ಕೊಳ್ಳೇಗಾಲ : ಕುರುಕಲು ತಿಂಡಿ ಪ್ರಿಯರನ್ನು ನೋಡಿರುತ್ತೀರಿ, ಹೆಚ್ಚು ತಿನ್ನುವ ತಿಂಡಿಪೋತರನ್ನು ಕಂಡಿರುತ್ತೀರಿ. ಆದರೆ, ಇಲ್ಲೋರ್ವ ಹಣ್ಣಿನ ರಸದಂತೆ ಎಂಜಿನ್ ಆಯಿಲ್ ಕುಡಿದು ಎಲ್ಲರನ್ನೂ ಅಚ್ಚರಿಗೆ ಒಳಗಾಗುವಂತೆ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.
ಮೈಸೂರಿನ ಕುಮಾರ್ ಎಂಬ ಅಯ್ಯಪ್ಪಸ್ವಾಮಿ ಭಕ್ತ ಕೊಳ್ಳೇಗಾಲದ ಮೂಲಕ ಶಬರಿಮಲೆ ಯಾತ್ರೆಗೆ ತೆರಳುವಾಗ ಕೊಳ್ಳೇಗಾಲದಲ್ಲಿ ಹಣ್ಣಿನ ರಸದಂತೆ ಎಂಜಿನ್ ಆಯಿಲ್ ಅನ್ನು ಗಟಗಟನೇ ಕುಡಿದು ಅಚ್ಚರಿ ಮೂಡಿಸಿದ್ದಾರೆ.
ಈ ಬಗ್ಗೆ ಕುಮಾರ್ ಮಾತನಾಡಿ, ಕಳೆದ 29 ವರ್ಷದಿಂದ ಇದನ್ನೇ ಕುಡಿದು ಜೀವಿಸುತ್ತಿದ್ದೇನೆ. ಊಟ-ತಿಂಡಿ ಯಾವುದೂ ಸೇರುವುದಿಲ್ಲ. ಕುಡಿದರೇ ಟೀ-ಕಾಫಿ ಹಾಗೂ ಎಂಜಿನ್ ಆಯಿಲ್ ಅಷ್ಟೇ. ಕಾಪಾಡಲು ದೇವರು ಇದ್ದಾಗ ಯಾಕೆ ಚಿಂತೆ. ಕಳೆದ 29 ವರ್ಷದಿಂದ ಇದೇ ನನಗೆ ಆಹಾರ ಎಂದರು. ಕುಮಾರ್ ಅವರನ್ನು ಕಂಡ ಸ್ಥಳೀಯರು ಅಚ್ಚರಿಗೆ ಒಳಗಾದರು.
ವೈದ್ಯಕೀಯ ಲೋಕಕ್ಕೆ ಅಚ್ಚರಿ ಎಂಬಂತೆ ವಿಷಕಾರಿ ವಸ್ತುವಾದ ಎಂಜಿನ್ ಆಯಿಲ್ ಅನ್ನು ಕುಡಿಯುತ್ತಿರುವ ಈ ವ್ಯಕ್ತಿ ನಿಜಕ್ಕೂ ವಿಸ್ಮಯವೇ ಸರಿ!