ನೆಲಮಂಗಲ: ಅವಿರಳ ಜ್ಞಾನಿ ಚನ್ನಬಸವಣ್ಣನವರು ಬದುಕಿದ್ದು ಕೇವಲ 24 ವರ್ಷ. ಅಲ್ಪ ಸಮಯದಲ್ಲಿಯೇ ಅವರು ಸಮಾಜಕ್ಕೆ ಬಿಟ್ಟುಹೋದ ಜ್ಞಾನ ಮತ್ತು ವಚನ ಸಾಹಿತ್ಯದ ಕೊಡುಗೆ ಅಸಾಮಾನ್ಯವಾದುದು ಎಂದು ಸಿದ್ದಲಿಂಗ ಶ್ರೀಗಳು ತಿಳಿಸಿದರು
ನೆಲಮಂಗಲ: ಅವಿರಳ ಜ್ಞಾನಿ ಚನ್ನಬಸವಣ್ಣನವರು ಬದುಕಿದ್ದು ಕೇವಲ 24 ವರ್ಷ. ಅಲ್ಪ ಸಮಯದಲ್ಲಿಯೇ ಅವರು ಸಮಾಜಕ್ಕೆ ಬಿಟ್ಟುಹೋದ ಜ್ಞಾನ ಮತ್ತು ವಚನ ಸಾಹಿತ್ಯದ ಕೊಡುಗೆ ಅಸಾಮಾನ್ಯವಾದುದು ಎಂದು ಸಿದ್ದಲಿಂಗ ಶ್ರೀಗಳು ತಿಳಿಸಿದರು.
ಬಸವಣ್ಣ ದೇವರ ಮಠದಲ್ಲಿ ಅವಿರಳ ಜ್ಞಾನಿ ಚನ್ನಬಸವಣ್ಣ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ ಮತ್ತು ವಚನ ಸಾಹಿತ್ಯದ ಅರಿವು ಮೂಡಿಸುವ ಉದ್ದೇಶದಿಂದ ವಚನ ಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅವಿರಳ ಜ್ಞಾನಿ ಚನ್ನಬಸವಣ್ಣನವರ ಚಿಂತನೆಗಳು ಹಾಗೂ ಕೊಡುಗೆಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ, ಸಂಸ್ಕಾರ ಮತ್ತು ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ 38 ಶಾಲೆಗಳ ಎಲ್‌ಕೆಜಿಯಿಂದ ಒಂದನೇ ತರಗತಿವರೆಗಿನ ಸುಮಾರು 450 ಮಕ್ಕಳು ಭಾಗವಹಿಸಿದ್ದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸಮಾಧಾನಕರ ಬಹುಮಾನ ಹಾಗೂ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಳಗಾವಿಯ ಶ್ರೀ ಜಗದ್ಗುರು ಶೂನ್ಯ ಸಂಪಾದನ ಹುಣಸಿಕೊಳ್ಳ ಮಠದ ಸಿದ್ದಬಸವ ದೇವರು, ಅಡ್ವೆಂಚರ್ ಕಿಡ್ಸ್ ಶಾಲೆಯ ಪಲ್ಲವಿ, ಪಿಇಎಸ್ ಶಾಲೆಯ ದರ್ಶಿನಿ, ಲಿಟಲ್ ಬ್ಲಾಸಂ ಶಾಲೆಯ ಕವಿತಾ, ತೀರ್ಪುಗಾರರಾದ ಅರ್ಚನಾ ಕುಲಕರ್ಣಿ, ಶೃತಿ, ಸಿದ್ದಯ್ಯ ಸಿ.ಎಚ್., ತ್ರಿವೇಣಿ, ಧನಲಕ್ಷ್ಮಿ, ವಿವಿಧ ಶಾಲೆಗಳ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.
ಪೋಟೋ - 13ಕೆಎನ್ಎಲ್ಎಂ1 -
ನೆಲಮಂಗಲದ ಬಸವಣ್ಣ ದೇವರ ಮಠದಲ್ಲಿ ಅವಿರಳ ಜ್ಞಾನಿ ಚನ್ನಬಸವಣ್ಣ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಚಾಲನೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.