ಹುಲಿ ಆಯ್ತು, ಈಗ ಚಾ.ನಗರದಲ್ಲಿ ಚಿರತೆ ಶವ ಪತ್ತೆ: ವಿಷ ಪ್ರಾಶನ?

Published : Jul 12, 2025, 07:25 AM IST
Chamarajanagar Leopard found dead

ಸಾರಾಂಶ

ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳು ವಿಷಪ್ರಾಶನಕ್ಕೆ ಮೃತಪಟ್ಟಿರುವ ಘಟನೆ ಇತ್ತೀಚೆಗೆ ನಡೆದಿದ್ದು, ಈಗ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಕರಿಕಲ್ಲು ಕ್ವಾರಿಯ ಬಳಿ ನಡೆದಿದೆ

 ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳು ವಿಷಪ್ರಾಶನಕ್ಕೆ ಮೃತಪಟ್ಟಿರುವ ಘಟನೆ ಇತ್ತೀಚೆಗೆ ನಡೆದಿದ್ದು, ಈಗ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಕರಿಕಲ್ಲು ಕ್ವಾರಿಯ ಬಳಿ ನಡೆದಿದೆ. ಅಂದಾಜು 5 ವರ್ಷ ಪ್ರಾಯದ ಗಂಡು ಚಿರತೆಯ ಕಳೇಬರ ಪತ್ತೆಯಾಗಿದೆ.

ಚಿರತೆ ಕಳೇಬರ ಸಮೀಪವೇ ನಾಯಿಯ ಶವ ಕೂಡ ಸಿಕ್ಕಿದ್ದು, ಮೇಲ್ನೋಟಕ್ಕೆ ವಿಷಪ್ರಾಶನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ಶ್ರೀಪತಿ, ಚಾಮರಾಜನಗರ ವೃತ್ತ ಸಿಸಿಎಫ್ ಹೀರಾಲಾಲ್ ಅವರು ಸ್ಥಳಕ್ಕ ಭೇಟಿ ನೀಡಿ ಪರಿಶೀಲಿಸಿದ್ದು, ಬಂಡೀಪುರದ ಶ್ವಾನದಳದಿಂದ ತಪಾಸಣೆ ನಡೆಸಲಾಗಿದೆ.

ಪಶುವೈದ್ಯರಾದ ವಾಸಿಂ ಹಾಗೂ ಡಾ। ಮೂರ್ತಿ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಚಿರತೆ ಕಳೇಬರವನ್ನು ಸುಡಲಾಗಿದ್ದು, ಈ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ವಿಷಪ್ರಾಶನ ಸೇರಿದಂತೆ ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.

ವನ್ಯಜೀವಿ-ಮಾನವ ಸಂಘರ್ಷ:

ವನ್ಯಜೀವಿಧಾಮದ ಮೀಣ್ಯಂನಲ್ಲಿ ಹಸುವಿನ ಶವಕ್ಕೆ ವಿಷ ಹಾಕಿ 5 ಹುಲಿಗಳನ್ನು ಕೊಲ್ಲಲಾಗಿತ್ತು. ಅದಾದ ಬಳಿಕ ಕಿರಾತಕರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ‌ ಗುಂಡ್ಲುಪೇಟೆ ಬಫರ್ ವಲಯದ ಕಂದೇಗಾಲ ರಸ್ತೆಯಲ್ಲಿ 20 ಕೋತಿಗಳಿಗೆ ವಿಷಪ್ರಾಶನ ಮಾಡಿದ್ದರು.

PREV
Read more Articles on