ಹೊಸಪೇಟೆ: ಹಿರಿಯರು ಬಿಟ್ಟು ಹೋದ ಸಂಪ್ರದಾಯಗಳನ್ನು ಇಂದಿನ ಪ್ರಸ್ತುತ ಜೀವನದ ನಡವಳಿಕೆಗೆ ಕೊಂಡೊಯ್ಯುವಲ್ಲಿ ಡಾ.ಚಂದ್ರಶೇಖರ ಕಂಬಾರ ಅವರ ಬರಹಗಳು ಯಶಸ್ವಿಯಾಗಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ ಹೇಳಿದರು.
ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ ಮಾತನಾಡಿ, ಉಳುವವನೇ ಭೂಮಿಯ ಒಡೆಯ " ಎಂಬ ಸಾಮಾಜಿಕ ಸಂದೇಶದ ಜೊತೆಗೆ, ಸಮಾಜದಲ್ಲಿ ಪ್ರೀತಿಗೆ ಪಾತ್ರನಾದ ವ್ಯಕ್ತಿ ಯಾಕೆ ಗಂಡನಾಗಿರಬಾರದು ಎಂಬ ಆಳವಾದ ತಾತ್ಪರ್ಯವನ್ನು ಕಂಬಾರರು ಜನಸಾಮಾನ್ಯರಿಗೆ ಅರ್ಥವಾಗುವ ಹಳ್ಳಿ ಸೊಗಡಿನ ಭಾಷಾ ಶೈಲಿಯಲ್ಲಿ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ ಎಂದರು.
ಕುವೆಂಪು ಅವರ ಸಾಹಿತ್ಯ ಹಾಗೂ ಗಿರೀಶ್ ಕಾರ್ನಾಡ್ ಅವರ `ನಾಗಮಂಡಲ'''''''' ನಾಟಕದಲ್ಲಿನ ಹೆಣ್ಣಿನ ಭಾವನೆಗಳು, ಆಸೆಗಳು ಮತ್ತು ಸ್ವಭಾವಗಳ ಸೆಳೆತಗಳನ್ನು ಹೋಲುವಂತೆ `ಜೋಕುಮಾರ ಸ್ವಾಮಿ''''''''ಯಲ್ಲಿಯೂ ಮಾನವೀಯ ಮೌಲ್ಯಗಳು ಜೀವಂತವಾಗಿ ಮೂಡಿಬಂದಿವೆ ಎಂದರು.ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಅಧ್ಯಕ್ಷತೆವಹಿಸಿ ಮಾತನಾಡಿ, ನಾಟಕದಲ್ಲಿ ಸಣ್ಣದು-ದೊಡ್ಡದು ಎನ್ನುವ ಪಾತ್ರಗಳಿಲ್ಲ; ಪ್ರತಿಯೊಂದು ಪಾತ್ರವೂ ತನ್ನ ಜೀವಂತಿಕೆಯಿಂದ ನಾಟಕದ ಸಂದೇಶವನ್ನು ಪ್ರೇಕ್ಷಕರಿಗೆ ತಲುಪಿಸಬೇಕು. ಇಂತಹ ನಾಟಕ ಪ್ರದರ್ಶನಗಳು ಬೇರೆ ಬೇರೆ ಸ್ಥಳಗಳಲ್ಲಿ ನಡೆಯುವುದರಿಂದ ವಿಶ್ವವಿದ್ಯಾಲಯದ ಗೌರವ ಮತ್ತಷ್ಟು ಹೆಚ್ಚುತ್ತದೆ ಎಂದರು.
ಹಿರಿಯ ರಂಗಕರ್ಮಿಗಳಾದ ಸಿ.ಟಿ. ಬ್ರಹ್ಮಾಚಾರ್ ಅವರ ನಿರ್ದೇಶನ, ಜಯರಾಮ ಕೆ.ಎಚ್. ಅವರ ರಾಗ ಸಂಯೋಜನೆ, ಡಾ.ವೀರೇಶ ಬಡಿಗೇರ ಅವರ ಸಂಗೀತ ನಿರ್ದೇಶನ, ಸಂಗೀತ ವಿಭಾಗದ ವಿದ್ಯಾರ್ಥಿಗಳು ಧ್ವನಿ ಮತ್ತು ಹಿನ್ನೆಲೆ ಗಾಯನ ಸೇರಿದಂತೆ ಈ ನಾಟಕ ಪ್ರದರ್ಶನವು ಪ್ರೇಕ್ಷಕರ ಮನ ಸೆಳೆಯಿತು.ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಲಲಿತಕಲಾ ನಿಕಾಯದ ಡೀನ್ ಡಾ. ಶಿವಾನಂದ ವಿರಕ್ತಮಠ, ಆಂತರಿಕ ಗುಣಮಟ್ಟ ಭರವಸೆ ಕೋಶದ ನಿರ್ದೇಶಕ ಡಾ. ಮಾಧವ ಪೆರಾಜೆ, ನಾಟಕ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಮುಖ್ಯಸ್ಥರು, ಅಧಿಕಾರಿಗಳು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮತ್ತು ರಂಗಭೂಮಿ ಕಲಾವಿದರು, ನಾಟಕಾಸಕ್ತರು ಇದ್ದರು.