- ಅಂಗಡಿ-ಮುಂಗಟ್ಟು ಬಂದ್‌ಗೊಳಿಸಿ ಸಹಕರಿಸಿ: ವಿಹಿಂಪ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಹೆಣ್ಣುಮಕ್ಕಳಿಗೆ ಆಸೆ, ಆಮಿಷಗಳನ್ನೊಡ್ಡಿ ಅವರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯುತ್ತಿದೆ. ಈ ಬಗ್ಗೆ ಸಮಾಜದ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸೋಮವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಗೆ ಪಟ್ಟಣದ ಎಲ್ಲ ವರ್ತಕರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ-ಮುಂಗಟ್ಟುಗಳನ್ನು ಬಂದ್‌ಗೊಳಿಸಿ, ಭಾಗವಹಿಸಬೇಕು ಎಂದು ಮನವಿ ಮಾಡಿದರು.
ವಿಕೃತ ಮನಸ್ಸಿನ ಆರೋಪಿ ವಿರುದ್ಧ ನೊಂದ ಸಂತ್ರಸ್ತೆಯರಿಂದ ದೂರು ಕೊಡಿಸಲು ಎಲ್ಲ ಸಿದ್ಧತೆಗಳು ನಡೆದಿವೆ. ಪೊಲೀಸ್ ಇಲಾಖೆಯವರು ತಕ್ಷಣವೇ ಆರೋಪಿಯ ಅಂಗಡಿ ಬಂದ್ ಮಾಡಿಸಿ, ಪರವಾನಿಗೆ ರದ್ದುಗೊಳಿಸಬೇಕು ಎಂದರು.ಪ್ರತಿಭಟನೆಗೆ ಪಟ್ಟಣದ ವರ್ತಕರ ಸಂಘ, ಎ.ಬಿ.ವಿ.ಪಿ, ಶ್ರೀರಾಮ ಸೇನೆ, ಮಹಿಳಾ ಸಂಘಟನೆಗಳು, ವಿವಿಧ ಕನ್ನಡಪರ ಸಂಘಟನೆಗಳು ಸೇರಿದಂತೆ ಎಲ್ಲ ಹಿಂದೂಪರ ಮತ್ತು ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿವೆ. ಪಟ್ಟಣದಲ್ಲಿರುವ ಎಲ್ಲ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರಾದ ಕೆ.ಆರ್.ಗೋಪಿ, ತರಕಾರಿ ಮಂಜುನಾಥ್, ಕೆ.ಪಿ.ಎಂ. ಲತಾ, ಶಿವಲಿಂಗಪ್ಪ, ಕಮಲಾ ಹರೀಶ್, ಶಶಿಕಲಾ, ಸರೋಜಮ್ಮ, ನಟರಾಜ ರಾಯ್ಕರ್, ನಾಗರಾಜ್, ಮಂಜುನಾಥ್ ಕಾಳೆ, ವಿನಯ್ ಪವಾರ್ ಮೊದಲಾದವರು ಭಾಗವಹಿಸಿದ್ದರು.- - - -1ಕೆಸಿಎನ್ಜಿ3.ಜೆಪಿಜಿ:
ಪತ್ರಿಕಾಗೋಷ್ಠಿಯಲ್ಲಿ ವಿಎಚ್‌ಪಿ ಜಿಲ್ಲಾ ಕೋಶಾಧ್ಯಕ್ಷ ಮಂಜುನಾಥ್ ಮಾತನಾಡಿದರು.