ತೆರಿಗೆ ಸಂಗ್ರಹಕ್ಕೆ ಶಿಬಿರ: ಪುರಸಭೆಗೆ ಚೇಂಬರ್ ಮನವಿ

KannadaprabhaNewsNetwork |  
Published : Apr 14, 2026, 03:00 AM IST
ಮನವಿ ಪತ್ರ ಸಲ್ಲಿಕೆ ಸಂದರ್ಭ | Kannada Prabha

ಸಾರಾಂಶ

2026-27ರ ಆಸ್ತಿ ತೆರಿಗೆ ಮತ್ತು ಉದ್ದಿಮೆ ಪರವಾನಗಿ ತೆರಿಗೆ ಸಂಗ್ರಹ ಮಾಡಲು ಪುರಸಭೆ ವ್ಯಾಪ್ತಿಯ ಪಟ್ಟಣದ ಆಯ್ದ ಕಡೆಗಳಲ್ಲಿ ಕ್ಯಾಂಪ್ ಮಾಡಬೇಕೆಂದು ಕುಶಾಲನಗರ ಛೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಪದಾಧಿಕಾರಿಗಳು ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ2026-27ರ ಆಸ್ತಿ ತೆರಿಗೆ ಮತ್ತು ಉದ್ದಿಮೆ ಪರವಾನಗಿ ತೆರಿಗೆ ಸಂಗ್ರಹ ಮಾಡಲು ಪುರಸಭೆ ವ್ಯಾಪ್ತಿಯ ಪಟ್ಟಣದ ಆಯ್ದ ಕಡೆಗಳಲ್ಲಿ ಕ್ಯಾಂಪ್ ಮಾಡಬೇಕೆಂದು ಕುಶಾಲನಗರ ಛೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಪದಾಧಿಕಾರಿಗಳು ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ವಿವಿಧ ಸ್ಥಳಗಳಲ್ಲಿ ತೆರಿಗೆ ಸಂಗ್ರಹ ಕ್ಯಾಂಪ್ ಮಾಡುವುದರಿಂದ ನಿರೀಕ್ಷೆಗೂ ಮೀರಿದ ತೆರಿಗೆ ಸಂಗ್ರಹವಾಗುವುದರ ಜೊತೆಗೆ ಸಾರ್ವಜನಿಕರಿಗೂ ತುಂಬ ಅನುಕೂಲವಾಗಲಿದೆ. ಅನವಶ್ಯಕವಾಗಿ ಕಚೇರಿ ಅಲೆಯುವುದು ತಪ್ಪುತ್ತದೆ. ಸಿಬ್ಬಂದಿಗಳಿಗೆ ಕಚೇರಿಯಲ್ಲಿ ಕೆಲಸದ ಒತ್ತಡವಿರುತ್ತದೆ. ಕ್ಯಾಂಪ್ ಮಾಡಿದರೆ ಸಿಬ್ಬಂದಿಗಳು ಕೇವಲ ತೆರಿಗೆ ಸಂಗ್ರಹದ ಕಡೆ ಗಮನ ಹರಿಸಲು ಸಹಕಾರಿಯಾಗುತ್ತದೆ. ಈ ಸಂಬಂಧ ಪುರಸಭೆ ಮೂಲಕ ತಕ್ಷಣವೇ ಕ್ಯಾಂಪ್ ಮಾಡುವುದರಿಂದ ಏ.31 ರವರೆಗೆ ತೆರಿಗೆ ವಿನಾಯಿತಿ ಸೌಲಭ್ಯ ಜನರಿಗೆ ದೊರೆಯುತ್ತದೆ ಎಂದು ಅಧ್ಯಕ್ಷ ಕೆ.ಎಸ್ . ನಾಗೇಶ್ ಹೇಳಿದರು.ಮುಖ್ಯಾಧಿಕಾರಿ ಗಿರೀಶ್ ಮಾತನಾಡಿ, ಪುರಸಭೆ ವತಿಯಿಂದ ಪ್ರತಿ ವರ್ಷವೂ ಕ್ಯಾಂಪ್ ಮಾಡುತ್ತಿದ್ದೇವೆ. ಈ ವರ್ಷವೂ ಜನರ ಅನುಕೂಲಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.ಛೇಂಬರ್ ಕಾರ್‍ಯದರ್ಶಿ ಚಿತ್ರ ರಮೇಶ್, ಖಜಾಂಚಿ ಎನ್.ವಿ. ಬಾಬು, ನಿರ್ದೇಶಕ ಪಿ.ಕೆ. ಜಗದೀಶ್, ಪಿ.ಎಂ. ಮೋಹನ್, ಕೆ.ಎನ್. ದೇವರಾಜ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತ ಹೋರಾಟದಲ್ಲಿ ರಮೇಶ ಗಡದನ್ನವರ ಅಗಾಧ ಶಕ್ತಿ: ಕೋಡಿಹಳ್ಳಿ ಚಂದ್ರಶೇಖರ್‌
ನಾರಿ ಶಕ್ತಿ ವಂದನಾ ಕಾನೂನು ಜಾರಿ ಸ್ವಾಗತಾರ್ಹ