ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಚಿಕ್ಕಮಗಳೂರು ಮಾಜಿ ಸೈನಿಕರ ಸಂಘದಿಂದ ಆಯೋಜಿಸಿದ್ಧ 1971ರ ಯುದ್ಧದ 55ನೇ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂದಿನ 71ರ ಯುದ್ಧದಲ್ಲಿ ಕ್ಯಾಪ್ಟನ್ ಮಾಣಿಕ್ ಶಾ ಅವರ ನಾಯಕತ್ವದಲ್ಲಿ ಪೂರ್ವ ತಯಾರಿ ನಡೆಸಿದ ಇಂಡೋ- ಪಾಕ್ (ಬಾಂಗ್ಲಾ) ಯುದ್ಧದಲ್ಲಿ ನಮ್ಮ ಸೈನಿಕರನ್ನು ಅಣಿಗೊಳಿಸಿತು. ನೆರೆ ದೇಶದ ಹಿಂಸಾತ್ಮಕ ಕೃತ್ಯಗಳಿಗೆ ಕಡಿವಾಣ ಹಾಕಲು ತಂತ್ರಗಾರಿಕೆ ನಡೆಸಿ ಯುದ್ಧದಲ್ಲಿ ಸಂಪೂರ್ಣ ಯಶಸ್ವಿ ಕಂಡಿತು ಎಂದರು.ಭಾರತ ಏಕ ನಡೆಯೊಂದಿಗೆ ಎಂದಿಗೂ ಯುದ್ಧವನ್ನು ಸಾರಿಲ್ಲ. ಅಲ್ಲಿನ ಜಾತಿ ಆಧಾರದಲ್ಲಿ ನಡೆದ ಕೊಲೆ, ಸುಲಿಗೆ ಹಾಗೂ ದರೋಡೆಕೋರರನ್ನು ಮಟ್ಟಹಾಕಲು ಮತ್ತು ಭಾರತ ಗಡಿಭಾಗದಲ್ಲಿ ನುಸುಳುಕೋರರನ್ನು ತಡೆಗಟ್ಟಲು ಯುದ್ದವನ್ನು ಸಾರಿತು. ಅಲ್ಲದೇ ಬಂಧಿಸಿದ ನೆರೆ ದೇಶದ ಸೈನಿಕರನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸಿಕೊಟ್ಟಿದೆ ಎಂದು ಹೇಳಿದರು.
ಹಿರಿಯ ನ್ಯಾಯವಾದಿ ಬಿ.ಎಂ.ಲಕ್ಷ್ಮಣಗೌಡ ಮಾತನಾಡಿ, ಅಮೆರಿಕಾ ದೇಶ ಜಗತ್ತಿನ ಎದುರು ಬಲಾಢ್ಯ ರಾಷ್ಟ್ರವೆಂದು ಬಿಂಬಿಸಿಕೊಂಡು, ಭಾರತದ ಮೇಲೆ ವಿಪರೀತ ತೆರಿಗೆ ಏರಿಸುತ್ತಿದೆ. ಇದೀಗ ಆಧುನಿಕ ಭಾರತವು ಪ್ರಪಂಚದ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು ಸದ್ಯದಲ್ಲೇ ಅಮೆರಿಕಾವನ್ನು ದೊಡ್ಡಣ್ಣ ಸ್ಥಾನದಿಂದ ಕೆಳಗಿಳಿಸಿ, ಭಾರತ ದೊಡ್ಡಣ್ಣನ ಪಟ್ಟಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಿ.ಎಸ್.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಸಾವಿರಾರು ಮೈಲುಗಳಲ್ಲಿ ಗಡಿಯ ವಿಸ್ತಾರ ಹಂಚಿಕೊಂಡಿದೆ. ಗಡಿರೇಖೆಯಲ್ಲಿ ಭಾರತೀಯ ನೆಲವನ್ನು ಕಾಪಾಡಿಕೊಳ್ಳಲು ನಮ್ಮ ಸೈನಿಕರು ಚಳಿ, ಬಿಸಿಲೆನ್ನದೇ ಹಗಲು ರಾತ್ರಿಯಲ್ಲೂ ಕಾದು ದೇಶವನ್ನು ರಕ್ಷಿಸುವುದನ್ನು ಮರೆಯಬಾರದು ಎಂದರು.
ಇದೇ ವೇಳೆ ರೋಟರಿ ಕ್ಲಬ್‌ನಿಂದ ಮಾಜಿ ಸೈನಿಕರ ಸಂಘಕ್ಕೆ ಉಚಿತವಾಗಿ ಕಂಪ್ಯೂಟರ್ ಕೊಡುಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಕೃಷ್ಣೇಗೌಡ, ಕಾರ್ಯದರ್ಶಿ ಪ್ರದೀಪ್ ಕೋಟೆ, ಖಜಾಂಚಿ ರಾಜೇಗೌಡ, ಮಾಜಿ ಅಧ್ಯಕ್ಷ ನಾಗರಾಜ್, ರೋಟರಿ ಕ್ಲಬ್ ಅಧ್ಯಕ್ಷ ಲಿಖಿತ್ ಉಪಸ್ಥಿತರಿದ್ದರು.