ಪರ್ತಗಾಳಿಯಲ್ಲಿ ಶ್ರೀರಾಮನ ಪ್ರತಿಮೆ ಉದ್ಘಾಟಿಸಲಿರುವ ಮೋದಿ

KannadaprabhaNewsNetwork |  
Published : Nov 25, 2025, 02:30 AM IST

ಸಾರಾಂಶ

ಗೋವಾದ ಕಾಣಕೋಣ ಸಮೀಪ ಇರುವ ಪರ್ತಗಾಳಿ ಜೀವೋತ್ತಮ ಮಠದಲ್ಲಿ 77 ಅಡಿ ಎತ್ತರದ ಶ್ರೀರಾಮನ ಮೂರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿದ್ದು, ಈ ಭವ್ಯ ಸಮಾರಂಭಕ್ಕೆ ಪರ್ತಗಾಳಿ ಮಠದಲ್ಲಿ ಸಮರೋಪಾದಿಯಲ್ಲಿ ಸಿದ್ಧತೆ ನಡೆಯುತ್ತಿದೆ.

ಐತಿಹಾಸಿಕ ಕಾರ್ಯಕ್ರಮಕ್ಕೆ ಸಜ್ಜುಗೊಳ್ಳುತ್ತಿರುವ ಪರ್ತಗಾಳಿ ಜೀವೋತ್ತಮ ಮಠಕನ್ನಡಪ್ರಭ ವಾರ್ತೆ ಕಾರವಾರ

ಗೋವಾದ ಕಾಣಕೋಣ ಸಮೀಪ ಇರುವ ಪರ್ತಗಾಳಿ ಜೀವೋತ್ತಮ ಮಠದಲ್ಲಿ 77 ಅಡಿ ಎತ್ತರದ ಶ್ರೀರಾಮನ ಮೂರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿದ್ದು, ಈ ಭವ್ಯ ಸಮಾರಂಭಕ್ಕೆ ಪರ್ತಗಾಳಿ ಮಠದಲ್ಲಿ ಸಮರೋಪಾದಿಯಲ್ಲಿ ಸಿದ್ಧತೆ ನಡೆಯುತ್ತಿದೆ.

77 ಅಡಿ ಎತ್ತರದ ಕಂಚಿನ ಕೋದಂಡರಾಮನ ಪ್ರತಿಮೆಯ ಜೋಡಣೆ ಅಂತಿಮ ಹಂತದಲ್ಲಿದೆ. ಕೋದಂಡದಂತೆ ಕಾಣುವ ಸ್ಥಳದಲ್ಲಿ ಶ್ರೀರಾಮನ ಮೂರ್ತಿ ಸ್ಥಾಪಿಸಲಾಗುತ್ತಿರುವುದು ವಿಶೇಷವಾಗಿದೆ.

ಪ್ರಧಾನಿ ನರೇಂದ್ರ ಮೋದಿ ನ.28ರಂದು ಮಧ್ಯಾಹ್ನ 3 ಗಂಟೆಗೆ ಶ್ರೀರಾಮನ ಮೂರ್ತಿ ಹಾಗೂ ರಾಮಾಯಣದ ಥೀಮ್ ಪಾರ್ಕ ಅನ್ನು ಅನಾವರಣಗೊಳಿಸಲಿದ್ದಾರೆ. ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಅಯೋಧ್ಯೆಯಂತೆ ಪರ್ತಗಾಳಿ ರೂಪುಗೊಳ್ಳಲಿದೆ ಎಂಬ ವಿಶ್ವಾಸವನ್ನು ಪರ್ತಗಾಳಿ ಮಠದ ಪ್ರಮುಖರು ವ್ಯಕ್ತಪಡಿಸಿದ್ದಾರೆ.

ನ.27ರಿಂದ 11 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಪರ್ತಗಾಳಿಯಲ್ಲಿ ಆರಂಭವಾಗಲಿದ್ದು, ಅದಕ್ಕೆ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಸುಮಾರು ಒಂದೂವರೆ ಲಕ್ಷದಷ್ಟು ಜನರು ಸೇರುವ ನಿರೀಕ್ಷೆ ಇದ್ದು, ಅದಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 11 ದಿನಗಳ ಕಾರ್ಯಕ್ರಮದಲ್ಲಿ ಪ್ರತಿದಿನ 6-7 ಸಾವಿರ ಜನರು ಆಗಮಿಸಲಿದ್ದು ಅವರಿಗೆ ಅನ್ನಸಂತರ್ಪಣೆಯನ್ನೂ ಮಾಡಲಾಗುವುದು ಎಂದು ಮಠದ ಪ್ರಮುಖರು ತಿಳಿಸಿದ್ದಾರೆ.

ಪರ್ತಗಾಳಿ ಮಠಕ್ಕೆ ಮಠವೇ ಆಮೂಲಾಗ್ರವಾಗಿ ನವೀಕರಣಗೊಂಡಿದೆ. ಗರ್ಭಗುಡಿಯನ್ನು ಮಾತ್ರ ಹಾಗೆ ಇಟ್ಟುಕೊಂಡು ಮಠದ ಪರಿಸರದಲ್ಲಿ ಭವ್ಯ ಕಟ್ಟಡ ತಲೆಎತ್ತಿದೆ. ಕಾಷ್ಠ ಶಿಲ್ಪಗಳು, ಶಿಲಾಮಯ ಕಟ್ಟಡಗಳು ಗಮನ ಸೆಳೆಯುತ್ತಿವೆ. ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಮಠವಾದ ಪರ್ತಗಾಳಿ ಜೀವೋತ್ಮಮ ಮಠ ಐತಿಹಾಸಿಕ ಕಾರ್ಯಕ್ರಮಕ್ಕೆ ಅಣಿಯಾಗುತ್ತಿದೆ.ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನ ಮೂರ್ತಿಯನ್ನು ಅನಾವರಣಗೊಳಿಸುವುದು ವಿಶೇಷವಾಗಿದೆ. ಮಠ ಆರಂಭವಾಗ 550 ವರ್ಷಗಳಾಗುತ್ತಿರುವ ಹಿನ್ನೆಲೆ ನ.27ರಿಂದ ಹಲವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಶ್ರೀಗಳು ತಿಳಿಸಿದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಶವ ಬಗ್ಗೆ ಬುರುಡೆ ಬಿಟ್ಟ ಚಿನ್ನಯ್ಯಗೆ ಬೇಲ್
ಕೈ ರೆಬೆಲ್ಸ್‌ ಜತೆ ಸೇರಿ ನಾವು ಸರ್ಕಾರ ಮಾಡಲ್ಲ : ಅಶೋಕ್‌