ಕೊಪ್ಪಳ: ಕೃಷಿ ಚಟುವಟಿಕೆ ವಾಸ್ತವಾಗಿ ಬಹಳ ಸರಳವಾಗಿದೆ, ಆದರೆ ನಾವು ಅದನ್ನು ದೊಡ್ಡ ವಿಜ್ಞಾನವಾಗಿಸಲು ಹೊರಟಿದ್ದೇವೆ. ಯಾವಾಗ ನಾವು ರಾಸಾಯನಿಕ ಬಿಡುತ್ತೇವೆಯೋ ಆಗ ಬದಲಾವಣೆ ಬರುತ್ತದೆ ಎಂದು ಗಿಡ-ಮರ ಆಧಾರಿತ ಕೃಷಿ ಪಂಡಿತ ಹುಲಿಕೆರೆ ವಿಶ್ವೇಶ್ವರ ಸಜ್ಜನ ಹೇಳಿದರು.
ನಾನು ಹೊಸ ಕೃಷಿ ಪದ್ಧತಿ ಅಂದರೆ ಹಳೆಯದನ್ನು ಮತ್ತೆ ಪಾಲಿಸಿ ಕೆಲಸ ಕಡಿಮೆ ಮಾಡುವುದು. ಅಂದರೆ "ಮಾಡುವ ಬದಲು ಮಾಡದಿರುವ ಕಡೆಗೆ ಕೃಷಿ " ಎಂಬ ಘೋಷವಾಕ್ಯದೊಂದಿಗೆ ಸರ್ಕಾರದ ಹಲವು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ನಾವು ಕಾರ್ಪೊರೇಟ್ ಜಗತ್ತಿನ ಬಲೆಗೆ ಬಿದ್ದಿದ್ದೇವೆ. ನನ್ನ ಬೆಳೆ, ನನ್ನ ಬೆಲೆ ನನ್ನದೇ ಮಾರಾಟ ಎಂದು ಮಾಡಿಕೊಂಡಾಗ ನಿಶ್ಚಿತವಾಗಿ ಶ್ರೀಮಂತರಾಗುತ್ತೇವೆ ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಸೋಮರಡ್ಡಿ ಅಳವಂಡಿ ಮಾತನಾಡಿ, ಜಗತ್ತು ಕೆಟ್ಟಿದೆ ಎಂದು ಭಾವಿಸಿದರೆ ಅದಕ್ಕೆ ಕಾರಣ ಕೇವಲ ಮನುಷ್ಯ ಮಾತ್ರ. ಈಗಲೂ ಪರಿಸರ, ಸೃಷ್ಟಿ, ಪಕ್ಷಿ ಪ್ರಾಣಿ ಪ್ರಪಂಚ ಅತ್ಯಂತ ನಿಷ್ಕಲ್ಮಶಲವಾಗಿ ಉಳಿದು, ಸಹಜವಾಗಿ ಬದುಕುತ್ತಿರುವುದರಿಂದ ಈಗಲೂ ಪ್ರಪಂಚ ಉಳಿದಿದೆ. ಅದೇ ಮನುಷ್ಯನ ರೀತಿ ಅವು ಆಗಿದ್ದರೆ ಇಂದು ಪ್ರಪಂಚವೇ ಎರಡು ಮೂರು ಬಾರಿ ಪ್ರಳಯ ಆಗಿರುತ್ತಿತ್ತು. ನಾವು ಆಧುನಿಕ ಜೀವನಶೈಲಿಗೆ ಬಿದ್ದು ಕೃಷಿಗೆ ಮತ್ತು ಬೆಳೆಗೆ ಬರೀ ರಾಸಾಯನಿಕ ಸಿಂಪರಣೆ ಮಾಡಿ ಬದುಕು, ಭೂಮಿ ಎರಡಕ್ಕೂ ವಿಷ ಹಾಕಿಕೊಂಡಿದ್ದೇವೆ ಎಂದರು.ಮುಂಡರಗಿ ಅನ್ನದಾನೇಶ್ವರ ಮಠದ ನಾಡೋಜ ಅನ್ನದಾನ ಶ್ರೀಗಳು, ಅಮೃತಾನಂದ ಮಹಾಸ್ವಾಮಿಗಳು, ಚಿದಾನಂದ ಮಹಾಸ್ವಾಮಿಗಳು, ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಚೈತನ್ಯಾನಂದ ಮಹಾಸ್ವಾಮಿಗಳು, ಶಿವರಾಮ ಕೃಷ್ಣಾನಂದರು, ಮೋಹನ್ ಪುರೋಹಿತ, ಗವಿಸಿದ್ದಯ್ಯ ಹಿರೇಮಠ,
ಶ್ರೀ ಗವಿಮಠದ ಶ್ರೀ ಗವಿಸಿದ್ದೇಶ್ವರ ಸದಾ ಸಂಚಾರ ಕಲಾತಂಡದಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು. ಎರಡನೇ ದಿನ ಸೋಮವಾರ ಬೆಳಗ್ಗೆ ದ್ಯಾಮಮ್ಮ ದೇವಿ ಮೂರ್ತಿಯನ್ನು ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕೀಲುಕುದುರೆ ಗೊಂಬೆಗಳು, ಕರಡಿ ಮಜಲು, ಬಾಜಾ ಭಜಂತ್ರಿ, ಬ್ರಾಸ್ ಬ್ಯಾಂಡ್, ಡೊಳ್ಳು ವಾದ್ಯ ಮೇಳಗಳೊಂದಿಗೆ ಸಂಭ್ರಮದಿಂದ ಮೆರವಣಿಗೆ ನಡೆಯಿತು.