18ರಿಂದ ಚಂಡಿ ರುದ್ರ ಮಹಾಯಜ್ಞ

KannadaprabhaNewsNetwork |  
Published : Nov 14, 2026, 01:45 AM IST
ಎಫ್‌ಕೆಸಿಸಿಐ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಡಾ. ನಾ. ಸೋಮೇಶ್ವರ ಉದ್ಘಾಟಿಸಿದರು. ಎಫ್‌ಕೆಸಿಸಿಐ ಅಧ್ಯಕ್ಷ ಟಿ. ಸಾಯಿರಾಂ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವದ ಸಂಪನ್ನತೆಯ ಅಂಗವಾಗಿ ನ.18ರಿಂದ 29ರವರೆಗೆ 12 ದಿನಗಳ ಕಾಲ ಚಂಡಿ ಹೃದಯ ಅತಿ ರುದ್ರ ಮಹಾಯಜ್ಞ ಆಯೋಜಿಸಲಾಗಿದೆ ಎಂದು ಹೃದಯ ಸ್ಪಂದನ ಸಂಸ್ಥೆಯ ಟ್ರಸ್ಟಿ ಸತ್ಯ ಸಾಯಿ ಪ್ರಸಾದ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ದೊಮ್ಮಸಂದ್ರ

ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವದ ಸಂಪನ್ನತೆಯ ಅಂಗವಾಗಿ ನ.18ರಿಂದ 29ರವರೆಗೆ 12 ದಿನಗಳ ಕಾಲ ಚಂಡಿ ಹೃದಯ ಅತಿ ರುದ್ರ ಮಹಾಯಜ್ಞ ಆಯೋಜಿಸಲಾಗಿದೆ ಎಂದು ಹೃದಯ ಸ್ಪಂದನ ಸಂಸ್ಥೆಯ ಟ್ರಸ್ಟಿ ಸತ್ಯ ಸಾಯಿ ಪ್ರಸಾದ್ ತಿಳಿಸಿದರು.

ಸರ್ಜಾಪುರದಲ್ಲಿ ಮಹಾಯಜ್ಞದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಲೋಕಕಲ್ಯಾಣ, ವಿಶ್ವಶಾಂತಿ ಹಾಗೂ ಸಮಸ್ತ ಜೀವಿಗಳ ಕ್ಷೇಮಕ್ಕಾಗಿ ಬೆಂಗಳೂರಿನ ಕಲ್ಯಾಣನಗರದ ಎಚ್‌.ಆರ್‌.ಬಿ.ಆರ್ ಲೇಔಟ್‌ನಲ್ಲಿರುವ ಶ್ರೀ ಸುರಭಾರತಿ ಸಂಸ್ಕೃತ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಆಧ್ಯಾತ್ಮಿಕ ಮೌಲ್ಯಗಳ ಸಂರಕ್ಷಣೆ ಹಾಗೂ ಸನಾತನ ಧರ್ಮದ ಧಾರ್ಮಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಮಹಾಯಜ್ಞ ಹಮ್ಮಿಕೊಳ್ಳಲಾಗಿದೆ ಎಂದರು.

ಹೃದಯ ಸ್ಪಂದನ ಸಂಸ್ಥೆಯ ಟ್ರಸ್ಟಿ ಸಾಯಿರಾ ಹರಿಶಂಕರ್ ಮಾತನಾಡಿ, ಶ್ರೀ ಸುರಭಾರತಿ ಸಂಸ್ಕೃತ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಮುಖ್ಯಸ್ಥ ವಿದ್ವಾನ್ ಕೆ.ಎಲ್.ಶ್ರೀನಿವಾಸನ್ ಮಾರ್ಗದರ್ಶನದಲ್ಲಿ ಶತ ಚಂಡಿ ಯಜ್ಞ ಹಾಗೂ ಅತಿ ರುದ್ರ ಮಹಾಯಜ್ಞ ನಡೆಯಲಿವೆ. ದೇಶದ ವಿವಿಧ ಭಾಗಗಳಿಂದ 200ಕ್ಕೂ ಹೆಚ್ಚು ವೈದಿಕ ಪಂಡಿತರು ಆಗಮಿಸಿ 12 ದಿನಗಳ ಕಾಲ ವೇದಮಂತ್ರಗಳ ಪಾರಾಯಣ, ಪೂಜೆ, ಜಪ ಹಾಗೂ ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ ಎಂದು ತಿಳಿಸಿದರು. ಈ ವೇಳೆ ಹೃದಯ ಸ್ಪಂದನ ಸಂಸ್ಥೆಯ ಟ್ರಸ್ಟಿಗಳಾದ ಸತ್ಯ ಸಾಯಿ ಪ್ರಸಾದ್, ಸಾಯಿರಾ ಹರಿಶಂಕರ್, ನಾಗಶ್ರೀ ಅವಸರಾಳ, ಇಟ್ಟಾ ರಘುನಂದನ, ಜಗದೀಶ ಕೊಟ್ಟೂರಶೆಟ್ಟರ್, ಪಿ.ಎನ್. ಶ್ರೀನಿವಾಸ್ ಹಾಗೂ ಮಾರ್ಗದರ್ಶಕ ಮಂಡಳಿಯ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಡಿಕೆ ಈಡೇರದೇ ಇದ್ದರೆ ಸಲ್ಲೇಖನ : ಗುಣಧರನಂದಿ ಶ್ರೀ
ರಾಜ್ಯದ ಹಲವು ಬೇಡಿಕೆ ಆಲಿಸಿ: ಡಿಕೆ ಹಕ್ಕೊತ್ತಾಯ