38 ಮೃತ ಕ್ಷೀರೋತ್ಪಾದಕರ ಸಂಬಂಧಿಗೆ ಚಾಮುಲ್‌ನಿಂದ ತಲಾ 15000 ರು. ಚೆಕ್‌

KannadaprabhaNewsNetwork |  
Published : Jun 13, 2026, 01:30 AM IST
ಗುಂಡ್ಲುಪೇಟೆ ತಾಲೂಕಿನ ೩೮ ಮೃತ ಹಾಲು ಉತ್ಪಾದಕರ ವಾರಸುದಾರರಿಗೆ ತಲಾ ೧೫ ಸಾವಿರ ಚೆಕ್‌ಗಳನ್ನು ಚಾಮುಲ್‌ ನಿರ್ದೇಶಕ ಎಚ್.ಎಸ್. ನಂಜುಂಡ ಪ್ರಸಾದ್‌ ವಿತರಿಸಿದರು. | Kannada Prabha

ಸಾರಾಂಶ

ಚಾಮರಾಜನಗರ ಸಹಕಾರಿ ಹಾಲು ಒಕ್ಕೂಟ (ಚಾಮುಲ್) ಹಾಗೂ ಚಾಮುಲ್ ರೈತ ಕಲ್ಯಾಣ ಟ್ರಸ್ಟ್‌ನಿಂದ ಮರಣ ಹೊಂದಿದ ಹಾಲು ಉತ್ಪಾದಕ ಸದಸ್ಯರ ೩೮ ಮಂದಿ ವಾರಸುದಾರರಿಗೆ ತಲಾ ೧೫ ಸಾವಿರ (೫.೭೦ ಲಕ್ಷ) ಪರಿಹಾರದ ಚೆಕ್‌ಗಳನ್ನು ಜಿಲ್ಲಾ ಜಿಹಕಾರ ಒಕ್ಕೂಟದ ಅಧ್ಯಕ್ಷರೂ ಆದ ಚಾಮುಲ್‌ ನಿರ್ದೇಶಕ ಎಚ್.ಎಸ್. ನಂಜುಂಡ ಪ್ರಸಾದ್, ಎಂ.ಪಿ. ಸುನಿಲ್ ವಿತರಿಸಿದರು.

ನಿರ್ದೇಶಕ ಎಚ್‌.ಎಸ್‌. ನಂಜುಂಡ ಪ್ರಸಾದ್‌ ನೇತೃತ್ವದಲ್ಲಿ 5.70 ಲಕ್ಷ ರು. ಪರಿಹಾರ ಹಂಚಿಕೆ

---ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಚಾಮರಾಜನಗರ ಸಹಕಾರಿ ಹಾಲು ಒಕ್ಕೂಟ (ಚಾಮುಲ್) ಹಾಗೂ ಚಾಮುಲ್ ರೈತ ಕಲ್ಯಾಣ ಟ್ರಸ್ಟ್‌ನಿಂದ ಮರಣ ಹೊಂದಿದ ಹಾಲು ಉತ್ಪಾದಕ ಸದಸ್ಯರ ೩೮ ಮಂದಿ ವಾರಸುದಾರರಿಗೆ ತಲಾ ೧೫ ಸಾವಿರ (೫.೭೦ ಲಕ್ಷ) ಪರಿಹಾರದ ಚೆಕ್‌ಗಳನ್ನು ಜಿಲ್ಲಾ ಜಿಹಕಾರ ಒಕ್ಕೂಟದ ಅಧ್ಯಕ್ಷರೂ ಆದ ಚಾಮುಲ್‌ ನಿರ್ದೇಶಕ ಎಚ್.ಎಸ್. ನಂಜುಂಡ ಪ್ರಸಾದ್, ಎಂ.ಪಿ. ಸುನಿಲ್ ವಿತರಿಸಿದರು.ಪಟ್ಟಣದ ಚಾಮುಲ್‌ ಉಪ ವಿಭಾಗದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಚೆಕ್‌ ವಿತರಿಸಿ ಮಾತನಾಡಿದ ಚಾಮುಲ್‌ ನಿರ್ದೇಶಕ ಎಚ್.ಎಸ್. ನಂಜುಂಡ ಪ್ರಸಾದ್, ಮರಣ ಹೊಂದಿದ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯ ವಾರಸುದಾರರಿಗೆ ಚಾಮುಲ್ ಒಕ್ಕೂಟದ ಪರಿಹಾರ ನೀಡುತ್ತಿದ್ದೇವೆ ಎಂದರು.ಹಾಲು ಉತ್ಪಾದಕ ೫೮ ವರ್ಷ ಒಳಪಟ್ಟು ಸದಸ್ಯರಿಗೆ 1 ಲಕ್ಷದವರೆಗೆ ವಿಮ ಸೌಲಭ್ಯಗಳು ಲಭ್ಯವಿದೆ. ಚಾಮುಲ್‌ ಹಾಗೂ ರೈತ ಕಲ್ಯಾಣ ಟ್ರಸ್ಟ್‌ ನೀಡುವ ಪರಿಹಾರದ ಹಣವನ್ನು ವಾರಸುದಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ರಾಸುಗಳಿಗೆ ತುರ್ತು ಚಿಕಿತ್ಸೆಗೆ ಚಾಮುಲ್‌ನಿಂದ ಪ್ರತ್ಯೇಕ ವ್ಯವಸ್ಥೆ ಇದೆ. ಹಾಲು ಉತ್ಪಾದಕರು ಈ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಬೇಕು. ಚಾಮುಲ್‌ನ ಎಲ್ಲಾ ಸೌಲಭ್ಯಗಳನ್ನು ಉತ್ಪಾದಕರಿಗೆ ನೀಡುತ್ತಿದ್ದು, ಈ ಸೌಲಭ್ಯಗಳು ಯಾವುದೇ ಖಾಸಗಿ ಡೈರಿಗಳಲ್ಲಿ ದೊರೆಯುವುದಿಲ್ಲ ಎಂದರು.ಚಾಮುಲ್‌ ನಿರ್ದೇಶಕ ಎಂ.ಪಿ. ಸುನೀಲ್‌ ಮಾತನಾಡಿ, ಸಹಕಾರ ಸಂಸ್ಥೆಗಳು ಸದಸ್ಯರ ಸಂಸ್ಥೆಗಳಾಗಿವೆ. ಇಲ್ಲಿ ಸಿಗುವ ಸೌಲಭ್ಯಗಳು ಖಾಸಗಿ ಡೈರಿಗಳಲ್ಲಿ ಸಿಗುವುದಿಲ್ಲ ಹಾಗೂ ಖಾಸಗಿ ಡೈರಿಗಳ ಆಮಿಷಗಳಿಗೆ ಒಳಗಾಗದೆ ಸಹಕಾರ ಸಂಘಕ್ಕೆ ಹಾಲು ಸರಬರಾಜು ಮಾಡುವಂತೆ ಹಾಲು ಉತ್ಪಾದಕರ ಮನವೊಲಿಸುವ ಕೆಲಸವಾಗಲಿ ಎಂದರು.ಸಹಕಾರ ಸಂಘದಲ್ಲಿ ರಾಸುಗಳಿಗೆ 2 ವರ್ಷಗಳ ಅವಧಿಗೆ ವಿಮೆ ಮಾಡಿಸುತ್ತಿದ್ದು, ಹಾಲು ಉತ್ಪಾದಕರ ರೈತರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸಮಾರಂಭದಲ್ಲಿ ಚಾಮುಲ್‌ ಗುಂಡ್ಲುಪೇಟೆ ಉಪ ವಿಭಾಗದ ವಿಸ್ತರಣಾಧಿಕಾರಿಗಳಾದ ಎಚ್. ಪ್ರಕಾಶ್, ಸಿದ್ದಲಿಂಗೇಶ್, ರಂಜಿತಾ, ಮುದ್ದಪ್ಪ, ಉದಯ್, ಮಂಜೇಶ್, ಗುಂಡ್ಲುಪೇಟೆ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ಅಧ್ಯಕ್ಷ ಹಕ್ಕಲಪುರ ನಾಗೇಶ್, ಅಗತಗೌಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಮಹೇಂದ್ರ ಹಾಗೂ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಫಲಾನುಭವಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೂರಿಯಾ ಅಭಾವ ಖಂಡಿಸಿ ರೈತ ಸಂಘ ಪ್ರತಿಭಟನೆ
ನೀಟ್‌ ಅಕ್ರಮ: ಸಂಸದರ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ