ನಿಜಾಮರಿಂದ ಶರಣ ಸಂಸ್ಕೃತಿ ರಕ್ಷಿಸಿದ ಚನ್ನಬಸವ ಪಟ್ಟದ್ದೇವರು: ಸಚಿವ ಈಶ್ವರ ಖಂಡ್ರೆ

KannadaprabhaNewsNetwork |  
Published : Dec 27, 2023, 01:31 AM ISTUpdated : Dec 27, 2023, 01:32 AM IST
ಚಿತ್ರ 26ಬಿಡಿಆರ್57 | Kannada Prabha

ಸಾರಾಂಶ

ಡಾ. ಚನ್ನಬಸವ ಪಟ್ಟದ್ದೇವರು ನಾಡಿನ ಮನೆ ದೇವರು, ಕಮಲನಗರದಲ್ಲಿ ಪಟ್ಟದ್ದೇವರ 134ನೇ ಜಯಂತ್ಯುತ್ಸವ ಅದ್ಧೂರಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಕಮಲನಗರ

ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಪುರೋಹಿತ ಶಾಹಿಗಳ ಕಪಿಮುಷ್ಟಿಯಿಂದ ಶರಣ ಸಂಸ್ಕೃತಿಯನ್ನು ರಕ್ಷಣೆ ಮಾಡಿದ್ದರೆ, 20ನೇ ಶತಮಾನದಲ್ಲಿ ನಿಜಾಮರ ದಬ್ಬಾಳಿಕೆಗೆ ಸಿಲುಕಿದ್ದ ಶರಣ ಸಂಸ್ಕೃತಿ ಮತ್ತು ಕನ್ನಡ ನಾಡು ನುಡಿಯನ್ನು ಚನ್ನಬಸವ ಪಟ್ಟದ್ದೇವರು ರಕ್ಷಿಸಿದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಡಾ. ಚನ್ನಬಸವ ಪಟ್ಟದ್ದೇವರ ಶಾಖಾ ಮಠದಲ್ಲಿ ಮಂಗಳವಾರ ನಡೆದ ಡಾ. ಚನ್ನಬಸವ ಪಟ್ಟದ್ದೇವರ 134ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶರಣರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನುಡಿದಂತೆ ನಡೆದಿರುವ ಚನ್ನಬಸವ ಪಟ್ಟದ್ದೇವರು ನಮ್ಮ ನಾಡು ಕಂಡ ಶ್ರೇಷ್ಟ ಸಂತರಾಗಿದ್ದಾರೆ ಎಂದು ಹೇಳಿದರು.

ನಿಜಾಮರ ದಬ್ಬಾಳಿಕೆ, ವಿರೋಧದ ನಡೆವೆ ಕನ್ನಡ ಭಾಷೆ ಜೀವಂತವಾಗಿರಿಸಿ, ಬಸವಾದಿ ಶರಣರ ತತ್ವಗಳನ್ನು ಪಾಲಿಸಿಕೊಂಡು ಬಂದಿರುವ ಲಿಂ. ಡಾ. ಚನ್ನಬಸವ ಪಟ್ಟದ್ದೇವರು ಈ ನಾಡಿನ ಮನೆ ದೇವರಾಗಿದ್ದಾರೆ.

ಕಮಲನಗರದಲ್ಲಿ ಡಾ. ಚನ್ನಬಸವ ಪಟ್ಟದ್ದೇವರ ಸ್ಮಾರಕ ಭವನ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಿ ಉದ್ಘಾಟನೆ ಮಾಡುವುದಾಗಿ ಭರವಸೆ ನೀಡಿದರು. ಡಾ. ಚನ್ನಬಸವ ಪಟ್ಟದ್ದೇವರ ಮಹಾದ್ವಾರ ನಿರ್ಮಿಸಿಕೊಡುವಂತೆ ಬಸವ ಭಕ್ತರು ಮನವಿ ಮಾಡಿಕೊಂಡಾಗ ಅವರ ಮನವಿಗೆ ಸ್ಪಂಧಿಸಿ ಈ ಕಾರ್ಯವೂ ಕೂಡಾ ಮಾಡಿಸುವ ಭರವಸೆ ನೀಡಿದರು.

ಡಾ. ಸಿದ್ದು ಯಾಪಲಪರವಿ ಮಾತನಾಡಿ, ಲಿಂ. ಡಾ. ಚನ್ನಬಸವ ಪಟ್ಟದ್ದೇವರು ತಮ್ಮ ಜೀವಿತಾವಧಿಯಲ್ಲಿ ಅನುಸರಿಸಿಕೊಂಡು ಬಂದಿದ್ದ ತತ್ವಾದರ್ಶಗಳನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಂಡು ನೆಮ್ಮದಿ, ಪರೋಪಕಾರಿ ಜೀವನ ಸಾಗಿಸಬೇಕು ಎಂದರು.

ಡಾ. ಶಿವಾನಂದ ಸ್ವಾಮಿ, ಡಾ. ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಡಾ. ಜಿ.ಎಸ್.ಭುರಾಳೆ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ರಾಷ್ಟ್ರೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬುವಾಲಿ, ಸಮಿತಿಯ ಅಧ್ಯಕ್ಷ ಪ್ರಕಾಶ ಟೋಣ್ಣೆ, ಗ್ರಾಪಂ ಅಧ್ಯಕ್ಷೆ ಸುಶೀಲಾ ಮಹೇಶ ಸಜ್ಜನಶೇಟ್ಟಿ, ರಾಜೇಶ್ವರ ನಿಟ್ಟೂರೆ, ಡಾ. ಸಂಜುಕುಮಾರ ಜುಮ್ಮಾ, ಗಂಗಾಧರ.ವ್ಹಿ.ಸೋಲ್ಲಾಪೂರೆ, ಲಿಂಗಾನಂದ ಮಹಾಜನ, ಸುರೇಶ ಸೋಲ್ಲಾಪೂರೆ, ಶಿವಾನಂದ ವಡ್ಡೆ, ಶಿವರಾಜ ಝಲ್ಫೆ, ಸಂತೋಷ ಬಿರಾದಾರ, ಪ್ರಕಾಶ ಮಾನಕರಿ, ಶಿವಶರಣಪ್ಪಾ ಚಿಕಮುರ್ಗೆ, ಮಾಧವರಾವ ಚಾಂಗೋಣೆ, ಹಣಮಂತ ಚವ್ಹಾಣ, ಪ್ರವೀಣ ಪಾಟೀಲ್, ಬಾಲಾಜಿ ತೇಲಂಗ, ಆನಂದ ಚವ್ಹಾಣ, ಬಾಬುರಾವ ದಾನಿ ಹಾಗೂ ಅನೇಕರು ಪಾಲ್ಗೊಂಡಿದ್ದರು.

ಮಡಿವಾಳಪ್ಪ ಮಹಾಜನ, ಪ್ರಭುರಾವ ಕಳಸೆ ಸ್ವಾಗತಿಸಿದರು, ನವಲಿಂಗ ಪಾಟೀಲ್, ಭೀಮರಾವ ಬಿರಾದಾರ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸುತ್ತ-ಮುತ್ತಲಿನ ಗ್ರಾಮಗಳ ಬಸವ ಭಕ್ತರು, ಮಹಿಳೆಯರು, ಮಕ್ಕಳು ಹಾಜರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ