ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಆವರಣದಲ್ಲಿ ಭಾನುವಾರ ನಡೆದ ಲಿಂ.ಚನ್ನಬಸವ ಸ್ವಾಮೀಜಿಯವರ ಸ್ಮರಣೋತ್ಸವ ಹಾಗೂ ನುಡಿನಮನ ಕಾರ್ಯಕ್ರಮಲ್ಲಿ ಅವರು ಮಾತನಾಡಿದರು. ಸ್ವಾಮೀಜಿಗಳು ತಮ್ಮಲ್ಲಿರುವ ಜ್ಞಾನವನ್ನು ಯಾವುದೇ ಜಾತಿ-ಭೇದ, ಬಡವ-ಶ್ರೀಮಂತ ಅನ್ನದೇ ಎಲ್ಲರಿಗೂ ಹಂಚುವ ಸ್ವಭಾವ ಹೊಂದಿದ್ದರು. ಜಗತ್ತಿನ ಹಿತಕ್ಕಾಗೆ ಬದುಕಿದ ಶ್ರೀಗಳಾಗಿದ್ದರು. ಅವರು ಭಕ್ತರ ಉದ್ದಾರಕ್ಕಾಗಿ ಸದಾ ಪಾದಯಾತ್ರೆ ಮಾಡುವ ಸ್ವಭಾವ ಹೊಂದಿದ್ದರು. ಇಡೀ ಭಾರತವನ್ನು ಪಾದಯಾತ್ರೆ ಮೂಲಕ ಸಂಚಾರ ಮಾಡಿದ ಅಪರೂಪದ ಶ್ರೀಗಳು ಇವರಾಗಿದ್ದಾರೆ ಎಂದು ಸ್ಮರಿಸಿದರು.
ಬಾಲ್ಕಿ ಹಿರೇಮಠದ ಡಾ.ಬಸವಲಿಂಗ ಪಟ್ಟದದೇವರು ಮಾತನಾಡಿ, ದಾಸೋಹಕ್ಕೆ ಇನ್ನೊಂದು ಹೆಸರಾಗಿದ್ದ ಚನ್ನಬಸವ ಸ್ವಾಮಿಗಳು, ದಾಸೋಹ ಹಾಗೂ ಜ್ಞಾನದಾಸೋಹವನ್ನು ಕೊಟ್ಟ ಕರ್ನಾಟಕದ ಕರ್ನಾಟಕದ ಕೆಲವೇ ಮಠಾಧೀಶರಲ್ಲಿ ಇವರು ಪ್ರಮುಖರಾಗಿದ್ದರು ಎಂದು ಹೇಳಿದರು. ಅಷ್ಟಾವರಣ ಹಾಗೂ ಪಂಚಾಚಾರ್ಯಗಳನ್ನು ಚೆನ್ನಾಗಿ ತಿಳಿದವರಾಗಿದ್ದ ಅವರು ಬದುಕಿನುದ್ದಕ್ಕೂ ಶರಣರ ವಚನಗಳನ್ನೇ ಉಸಿರಾಗಿಸಿಕೊಂಡು ಜೀವನ ಸಾಗಿಸಿದರು. ನಡೆ-ನುಡಿ ಒಂದಾಗಿದ್ದ ಅಪರೂಪದ ಮಠಾಧೀಶರು ಅವರಾಗಿದ್ದರು. ಅವರು ನೀಡಿರುವ ಮಾರ್ಗದರ್ಶನದಲ್ಲಿ ಈಗಿರುವ ಮಠಾಧೀಶರು ನಡೆಯುವಂತಾಗಬೇಕೆಂದರು.ಸಿಂದಗಿಯ ಡಾ.ಪ್ರಭುಸಾರಂಗ ಶಿವಾಚಾರ್ಯರು ಸ್ವಾಮೀಜಿ ಮಾತನಾಡಿ, ಲಿಂ.ಚನ್ನಬಸವ ಸ್ವಾಮೀಜಿಯವರು ಸೇವೆ ಮಾಡುವುದು ಅವರ ಮೊದಲ ಕರ್ತವ್ಯವಾಗಿತ್ತು. ಎಲ್ಲರನ್ನೂ ಸೇವೆಗೆ ಹಚ್ಚುವ ಕೆಲಸದಲ್ಲಿ ಅವರು ಮೊದಲಿಗರಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ಅವರಷ್ಟು ಮಾತೃ ಹೃದಯ ಸ್ವಾಮಿಗಳನ್ನು ನಾಡು ಕಂಡಿಲ್ಲ ಎಂದರು. ಶ್ರೀಮಠದ ಕಿರಿಯ ಸ್ವಾಮೀಜಿ ಡಾ.ಸಿದ್ದಲಿಂಗ ಸ್ವಾಮೀಜಿ ಹಿರಿಯ ಶ್ರೀಗಳ ಕುರಿತು ಭಾವುಕರಾಗಿ, ಶ್ರೀಗಳು ದೈಹಿಕವಾಗಿ ನಮ್ಮನ್ನು ಅಗಲಿದರೂ ಅವರು ಮಾನಸಿಕವಾಗಿ ನಮ್ಮೊಂದಿಗೆ ಸದಾ ಇದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವಂತಾಗಬೇಕಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಲಿಂ.ಚನ್ನಬಸವ ಸ್ವಾಮೀಜಿಯವರ ಕರ್ತುೃ ಗದ್ದುಗೆಗೆ ಶ್ರೀಗಳ ಸಮ್ಮುಖದಲ್ಲಿ ಅಭಿಷೇಕ, ಪೂಜೆ ನಡೆಯಿತು. ಭಕ್ತರಿಗೆ ಲಿಂ.ಚನ್ನಬಸವ ಸ್ವಾಮೀಜಿಯವರು ಶ್ರೀಮಠಕ್ಕೆ ಆಗಮಿಸುವ ಭಕ್ತರಿಗೆ ನೀಡುತ್ತಿದ್ದ ಸಜ್ಜಕ-ತುಪ್ಪ, ಅನ್ನ-ಸಾಂಬಾರು ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಆರು ಕ್ವಿಂಟಲ್ ಸಜ್ಜಕ, ಮೂರುವರೆ ಕ್ವಿಂಟಲ್ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.