ಚನ್ನಬಸಪ್ಪ ಕುಳಗೇರಿ ಮಾದರಿ ರಾಜಕಾರಣಿ: ಸಿ.ಎಂ.ಇಬ್ರಾಹಿಮ್

KannadaprabhaNewsNetwork |  
Published : Apr 25, 2025, 12:31 AM IST
ಜೇವರ್ಗಿ : ಸ್ವಾತಂತ್ರö್ಯ ಹೋರಾಟಗಾರ ಚನ್ನಬಸಪ್ಪ ಕುಳಗೇರಿ ಅವರ 97 ನೇ ಜಯಂತ್ಯೋತ್ಸವ ಹಾಗು ಅವರ ಹೋರಾಟ, ಸೇವೆ, ಸಾಧನೆಗೊಳಗೊಂಡ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಮ್ ಅವರು ಉದ್ಘಾಟಿಸಿದರು.ಹರಗುರು ಚರಮೋರ್ತಿಗಳು ಹಾಗೂ ಶಾಸಕರು ಇದ್ದರು. | Kannada Prabha

ಸಾರಾಂಶ

ಸ್ವಾತಂತ್ರ್ಯ ಹೋರಾಟಗಾರ ಚನ್ನಬಸಪ್ಪ ಕುಳಗೇರಿ 97ನೇ ಜಯಂತ್ಯುತ್ಸವ । ಕೃತಿ ಲೋಕಾರ್ಪಣೆ

ಸ್ವಾತಂತ್ರ್ಯ ಹೋರಾಟಗಾರ ಚನ್ನಬಸಪ್ಪ ಕುಳಗೇರಿ 97ನೇ ಜಯಂತ್ಯುತ್ಸವ । ಕೃತಿ ಲೋಕಾರ್ಪಣೆಕನ್ನಡಪ್ರಭ ವಾರ್ತೆ ಜೇವರ್ಗಿ

50 ವರ್ಷದ ನನ್ನ ರಾಜಕೀಯ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮುತ್ಸದಿ ರಾಜಕಾರಣಿ ದಿ.ಚನ್ನಬಸಪ್ಪ ಕುಳಗೇರಿ ಅವರು ಮಾದರಿ ರಾಜಕಾರಣಿಯಾಗಿದ್ದರು, ಅವರ ಸ್ಮರಣೆ ಅವಿಸ್ರಣಿಯ ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಮ್ ಹೇಳಿದರು.

ಪಟ್ಟಣದ ಅಂಬೇಡ್ಕರ ಭವನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಚನ್ನಬಸಪ್ಪ ಕುಳಗೇರಿ ಅವರ 97ನೇ ಜಯಂತ್ಯುತ್ಸವ ಹಾಗೂ ಅವರ ಹೋರಾಟ, ಸೇವೆ, ಸಾಧನೆಗೊಳಗೊಂಡ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆಗ ಜಾತಿ ಹೋರಾಟ ಮಾಡುತ್ತಿರಲ್ಲಿಲ್ಲ, ನಿಜಾಮರ ವಿರುದ್ಧ ಹೋರಾಟ ನಡೆದಿತ್ತೆ ಹೊರತು ಮುಸ್ಲಿಮರ ವಿರುದ್ಧ ಅಲ್ಲ ಎಂದು ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯನ್ನು ನಾವೆಲ್ಲರು ಬಲವಾಗಿ ಖಂಡಿಸುತ್ತೆವೆ. ಉಗ್ರರ ಅಟ್ಟಹಾಸವನ್ನು ಮಟ್ಟ ಹಾಕಲು ಪ್ರಧಾನಮಂತ್ರಿ ನರೆಂದ್ರ ಮೋದಿ ಅವರನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೆನೆ ಎಂದರು.

ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಆಗಿನ ರಾಜಕಾರಣದಲ್ಲಿ ಮೌಲ್ಯಾಧರಿತ ಇತ್ತು ಇಗ ಅದು ಉಳಿದಿಲ್ಲ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಅಧಿಕಾರ ವಿಕೇಂದ್ರಿಕರಗೊಳಿಸುವದರ ಜೊತೆಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನನಾಯಕರಾಗಿ ಹೊರಹೊಮ್ಮಿದ್ದರು. ತಾವು ಸಿ.ಎಂ.ಇಬ್ರಾಹಿಮ್, ಬಾಪುಗೌಡ ದರ್ಶಾನಾಪುರ, ಚನ್ನಬಸಪ್ಪ ಕುಳಗೇರಿ ಸೇರಿದಂತೆ ಹೆಗಡೆ ಅವರ ಗರಡಿಯಲ್ಲಿ ಪಳಗಿದ್ದೇವೆ. ಚನ್ನಬಸಪ್ಪ ಕುಳಗೇರಿ ಅವರು ಮೌಲ್ಯಾದಾರಿತ ರಾಜಕಾರಣಿಯಾಗಿದ್ದರು ಎಂದು ಬಣ್ಣಿಸಿದರು.

ಮಾಜಿ ಮುಖ್ಯಮಂತ್ರಿ ಡಾ.ಎನ್.ಧರ್ಮಸಿಂಗ್ ಹಾಗೂ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಜಾತ್ಯಾತೀತ ರಾಜಕಾರಣ ಮಾಡಿದ್ದಾರೆ. ಈ ಭಾಗದ ಅಭಿವೃದ್ದಿಗೆ ಧರ್ಮಸಿಂಗ್‌, ಖರ್ಗೆ ಅವರು ಪಕ್ಷಾತೀತವಾಗಿ ಹೇಳಬೇಕಾದರೆ ಅಭಿವೃದ್ದಿ ಪರ ಚಿಂತಕರಾಗಿ ಅಜಾತ ಶತೃ ಎನಿಸಿಕೊಂಡಿದ್ದಾರೆ ಎಂದು ಹೇಳಿದರು.

ಯಡೆಯೂರು ಶ್ರೀಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೊನ್ನ ವಿರಕ್ತ ಮಠದ ಡಾ.ಶಿವಾನಂದ ಮಹಾಸ್ವಾಮಿಜಿ, ನೆಲೋಗಿ ವಿರಕ್ತ ಮಠದ ಶ್ರೀಸಿದ್ದಲಿಂಗ ಮಹಾಸ್ವಾಮಿಜಿ, ಯಡ್ರಾಮಿ ವಿರಕ್ತ ಮಠದ ಶ್ರೀಸಿದ್ದಲಿಂಗ ಸ್ವಾಮಿಜಿ, ಕಡಕೋಳ ಮಡಿವಾಳೇಶ್ವರ ಮಠದ ಡಾ.ರುದ್ರಮುನಿ ಶಿವಾಚಾರ್ಯ, ಆಂದೋಲಾ ಕರುಣೇಶ್ವರ ಮಠದ ಶ್ರೀಸಿದ್ದಲಿಂಗ ಮಹಾಸ್ವಾಮಿಜಿ, ಹಿರಿಯ ಸಾಹಿತಿ ಡಾ.ಗೊ.ರು.ಚನ್ನಬಸಪ್ಪ, ಎಂಎಲ್‌ಸಿ ಎಸ್,ವಾಣಿದೇವಿ, ಶಶೀಲ್ ಜಿ.ನಮೋಶಿ, ಶಾಸಕ ಎಂ.ವೈ.ಪಾಟೀಲ, ಅಲ್ಲಮ ಪ್ರಭು ಪಾಟೀಲ ಹಾಗೂ ಶಿವರಾಜ ಪಾಟೀಲ ರದ್ದೆವಾಡಗಿ, ರಾಜಶೇಖರ ಸೀರಿ, ಡಾ.ವೀರಶೆಟ್ಟಿ ಗಾರಂಪಳ್ಳಿ ಪುಸ್ತಕ ಪರಿಚಯ ಮಾಡಿದರು. ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ, ಅಮರನಾಥ ಚ.ಸಾಹು ಕುಳಗೇರಿ, ಶಿವನಗೌಡ ಪಾಟೀಲ ಹಂಗರಗಿ, ಶಮಶುದ್ದೀನ್ ಗುಂಡಗುರ್ತಿ, ಡಾ.ಕಮಲಾ ಗಡೇದ್, ಶರಣಬಸವ ಕಲ್ಲಾ, ಷಣ್ಮುಖಪ್ಪಗೌಡ ಹಿರೇಗೌಡ ಸೇರಿದಂತೆ ಚನ್ನಬಸಪ್ಪ ಕುಳಗೇರಿ ಅವರ ಆಬಿಮಾನಿಗಳು ಹಿರಿಯರು ಪಾಲ್ಗೋಂಡಿದ್ದರು.

PREV

Recommended Stories

ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌
ಖರ್ಗೆ ಕುಟುಂಬದ ವಿರುದ್ಧ ಕೋರ್ಟ್‌ಗೆ ಖಾಸಗಿ ದೂರು