ರಮಾಣಪತ್ರಗಳನ್ನು ಬೈರಿ ಅವರ ಜೊತೆಗೆ ಮುಖ್ಯಅತಿಥಿಗಳಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಮಾಡೆಲ್‌ ಕನಿಷ್ಕಾ ಮೂರ್ತಿ, ಸಂಸ್ಥೆಯ ಉಪಾಧ್ಯಕ್ಷ ಎಚ್.ಆರ್. ಭಗವಾನ್‌, ಹಿರಿಯ ಉಪಾಧ್ಯಕ್ಷ ಜೀವೇಂದ್ರಕುಮಾರ್‌, ಸಂದೇಶ್‌ ಪ್ರಕಾಶ್, ರಾಜ್ಯ ಕಾರ್ಯಜರ್ಶಿ ಚಿನ್ನುಮೂರ್ತಿ, ಕಾರ್ಯದರ್ಶಿ ಮಹದೇವಪ್ಪ ವಿತರಿಸಿದರು. ಸಹ ಕಾರ್ಯದರ್ಶಿಗಳಾದ ಪ್ರಕಾಶ್‌, ಎ.ಎಲ್. ಕೃಷ್ಣಸ್ವಾಮಿ, ರಾಜ್ಯ ಖಜಾಂಚಿ ಸುಧೀಂದ್ರ, ಉಪಾಧ್ಯಕ್ಷ ನಾಗಭೂಷಣ್‌, ಜಂಟಿ ಕಾರ್ಯದರ್ಶಿ ಜಾಡರ್‌ , ಶ್ರೀಕಾಂತ್‌, ಬಿಳಿಗಿರಿ, ಪ್ರೇಮ್, ಶೇಖರ್‌, ಹೇಮಂತ್‌ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಕ್ರೀಡಾಭಿಮಾನಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ