ಕಾಂಗ್ರೆಸ್ ಅಭ್ಯರ್ಥಿ ಬದಲಿಸಿ, ಅಹಿಂದ ವರ್ಗಕ್ಕೆ ಟಿಕೆಟ್‌ ನೀಡಿ

KannadaprabhaNewsNetwork |  
Published : Mar 26, 2024, 01:05 AM IST
25ಕೆಡಿವಿಜಿ1, 2-ದಾವಣಗೆರೆಯಲ್ಲಿ ಸೋಮವಾರ ಅಹಿಂದ ಚೇತನದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಬಿ.ಮೌರ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.80ರಷ್ಟು ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವರ್ಗಗಳ ಮತಗಳು ಇರುವ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಿಸಬೇಕು. ಅಲ್ಲದೇ, ಅಹಿಂದ ವರ್ಗಗಳ ಪ್ರತಿನಿಧಿ ಜಿ.ಬಿ.ವಿನಯಕುಮಾರ್‌ಗೆ ಟಿಕೆಟ್ ನೀಡುವಂತೆ ಅಹಿಂದ ಚೇತನ ಸಂಘಟನೆ ದಾವಣಗೆರೆಯಲ್ಲಿ ಒತ್ತಾಯಿಸಿದೆ.

- ಜಿ.ಬಿ.ವಿನಯಕುಮಾರ್‌ಗೆ ಟಿಕೆಟ್ ನೀಡಲು ಅಹಿಂದ ಚೇತನ ಆಗ್ರಹ ।

- ಶಾಮಿಯಾನ ಹಾಕಲು, ಕರಪತ್ರ, ಪೋಸ್ಟರ್‌ ಹಂಚೋಕಷ್ಟೇ ಅಹಿಂದ ಸೀಮಿತವೇ? - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.80ರಷ್ಟು ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವರ್ಗಗಳ ಮತಗಳು ಇರುವ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಿಸಬೇಕು. ಅಲ್ಲದೇ, ಅಹಿಂದ ವರ್ಗಗಳ ಪ್ರತಿನಿಧಿ ಜಿ.ಬಿ.ವಿನಯಕುಮಾರ್‌ಗೆ ಟಿಕೆಟ್ ನೀಡುವಂತೆ ಅಹಿಂದ ಚೇತನ ಸಂಘಟನೆ ಒತ್ತಾಯಿಸಿದೆ.

ನಗರದಲ್ಲಿ ಸೋಮವಾರ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಬಿ. ಮೌರ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸಿ, ಜಿ.ಬಿ.ವಿನಯಕುಮಾರ ಅವರಿಗೆ ಅವಕಾಶ ನೀಡುವ ಮೂಲಕ ಅಹಿಂದ ವರ್ಗಕ್ಕೆ ಟಿಕೆಟ್‌ ನೀಡಬೇಕು ಎಂದರು.

ಉತ್ತರ, ದಕ್ಷಿಣ, ಹರಿಹರ, ಹೊನ್ನಾಳಿ, ಚನ್ನಗಿರಿ, ಮಾಯಕೊಂಡ, ಜಗಳೂರು, ಹರಪನಹಳ್ಳಿ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವರ್ಗಗಳು ಸರಾಸರಿ ಶೇ.80ರಷ್ಟು ಜನಸಂಖ್ಯೆಯನ್ನು ಹೊಂದಿವೆ. ಆದರೂ, ಮಾಯಕೊಂಡ ಪರಿಶಿಷ್ಟ ಜಾತಿಗೆ, ಜಗಳೂರು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದನ್ನು ಹೊರತುಪಡಿಸಿದರೆ, ಉಳಿದ 6 ಕ್ಷೇತ್ರಗಳಲ್ಲಿ ಅಹಿಂದ ವರ್ಗಗಳನ್ನು ಪ್ರತಿನಿಧಿಸುವ ಒಬ್ಬ ಶಾಸಕರೂ ಇಲ್ಲ. 1991ರ ನಂತರ ಅಹಿಂದ ವರ್ಗಗಳ ಯಾವೊಬ್ಬರೂ ದಾವಣಗೆರೆ ಕ್ಷೇತ್ರದಿಂದ ಒಂದು ಸಲವೂ ಸಂಸದರಾಗಿಲ್ಲ ಎಂದು ಹೇಳಿದರು.

ಪ್ರಸ್ತುತ 2024ರ ಚುನಾವಣೆಯಲ್ಲಿ ಅಹಿಂದ ವರ್ಗಕ್ಕೆ ಕಾಂಗ್ರೆಸ್ ಟಿಕೆಟ್ ಸಿಗುತ್ತದೆಂಬ ನಂಬಿಕೆ ಹೊಂದಿದ್ದ ಅಹಿಂದ ವರ್ಗದವರಿಗೆ ತೀವ್ರ ನಿರಾಸೆಯಾಗಿದೆ. ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಜಿ.ಬಿ.ವಿನಯಕುಮಾರ ಕಾಂಗ್ರೆಸ್ಸಿನ ಟಿಕೆಟ್ ಆಕಾಂಕ್ಷಿಯಾಗಿ, ಹಳ್ಳಿಹಳ್ಳಿಯಲ್ಲಿ ಪಾದಯಾತ್ರೆ ಕೈಗೊಂಡು, ಸಂವಾದ, ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ, ಜನಸಾಮಾನ್ಯರು, ರೈತರು, ಬಡವರು, ಶ್ರಮಿಕರು, ಕೂಲಿ ಕಾರ್ಮಿಕರನ್ನು ಹೆಚ್ಚಿನದಾಗಿ ತಲುಪಿದ್ದರು. ಕಾಂಗ್ರೆಸ್ ಹೈಕಮಾಂಡ್‌, ಸಿಎಂ, ಕೆಪಿಸಿಸಿ ಅಧ್ಯಕ್ಷರು ಇಂತಹ ವಿನಯಕುಮಾರ ಅವರಿಗೆ ಟಿಕೆಟ್ ನೀಡದೇ, ಕಡೆಗಣಿಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.

ದಶಕಗಳಿಂದಲೂ ಓಟುಗಳಾಗಿಯೇ ಬಳಕೆ ಆಗಿರುವ ಶೋಷಿತರಿಗೆ ಸ್ವಾಭಿಮಾನವೂ ಇದೆ. ಸ್ವಾವಲಂಬನೆಯ ಮತಗಳೂ ಇವೆ. ಇದನ್ನು ಕಾಂಗ್ರೆಸ್ಸಿನ ನಾಯಕರು ಮರೆಯಬಾರದು. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತ ವರ್ಗಗಳ ಸ್ವಾಭಿಮಾನಕ್ಕಾಗಿ ನಮ್ಮ ಹಕ್ಕುಗಳಿಗಾಗಿ ಕಾಂಗ್ರೆಸ್ ಹೈಕಮಾಂಡ್‌, ಕೆಪಿಸಿಸಿ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿ, ದಾವಣಗೆರೆ ಕ್ಷೇತ್ರದ ಉಸ್ತುವಾರಿಗಳು ತಕ್ಷಣವೇ ನಮ್ಮ ಕ್ಷೇತ್ರದ ಘೋಷಿತ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಾಯಿಸಬೇಕು. ಅಹಿಂದ ವರ್ಗಗಳನ್ನು ಪ್ರತಿನಿಧಿಸುವ ಜಿ.ಬಿ.ವಿನಯಕುಮಾರ್‌ ಅವರಿಗೆ ಟಿಕೆಟ್ ಘೋಷಣೆ ಮಾಡಿ, "ಬಿ " ಫಾರಂ ನೀಡಬೇಕು. ಅತ್ಯಧಿಕ ಮತಗಳಿಂದ ವಿನಯ್‌ ಅವರನ್ನು ಗೆಲ್ಲಿಸಿ, ಶೋಷಿತ ವರ್ಗಗಳಿಗೂ ನ್ಯಾಯ ದೊರಕಿಸಿಕೊಡಬೇಕು ಎಂದು ರಾಜು ಮೌರ್ಯ ಒತ್ತಾಯಿಸಿದರು.

ಅಹಿಂದ ಚೇತನದ ಮುಖಂಡರಾದ ಎಸ್.ಎಂ. ಸಿದ್ಧಲಿಂಗಪ್ಪ, ಹನುಮಂತಪ್ಪ ತುಪ್ಪದಹಳ್ಳಿ, ವಿ.ಲಕ್ಷ್ಮಣ, ಎಸ್.ಮುರುಗೇಶ, ಹಸನ್ ಬಾಬು, ಜಿ.ಷಣ್ಮುಖಪ್ಪ, ರಂಗನಾಥ, ಡಿ.ಮಲ್ಲೇಶ, ಆರ್.ಬಿ.ಪರಮೇಶ, ರಂಗನಾಥ, ಐ.ಎಂ.ಗಿರೀಶ ಚಿಕ್ಕಬೂದಿಹಾಳ್ ಇತರರು ಇದ್ದರು.

- - - ಬಾಕ್ಸ್‌ ಅಹಿಂದ ವರ್ಗಕ್ಕೆ ಯೋಗ್ಯತೆ ಇಲ್ಲವೇ?ಅಹಿಂದ ವರ್ಗಗಳನ್ನು ಕೇವಲ ಶಾಮಿಯಾನ ಹಾಕಲು, ಕುರ್ಚಿ ಎತ್ತಿಡಲು, ಕರಪತ್ರಗಳನ್ನು ಹಂಚಲು, ಪೋಸ್ಟರ್ ಹಚ್ಚಲು, ಚುನಾವಣಾ ಪ್ರಚಾರದಲ್ಲಿ ಜೈಕಾರ ಹಾಕಲು, ಮತ ಹಾಕಲು ಮಾತ್ರ ಸೀಮಿತಗೊಳಿಸಿರುವ ಅಹಿಂದ ವರ್ಗದ ಒಬ್ಬ ವ್ಯಕ್ತಿಗೂ ಸಂಸದನಾಗಲು ಯೋಗ್ಯತೆ ಇಲ್ಲವೇ ಎಂಬ ಆಕ್ರೋಶದ ಪ್ರಶ್ನೆಗಳು ಅಹಿಂದ ವರ್ಗಗಳ ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತಿವೆ ಎಂದು ರಾಜು ಮೌರ್ಯ ಕಿಡಿಕಾರಿದರು.

- - - -25ಕೆಡಿವಿಜಿ1, 2:

ದಾವಣಗೆರೆಯಲ್ಲಿ ಸೋಮವಾರ ಅಹಿಂದ ಚೇತನದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಬಿ. ಮೌರ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೂರು ದಿನಗಳ ಅರಿವು ಕಾರ್ಯಕ್ರಮಕ್ಕೆ ಕ್ರಿಯಾ ಯೋಜನೆ ರೂಪಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಶ್ರಮ, ಆತ್ಮವಿಶ್ವಾಸದಿಂದ ಕ್ರೀಡೆಯಲ್ಲಿ ಉನ್ನತ ಮಟ್ಟದ ಸಾಧನೆ ಸಾಧ್ಯ