ಹರದೂರು: ಆದಿನಾಗಬ್ರಹ್ಮ ಮೊಗೇರ, ಕೊರಗ ತನಿಯ ನೇಮೋತ್ಸವ

KannadaprabhaNewsNetwork |  
Published : Apr 14, 2026, 03:00 AM IST
ಚಿತ್ರ.1: ದೈವದ ಕಾರಣಿಕ ನೇಮೋತ್ಸವದ ದೃಶ್ಯ. | Kannada Prabha

ಸಾರಾಂಶ

ಹರದೂರು ಗ್ರಾಮದ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ ವತಿಯಿಂದ ಆದಿನಾಗಬ್ರಹ್ಮ ಮೊಗೇರ ದೈವಗಳ ಹಾಗೂ ಕೊರಗ ತನಿಯ ದೈವದ ಹಾಗೂ ಮಂತ್ರವಾದಿ ಗುಳಿನಗ 86ನೇ ನೇಮೋತ್ಸವ ಶನಿವಾರ ಮತ್ತು ಭಾನುವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಹರದೂರು ಗ್ರಾಮದ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ ವತಿಯಿಂದ ಆದಿನಾಗಬ್ರಹ್ಮ ಮೊಗೇರ ದೈವಗಳ ಹಾಗೂ ಕೊರಗ ತನಿಯ ದೈವದ ಹಾಗೂ ಮಂತ್ರವಾದಿ ಗುಳಿನಗ 86ನೇ ನೇಮೋತ್ಸವ ಶನಿವಾರ ಮತ್ತು ಭಾನುವಾರ ನಡೆಯಿತು.

ಏ. 3ರಂದು ಗೊನೆ ಕಡಿದು, ಧ್ವಜಾರೋಹಣ ನಡೆಸುವ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಲಾಯಿತು.ಏ. 9 ಗಣ ಹೋಮ, 11ರಂದು ಆಯುಧ ಪೂಜೆ, ನಿತ್ಯ ಪೂಜೆ ಮತ್ತು ಭಂಡಾರ ಹೊರಡುವ ಮೂಲಕ ನೇಮೋತ್ಸವಕ್ಕೆ ಚಾಲನೆ ದೊರೆಯಿತು.ಸಂಜೆ ಮಂತ್ರವಾದಿ ಗುಳಿಗನ ನೇಮ ನಡೆಯಿತು. ರಾತ್ರಿ ಆದಿನಾಗಬ್ರಹ್ಮ ಮೊಗೇರ ದೈವಗಳ ಆದಿಮಾಯೆ ತನ್ನಿ ಮಾನಿಗ ಗರಡಿ ಇಳಿಯಿತು. 2.30ಕ್ಕೆ ಆದಿ ಮಾಯೆ ತನಿ ಮಾನಿಗ ಗರಡಿ ಇಳಿಯುವ ಕಾರ್‍ಯಕ್ರಮ ನಡೆಯಿತು. ಭಾನುವಾರ ಬೆಳಗ್ಗೆ ಕೊರಗ ತನಿಯ ನೇಮೋತ್ಸವ ನಡೆಯಿತು.

ದೈವಸ್ಥಾನ ಸಮಿತಿ ಅಧ್ಯಕ್ಷ ಬಿ. ರಾಜು, ಉಪಾಧ್ಯಕ್ಷ ಬಿ.ಎಸ್. ಆನಂದ, ಕಾರ್‍ಯದರ್ಶಿ ಎನ್.ಎಸ್. ನವೀನ, ಖಜಾಂಚಿ ಅಣ್ಣಿ, ಸಮಿತಿ ಪದಾಧಿಕಾರಿಗಳಾದ ಎಂ.ಪಿ. ದೇವಪ್ಪ, ಗೌತಮ್ ಶಿವಪ್ಪ, ದಿನೇಶ್, ದೇವಾಲಯದ ಪ್ರಧಾನ ಪೂಜಾರಿಗಳಾದ ಯೋಗೇಂದ್ರ, ಮಂಜು, ಸತೀಶ, ರವಿ, ಪಿ.ಕೆ. ಸುಂದರ, ಮೊಣ್ಣಪ್ಪ ಪೂಜಾರಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊಸರಲ್ಲಿ ಕಲ್ಲು ಹುಡುಕುವ ಯತ್ನ : ಬಿ.ವೈ.ವಿಜಯೇಂದ್ರ
ವೈಜ್ಞಾನಿಕವಾಗಿ ಕ್ಷೇತ್ರಗಳ ಮರುವಿಂಗಡಣೆ ಆಗಬೇಕು - ಜನಸಂಖ್ಯೆ ಆಧಾರದಲ್ಲಿ ಮಾಡಿದರೆ ಅನ್ಯಾಯ