ಕನ್ನಡಪ್ರಭ ವಾರ್ತೆ ಕಮಲನಗರ
ಡಾ.ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವವನ್ನು ಮಂಗಳವಾರ ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು ಎಂದು ಸಮಿತಿ ಅಧ್ಯಕ್ಷ ಪ್ರಕಾಶ ಟೋಣ್ಣೆ ತಿಳಿಸಿದರು.ಪಟ್ಟಣದ ಡಾ. ಚನ್ನಬಸವ ಪಟ್ಟದ್ದೇವರ ಶಾಖಾ ಮಠದಲ್ಲಿ ಸೋಮವಾರ ಮಧ್ಯಾಹ್ನ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಚನ್ನಬಸವ ಪಟ್ಟದ್ದೇವರು ಇಡೀ ದೇಶದಲ್ಲಿ ಹೆಸರಾಂತ ಮಠಾಧೀಶರು. ಹೊರಗಡೆ ಉರ್ದು ನಾಮಫಲಕ ಹಾಕಿ ಒಳಗಡೆ ಕನ್ನಡ ಕಲಿಸಿದ ಮಹಾನ್‌ಚೇತನರು. ಕಮಲನಗರದಲ್ಲಿ 1932ರಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಆರಂಭಿಸಿ ಶೈಕ್ಷಣಿಕ ಕ್ರಾಂತಿ ಮಾಡಿದವರು ಎಂದರು.
ಡಾ. ಚನ್ನಬಸವ ಪಟ್ಟದ್ದೇವರ ಜನ್ಮಸ್ಥಳ ಕಮಲನಗರ ಆಗಿರುವುದರಿಂದ ಕಮಲನಗರಕ್ಕೆ ಸರ್ಕಾರ ಪುಣ್ಯಭೂಮಿ ಎಂದು ಘೋಷಿಸಬೇಕು. ಕಮಲನಗರ ಸುತ್ತಲಿನ ಸದ್ಭಕ್ತಾದಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಕಾರ್ಯಕ್ರಮದ ವಿವರ: ಜಯಂತ್ಯುತ್ಸವದ ನಿಮಿತ್ತ ಬೆಳಗ್ಗೆ 8 ಗಂಟೆಗೆ ಚನ್ನಬಸವ ಕಾಲೋನಿಯಿಂದ ಮಠದವರೆಗೆ ಭವ್ಯ ಮೆರವಣಿಗೆ ಜರುಗಲಿದೆ.
ಡಾ. ಬವಸಲಿಂಗ ಪಟ್ಟದ್ದೇವರು, ಡಾ. ಶಿವಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದಾರೆ. ಮಹಾಲಿಂಗ ಸ್ವಾಮಿ, ಬಸವಲಿಂಗ ಸ್ವಾಮಿ, ಡಾ. ಮಹಾದೇವಮ್ಮಾ ತಾಯಿ ಸಮ್ಮುಖ ವಹಿಸಲಿದ್ದಾರೆ. ಪ್ರಕಾಶ ಟೋಣ್ಣೆ ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಯಾಗಿ ಶಾಸಕ ಪ್ರಭು ಚವ್ಹಾಣ, ಡಾ. ಸಿದ್ದು ಯಾಪಲಪರವಿ, ಎಸ್‌ಪಿ ಚನ್ನಬಸವಣ್ಣ ಲಂಗೋಟಿ, ಗ್ರಾ.ಪಂ. ಅಧ್ಯಕ್ಷರಾದ ಸುಶೀಲಾ ಮಹೇಶ, ರಾಜಶೇಖರ ನಿಟ್ಟೂರೆ, ಬಾಬುವಾಲಿ, ಡಾ. ಸಂಜೀವಕುಮಾರ ಜುಮ್ಮಾ, ಚಂದ್ರಕಾಂತ ವೈಜಾಪೂರೆ, ಗಂಗಾಧರ.ವ್ಹಿ.ಸೋಲ್ಲಾಪೂರೆ, ಲಿಂಗಾನಂದ ಮಹಾಜನ, ಸುರೇಶ ಸೋಲ್ಲಾಪೂರೆ, ಶಿವಾನಂದ ವಡ್ಡೆ, ಶಿವಕುಮಾರ ಝಲ್ಫೆ, ಸಂತೋಷ ಬಿರಾದಾರ, ಪ್ರಕಾಶ ಮಾನಕರಿ, ಶಿವಶರಣಪ್ಪಾ ಚಿಕಮುರ್ಗೆ, ಮಾಧವರಾವ ಚಾಂಗೋಣೆ ಆಗಮಿಸಲಿದ್ದಾರೆ.
ಡಾ. ಜಿ.ಎಸ್.ಭುರಾಳೆ ಅವರಿಗೆ ವಿಶೇಷ ಸನ್ಮಾನ ನಡೆಯಲಿದೆ. ಸಂಜೆ ನಾಟಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದ್ದರು.ಪತ್ರಿಕಾಗೋಷ್ಠಿಯಲ್ಲಿ ಲಿಂಗಾನಂದ ಮಹಾಜನ, ಸೂರ್ಯಕಾಂತ ಸೋಲ್ಲಾಪೂರೆ, ಪ್ರಭುರಾವ ಕಳಸೆ, ರಾಜಕುಮಾರ ಬಿರಾದಾರ, ಮಹಾದೇವ ಬಿರಾದಾರ, ಅಮರ ಶಿವಣಕರ, ಶಾಮ ಬಿರಾದಾರ, ಅಜೀತ ರಾಗಾ, ರಾಮೇಶ್ವರ ಶಿವಣಕರ, ಶಿವಶರಣಪ್ಪ ಚಿಕಮುರ್ಗೆ, ಸಂಜುಕುಮಾರ ಸೋಲ್ಲಾಪೂರೆ, ಹಾವಗಿ ಟೋಣ್ಣೆ, ಸಂಗಮೇಶ ಟೋಣ್ಣೆ, ಜೀತೇಂದ್ರ ಮಹಾಜನ, ಪ್ರಮೋದ ಶಿವಣಕರ, ಕಾಶಿನಾಥ ಬಾವಗೆ, ರವಿ ಕಾರಬಾರಿ ಇದ್ದರು.