ಶಾಸಕ ಬಸವರಾಜ ಶಿವಣ್ಣನವರಗೆ ಸಚಿವ ಸ್ಥಾನಕ್ಕೆ ಆಗ್ರಹ

KannadaprabhaNewsNetwork |  
Published : Nov 25, 2025, 02:30 AM IST
ಮ | Kannada Prabha

ಸಾರಾಂಶ

ಸೇವಾ ಹಿರಿತನದ ಮಾನದಂಡವನ್ನಿಟ್ಟುಕೊಂಡು ಜಿಲ್ಲೆಯಲ್ಲಿಯೇ ಹಿರಿಯ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ನೀಡುವಂತೆ ತಾಲೂಕು ಘಟಕದ ಕಾಂಗ್ರೆಸ್ ಮುಖಂಡರು ದಿಲ್ಲಿಯಲ್ಲಿರುವ ಹೈಕಮಾಂಡ್ ಸೇರಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಒತ್ತಾಯಿಸಿದರು.

ಬ್ಯಾಡಗಿ: ಸೇವಾ ಹಿರಿತನದ ಮಾನದಂಡವನ್ನಿಟ್ಟುಕೊಂಡು ಜಿಲ್ಲೆಯಲ್ಲಿಯೇ ಹಿರಿಯ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ನೀಡುವಂತೆ ತಾಲೂಕು ಘಟಕದ ಕಾಂಗ್ರೆಸ್ ಮುಖಂಡರು ದಿಲ್ಲಿಯಲ್ಲಿರುವ ಹೈಕಮಾಂಡ್ ಸೇರಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಒತ್ತಾಯಿಸಿದರು.

ಮಂಗಳವಾರ ಪಟ್ಟಣದ ಪ್ರವಾಸಿಮಂದಿರಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಬೀರಪ್ಪ ಬಣಕಾರ, ಅಧಿಕಾರ ಪಡೆದುಕೊಳ್ಳುವುದಕ್ಕಿಂತ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಶಾಸಕ ಬಸವರಾಜ ಶಿವಣ್ಣನವರ ಅತ್ಯಂತ ಶಕ್ತಿಶಾಲಿಯಾಗಿದ್ದು ಕೂಡಲೇ ಸಚಿವ ಸ್ಥಾನಕ್ಕೆ ಶಿವಣ್ಣನವರ ಅವರ ಹೆಸರನ್ನು ಪರಿಗಣಿಸುವಂತೆ ಆಗ್ರಹಿಸಿದರು.

ರಮೇಶ ಸುತ್ತಕೋಟಿ ಮಾತನಾಡಿ, ಜಿಲ್ಲೆಯಲ್ಲಿನ ಶಾಸಕರಿಗೆ ಸಚಿವ ಸ್ಥಾನ ನೀಡದೇ ಜಿಲ್ಲೆ ಅಭಿವೃದ್ಧಿ ಕಾಣದೇ ಸೊರಗುತ್ತಿದೆ, ಅದರಲ್ಲೂ ಬ್ಯಾಡಗಿ ಮತಕ್ಷೇತ್ರದಲ್ಲಿ ಎಚ್.ಡಿ.ಲಮಾಣಿ ಕೊನೆಯ ಸಚಿವರಾಗಿದ್ದು ಕಳೆದ 25 ವರ್ಷಗಳಿಂದ ಸಚಿವ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಹೀಗಾಗಿ ಹಿರಿಯ ಮುತ್ಸದ್ದಿ ರಾಜಕಾರಣಿ ಬಸವರಾಜ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು. ಡಿ.ಎಚ್.ಬುಡ್ಡನಗೌಡ್ರ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳ ಕಾಲ ಮುಗಿದಿದೆ, ಆದರೆ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲು ಹಿಂದೇಟು ಹಾಕಿದ ಪರಿಣಾಮ ಬಸವರಾಜ ಶಿವಣ್ಣನವರ ಅವರಿಗೆ ಮೊದಲ ಎರಡೂವರೆ ವರ್ಷದ ಅವಧಿಯಲ್ಲಿ ಸಚಿವ ಸ್ಥಾನ ಸಿಕ್ಕಿರುವುದಿಲ್ಲ ಹಾಗಂತ ಅವರ ದೌರ್ಬಲ್ಯವಲ್ಲ ಕೂಡಲೇ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು.

ಹೋರಾಟಕ್ಕೂ ಸಿದ್ದ: ರಮೇಶ ಸುತ್ತಕೋಟಿ ಮಾತನಾಡಿ, ಶಾಸಕ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ನೀಡದಿದ್ದಲ್ಲಿ ಎಂತಹ ಹೋರಾಟ ಮಾಡುವುದಕ್ಕೂ ಸಿದ್ದವಾಗಿದ್ದೇವೆ, ಆದರೆ ಅವರ ಶಿವಣ್ಣನವರ ಸೂಚನೆಗೆ ಕಾಯ್ದುಕೊಂಡು ಕುಳಿತಿದ್ದೇವೆ, ಹೀಗಾಗಿ ನಿಯೋಗದೊಂದಿಗೆ ತೆರಳಿ ಸಚಿವ ಸ್ಥಾನಕ್ಕಾಗಿ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

ಈ ವೇಳೆ ಗ್ಯಾರಂಟಿ ಯೋಜನೆಗಳ ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ, ಮುಖಂಡರಾದ ಬಸವರಾಜ ಬನ್ನಿಹಟ್ಟಿ, ಚಿಕ್ಕಪ್ಪ ಹಾದಿಮನಿ, ಮೇಲಗಿರಿಯಪ್ಪ ಕಾಕೋಳ, ಮಂಜನಗೌಡ ಲಿಂಗನಗೌಡ್ರ, ಗುಡ್ಡಪ್ಪ ಹಾದೀಮನಿ, ಜಗದೀಶ ಪೂಜಾರ, ಬಸವರಾಜ ಪಾಟೀಲ (ಚಿಕ್ಕಣಜಿ), ಈರಣ್ಣ ಚಿನ್ನಗುಡಿ ಹಾಗೂ ಇನ್ನಿತರರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಶವ ಬಗ್ಗೆ ಬುರುಡೆ ಬಿಟ್ಟ ಚಿನ್ನಯ್ಯಗೆ ಬೇಲ್
ಕೈ ರೆಬೆಲ್ಸ್‌ ಜತೆ ಸೇರಿ ನಾವು ಸರ್ಕಾರ ಮಾಡಲ್ಲ : ಅಶೋಕ್‌