ಮನಸ್ಸು ಬದಲಿಸಿದರೆ ಭವಿಷ್ಯ ಬದಲಾಗುತ್ತದೆ: ಸೆಬಿ ಮಾವೇಲಿ

KannadaprabhaNewsNetwork |  
Published : Mar 01, 2025, 01:01 AM IST
11 | Kannada Prabha

ಸಾರಾಂಶ

ಪ್ರತಿಯೊಬ್ಬರೂ ಗುರಿ ಇಟ್ಟುಕೊಂಡು ಸಾಧನೆಗೆ ಕಠಿಣ ಶ್ರಮ ಪಡಬೇಕು. ಪ್ರತಿಭೆ ವಿಕಸನ, ಆಸೆ ಈಡೇರಿಗೆ, ಪರಸ್ವರ ಸ್ನೇಹ ವಿನಿಮಯ ಮತ್ತು ರಚನಾತ್ಮಕತೆಗೆ ಇಂತಹ ವೇದಿಕೆಗಳು ಅವಕಾಶ ಒದಗಿಸಿಕೊಡುತ್ತವೆ. ಇದನ್ನು ಸವಾಲಾಗಿ ಸ್ವೀಕರಿಸಿ, ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ.

ಕನ್ನಡಪ್ರಭ ವಾರ್ತೆ ಮೈಸೂರು

ಮನಸ್ಸು ಬದಲಿಸಿದರೆ ಭವಿಷ್ಯ ಬದಲಾಗುತ್ತದೆ ಎಂದು ಎಂಡಿಇಎಸ್‌ ತರಬೇತಿ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಕಾರ್ಯನಿರ್ವಾಣಾಧಿಕಾರಿ ಸೆಬೆ ಮಾವೇಲಿ ಹೇಳಿದರು.

ರಮ್ಮನಹಳ್ಳಿಯಲ್ಲಿರುವ ಸಂತ ಜೋಸೆಫರ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಜೋ- ಕಾನ್‌ಕ್ಲೇವ್‌ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆದ್ದರಿಂದ ಪ್ರತಿಯೊಬ್ಬರೂ ಗುರಿ ಇಟ್ಟುಕೊಂಡು ಸಾಧನೆಗೆ ಕಠಿಣ ಶ್ರಮ ಪಡಬೇಕು ಎಂದು ಕರೆ ನೀಡಿದರು.

ಪ್ರತಿಭೆ ವಿಕಸನ, ಆಸೆ ಈಡೇರಿಗೆ, ಪರಸ್ವರ ಸ್ನೇಹ ವಿನಿಮಯ ಮತ್ತು ರಚನಾತ್ಮಕತೆಗೆ ಇಂತಹ ವೇದಿಕೆಗಳು ಅವಕಾಶ ಒದಗಿಸಿಕೊಡುತ್ತವೆ. ಇದನ್ನು ಸವಾಲಾಗಿ ಸ್ವೀಕರಿಸಿ, ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.

ಜೋ- ಕಾನ್‌ಕ್ಲೇವ್‌ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ಮಾತನಾಡಿ, ಇಲ್ಲಿ ಪಠ್ಯಕ್ಕೆ ಸಂಬಂಸಿದಂತೆ ಸ್ಪರ್ಧೆಗಳನ್ನು ಏರ್ಪಡಿಸಿರುವುದು ಉತ್ತಮವಾದುದು. ಇದರಿಂದ ವಿಷಯದಲ್ಲಿ ಹೆಚ್ಚಿನ ಪರಿಣತಿ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಇದು ಅವಕಾಶಗಳ ಯುಗ. ಹೀಗಾಗಿ ಎದುರಾಗುವ ಎಲ್ಲಾ ಅವಕಾಶಗಳಲ್ಲಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕಾಗಿ ಸೋಲು- ಗೆಲವು ನೋಡದೆ ಎಲ್ಲಾ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಆ ಮೂಲಕ ಪ್ರಾಪಂಚಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಪ್ರಾಂಶುಪಾಲೆ ಡಾ. ಪೃಥ್ವಿ ಎಸ್ ಶಿರಹಟ್ಟಿ ಇದ್ದರು.

ಮಾನ್ಯ ಮತ್ತು ತಂಡದವರು ಪ್ರಾರ್ಥಿಸಿದರು. ಕಂಪ್ಯೂಟರ್‌ಸೈನ್ಸ್‌ವಿಭಾಗದ ಮುಖ್ಯಸ್ಥೆ ಅವಂತಿ ಸ್ವಾಗತಿಸಿದರು. ಜೋ -ಕಾನ್ ಕ್ಲೇವ್ ಕಾಲೇಜು ಉತ್ಸವವನ್ನು ಕುರಿತು ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರಚನಾ ಪ್ರದೀಪ್ ವಿವರಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪುಷ್ಪಾ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಎ.ಎಸ್. ಮಹೇಶ್ ಕಾರ್ಯಕ್ರಮ ನಿರೂಪಿಸಿದರು.ಜೋ- ಕಾನ್ ಕ್ಲೇವ್ -2025

ಜೋ- ಕಾನ್‌ ಕ್ಲೇವ್‌ ಉತ್ಸವವದಲ್ಲಿ ಒಟ್ಟು ಹತ್ತು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಸ್ನಾತಕ ಮತ್ತು ಸ್ನಾತಕೋತ್ತರ ಕಲಿಕೆಯ ನಗರದ ಒಟ್ಟು ನಲವತ್ತಕ್ಕೂ ಹೆಚ್ಚು ಕಾಲೇಜುಗಳನ್ನು ಈ ಉತ್ಸವಕ್ಕೆ ಆಹ್ವಾನಿಸಲಾಗಿತ್ತು.

ಐಟಿ ಆಕ್ಷನ್, ಮಾಸ್ಟರ್ ಮೈಂಡ್, ಪಿಕ್ಸೆಲ್ ಟು ಮಾಸ್ಟರ್ ಪೀಸ್ ಲೋಗೋಯನ್, ಫ್ಯೂಷನ್ ಮಾಸ್ಟರ್, ಕಾಮಿವುಡ್, ಡೈಲಾಗ್ ಡೈವ್, ಪರ್ಸನಗ್ಗಿಯೊ, ಪ್ರಶ್ನೋತ್ತರ ರಸಾಯನ, ವಾಕ್ ಚಾತುರ್ಯ ಸ್ಪರ್ಧೆಗಳನ್ನು ಕಾಲೇಜಿನ ವಾಣಿಜ್ಯ ವಿಭಾಗ, ಗಣಕ ವಿಜ್ಞಾನ ವಿಭಾಗ, ಆಂಗ್ಲ ಭಾಷಾ ವಿಭಾಗ, ಕನ್ನಡ ವಿಭಾಗ ಮತ್ತು ಹಿಂದಿ ವಿಭಾಗಗಳು ಹಮ್ಮಿಕೊಂಡಿದ್ದವು. ಕಾಲೇಜಿನ ಆಸಿಯಾ ಸುಲ್ತಾನ ಅವರ ರಚಿಸಿದ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಕೂಡ ಇತ್ತು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...